ನಿಮ್ಮ ಪೋಷಕರ ಶ್ರಮಕ್ಕೆ ನೀವು ನೀಡುವ ನಿಜವಾದ ಗೌರವವೆಂದರೆ ನಿಮ್ಮ ಉತ್ತಮ ಸಾಧನೆ. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬೇಡಿ. ಇತ್ತೀಚಿನ ದಿನಗಳಲ್ಲಿ ಕಾಲೇಜು ಮುಗಿದ ತಕ್ಷಣ ಅಥವಾ ಬಿಡುವಿನ ಸಮಯದಲ್ಲಿ ತಪ್ಪು ದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಹಾಳು ಮಾಡುತ್ತದೆ, ಆದ್ದರಿಂದ ಉತ್ತಮ ಸ್ನೇಹಿತರ ಸಹವಾಸ ಮಾಡಿರಿ ಮತ್ತು ಜಾಗೃತರಾಗಿರಿ ಎಂದು ಶಾಸಕ ಎಚ್. ಡಿ. ರೇವಣ್ಣ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರನಿಮ್ಮ ಪೋಷಕರ ಶ್ರಮಕ್ಕೆ ನೀವು ನೀಡುವ ನಿಜವಾದ ಗೌರವವೆಂದರೆ ನಿಮ್ಮ ಉತ್ತಮ ಸಾಧನೆ. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬೇಡಿ. ಇತ್ತೀಚಿನ ದಿನಗಳಲ್ಲಿ ಕಾಲೇಜು ಮುಗಿದ ತಕ್ಷಣ ಅಥವಾ ಬಿಡುವಿನ ಸಮಯದಲ್ಲಿ ತಪ್ಪು ದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಹಾಳು ಮಾಡುತ್ತದೆ, ಆದ್ದರಿಂದ ಉತ್ತಮ ಸ್ನೇಹಿತರ ಸಹವಾಸ ಮಾಡಿರಿ ಮತ್ತು ಜಾಗೃತರಾಗಿರಿ ಎಂದು ಶಾಸಕ ಎಚ್. ಡಿ. ರೇವಣ್ಣ ಕಿವಿಮಾತು ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಸ್ಕೌಟ್ಸ್ , ಗೈಡ್ಸ್, ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಕ್ಷೇತ್ರದಲ್ಲಿ ಶಿಕ್ಷಣದ ಬೆಳವಣಿಗೆಯನ್ನು ನೋಡಿದಾಗ ನನಗೆ ಹೆಮ್ಮೆ ಎನಿಸುತ್ತದೆ. ನಮ್ಮ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳು, ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಈ ಭಾಗದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶಿಕ್ಷಣ ಎನ್ನುವುದು ಪ್ರತಿಯೊಬ್ಬ ಮಗುವಿನ ಭವಿಷ್ಯವನ್ನು ರೂಪಿಸುವ ದಿವ್ಯ ಶಕ್ತಿ. ಸಮಾಜದಲ್ಲಿ ಪ್ರತಿಯೊಬ್ಬ ಪೋಷಕರು, ಅವರು ಎಷ್ಟೇ ಬಡವರಾಗಿರಲಿ, ತಾವೇ ಕಷ್ಟಪಟ್ಟು ಕೂಲಿ ಮಾಡಿ ಬಂದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ತಮ್ಮ ಮಕ್ಕಳು ಉನ್ನತ ಪದವಿಗಳನ್ನು ಪಡೆದು ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕೆಂಬುದು ಅವರ ಆಸೆಯಾಗಿದೆ.ನಿಮ್ಮ ತಂದೆ ತಾಯಿ ನಿಮಗಾಗಿ ಪಡುತ್ತಿರುವ ಶ್ರಮವನ್ನು ನೀವು ಎಂದಿಗೂ ಮರೆಯಬಾರದು. ಅವರ ಆಸೆಗಳನ್ನು ಈಡೇರಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು. ನಮ್ಮ ತಾಲೂಕಿನ ಯುವಕನೊಬ್ಬ ತಾಯಿಯ ಕೂಲಿ ಕೆಲಸದ ಕಷ್ಟವನ್ನು ಕಂಡು, ಶ್ರದ್ಧೆಯಿಂದ ಓದಿ ಇಂದು ಕೆ.ಎ.ಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವುದೇ ನಿಮಗೊಂದು ಅತ್ಯುತ್ತಮ ಉದಾಹರಣೆ ಮತ್ತು ನಿರಂತರ ಪರಿಶ್ರಮವಿದ್ದರೆ ಸಾಮಾನ್ಯ ಕುಟುಂಬದ ಮಗುವೂ ಸಹ ದೊಡ್ಡ ಸಾಧನೆ ಮಾಡಬಹುದು ಎಂದರು. ನಾನು ಸರ್ಕಾರದ ಹಾಗೂ ವಿಶ್ವವಿದ್ಯಾಲಯದ ಉಪಕುಲಪತಿಗಳಲ್ಲಿ ವಿನಂತಿಸುವುದೇನೆಂದರೆ, ಕೇವಲ ಸಾಂಪ್ರದಾಯಿಕ ಪದವಿಗಳಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುವಂತಹ ಹೊಸ ತಾಂತ್ರಿಕ ಹಾಗೂ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ನಮ್ಮ ಕಾಲೇಜುಗಳಲ್ಲಿ ಪರಿಚಯಿಸಬೇಕು. ಗ್ರಾಮೀಣ ಭಾಗದ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಜತೆಗೆ ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವುದ? ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಹೊರಹೊಮ್ಮಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಎಸ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಆರಕ್ಷಕ ವೃತ್ತ ನಿರೀಕ್ಷಕರಾದ ಸಂತೋ?ರವರು, ನಿ. ಪ್ರಾಂಶುಪಾಲ ಯೋಗಾನರಸಿಂಹ, ಕಾಲೇಜು ಅಧೀಕ್ಷಕ ಜನಾರ್ಧನ್ ಕೆ.ಎಸ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಲೋಲಾಕ್ಷಿ ಡಿ.ಎಸ್., ಡಾ. ಐಕ್ಯೂಎಸಿ ಸಂಚಾಲಕ ಡಾ. ಸಿದ್ದರಾಮು ಆರ್., ಎನ್‌ಸಿಸಿ ಅಧಿಕಾರಿಡಾ. ಹರೀಶ ಎಚ್. ಎನ್., ರೋವರ್ಸ್ & ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ. ಉದಯಕುಮಾರ ಎಂ., ಕ್ರೀಡೆ & ರೇಂಜರ್ಸ್ ಘಟಕ ಸಂಚಾಲಕಿ ಪೂರ್ಣಿಮ ಎಚ್. ವಿ., ಎನ್‌ಎಸ್‌ಎಸ್ ಅಧಿಕಾರಿ ಡಿ.ಎನ್.ಮಧುಸೂದನ್, ಇತರರು ಇದ್ದರು.