ಬದ್ಧತೆ ಇದ್ದರೆ ಸಾಧನೆ ಸಾಧ್ಯ: ರಾಘವೇಂದ್ರ ಪಾಟೀಲ್

| Published : May 07 2025, 12:47 AM IST

ಸಾರಾಂಶ

ಗುರುಭಕ್ತಿ, ಏಕಾಗ್ರತೆ ಮತ್ತು ತಪೋನಿಷ್ಠೆಯಲ್ಲಿ ಭಗೀರಥ ಮಹರ್ಷಿ ಆದರ್ಶರಾಗಿದ್ದು, ಅವರ ಹಾದಿಯಲ್ಲಿ ನಾವೆಲ್ಲ ಸಾಗಬೇಕು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಗುರುಭಕ್ತಿ, ಏಕಾಗ್ರತೆ ಮತ್ತು ತಪೋನಿಷ್ಠೆಯಲ್ಲಿ ಭಗೀರಥ ಮಹರ್ಷಿ ಆದರ್ಶರಾಗಿದ್ದು, ಅವರ ಹಾದಿಯಲ್ಲಿ ನಾವೆಲ್ಲ ಸಾಗಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಪಾಟೀಲ್ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಮಾಯಣದಲ್ಲಿ ಭಗೀರಥ ಮಹರ್ಷಿಯ ಕಥೆ ಬರುತ್ತದೆ. ಶಿವನ ಜಡೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಪ್ರಯತ್ನಶೀಲತೆಯು ಭಗೀರಥ ಪ್ರಯತ್ನ ಎಂಬ ನುಡಿಗಟ್ಟಾಗಿ ಸ್ಫೂರ್ತಿಯ ಸೆಲೆಯಾಗಿದೆ. ಯಾವುದೇ ಕೆಲಸ ಮಾಡುವಾಗ ಬದ್ಧತೆ ಇದ್ದರೆ ಸಾಧನೆ ಸಾಧ್ಯ ಎಂಬುದಕ್ಕೆ ಭಗೀರಥ ಮಹರ್ಷಿ ಒಳ್ಳೆಯ ನಿದರ್ಶನ ಎಂದರು.

ಉಪ್ಪಾರ ಭಗೀರಥ ಸಮಾಜದ ತಾಲೂಕು ಅಧ್ಯಕ್ಷ ಯು.ರುದ್ರಪ್ಪ ಮಾತನಾಡಿ, ಜಾತಿಗಣತಿಯಲ್ಲಿ ರಾಜ್ಯದ ಉಪ್ಪಾರ ಸಮುದಾಯದ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ತೋರಿಸಿದೆ. ಇದನ್ನ ಸರಿಪಡಿಸಬೇಕಿದೆ. ಪಟ್ಟಣದಲ್ಲಿ ಭಗೀರಥ ಸಮುದಾಯ ಭವನ ನಿರ್ಮಿಸಲು ನಿವೇಶನ ಅನುದಾನ ಒದಗಿಸಬೇಕು. ಭಗೀರಥ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ನಮ್ಮ ಸಮುದಾಯದ ಏಳಿಗೆಗೆ ಸರ್ಕಾರ ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ತಹಸೀಲ್ದಾರ್ ಶಿವರಾಜ್ ಶಿವಪುರ, ಉಪ್ಪಾರ ಭಗೀರಥ ಸಮುದಾಯದ ಪ್ರಮುಖರಾದ ಯು.ಬಸವರಾಜ, ಯು.ದೊಡ್ಡಬಸಪ್ಪ, ಯು.ಮಹೇಶ್, ಯು.ಮಂಜುನಾಥ, ಈರಣ್ಣ, ಮುನಿಯಪ್ಪ, ಎಸ್.ಜಾನಪ್ಪ, ಯು.ವೆಂಕಟೇಶ, ಗೋವಿಂದ, ಯು.ಗೋಪಾಲ ಸೇರಿ ತಾಲೂಕಿನ ಉಪ್ಪಾರ ಸಮುದಾಯದವರು, ಕಂದಾಯ ಅಧಿಕಾರಿ ವೈ.ಎಂ. ಜಗದೀಶ, ಶಿರಸ್ತೆದಾರ್ ಎಸ್.ಡಿ. ರಮೇಶ, ನಿಲಯಪಾಲಕ ಕೆ.ವಿರುಪಾಕ್ಷಿ, ಕಂದಾಯ ಸಿಬ್ಬಂದಿ ಮಾಲತೇಶ ದೇಶಪಾಂಡೆ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.