ಸಾರಾಂಶ
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ 40ನೇ ರಾಜ್ಯರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್ಸ್ 2024ನ್ನು ಆಯೋಜಿಸಲಾಯಿತು. ಈ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ಸ್ಕೇಟರ್‌ಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ 40ನೇ ರಾಜ್ಯರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್ಸ್ 2024ನ್ನು ಆಯೋಜಿಸಲಾಯಿತು. ಈ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ಸ್ಕೇಟರ್‌ಗಳು ಭಾಗವಹಿಸಿದ್ದರು. ನ.7ರಿಂದ 11ರವರೆಗೆ ಮೈಸೂರು, ಬೆಂಗಳೂರು ಮತ್ತು ತುಮಕೂರಿನಲ್ಲಿ ಆಯೋಜಿಸಿದ್ದ ಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ಸ್ಕೇಟರ್‌ಗಳು 22 ಚಿನ್ನ, 10 ಬೆಳ್ಳಿ, 20 ಕಂಚು ಪದಕ ಗೆದ್ದಿದ್ದಾರೆ. ಒಟ್ಟು 15 ಜಿಲ್ಲೆಗಳ 800ಕ್ಕೂ ಹೆಚ್ಚು ಸ್ಕೇಟರ್‌ಗಳು ಸ್ಪರ್ಧಿಸಿದ್ದರು.ಪದಕ ವಿಜೇತರು:
ವೇಗದ ಸ್ಕೇಟರ್ಸ್: ಅವನೇಶ ಕಮಣ್ಣವರ-2 ಕಂಚು, ವೀರ್ ಮೋಕಾಶಿ-1 ಕಂಚು, ಆರ್ಯ ಕದಂ-3 ಕಂಚು, ಭವ್ಯಾ ಪಾಟೀಲ-1 ಕಂಚು, ಸತ್ಯಂ ಪಾಟೀಲ-1 ಕಂಚು, ಸೌರಭ ಸಲೋಖೆ-1 ಚಿನ್ನ, 1ಕಂಚು, ಪ್ರಾಂಜಲ ಪಾಟೀಲ-1 ಕಂಚು, ಆರಾಧ್ಯಾ ಪಿ.-1 ಚಿನ್ನ, 1 ಕಂಚು, ಅಂಗಾ ಜೋಶಿ-1, ಬೆಳ್ಳಿ, 1 ಕಂಚು, ಜಾಹ್ನವಿ ತೆಂಡೋಲ್ಕರ-2 ಬೆಳ್ಳಿ, 1ಕಂಚು ವಿಶಾಖಾ ಫುಲ್ವಾಲೆ-2 ಕಂಚು.ಇನ್‌ಲೈನ್ ಫ್ರೀ ಸ್ಟೈಲ್ ಸ್ಕೇಟರ್ಸ್: ಹಿರೇನ್ ಎಸ್. ರಾಜ್ -2 ಚಿನ್ನ, ಅಥರ್ವ ಹಡಪದ-2 ಬೆಳ್ಳಿ, ಅವನೇಶ ಕೋರಿಶೆಟ್ಟಿ-1 ಚಿನ್ನ, 1 ಬೆಳ್ಳಿ,ದೃಷ್ಟಿ ಅಂಕಲೆ-2 ಬೆಳ್ಳಿ, ವಿಜಲ್‌ವಾಲ್ ಸಾಯಿ-2 ಕಂಚು, ಜೈಧ್ಯಾನ್ ಎಸ್.ರಾಜ್- 2 ಚಿನ್ನ, ರಶ್ಮಿತಾ ಅಂಬಿಗಾ-2 ಚಿನ್ನ, ದೇವೇನ್ ಬಮನೆ-2 ಚಿನ್ನ, ಅಭಿಷೇಕ್ ನವಲೆ-1 ಬೆಳ್ಳಿ.ರೋಲರ್ ಡರ್ಬಿ ಸ್ಕೇಟರ್ಸ್: ಅನುಷ್ಕಾ ಶಂಕರ್ಗೌಡ-1 ಚಿನ್ನ, ಖುಷಿ ಘೋಟಿವ್ರೇಕರ್-1 ಚಿನ್ನ, ಶೆಫಾಲಿ ಶಂಕರ್ಗೌಡ-1 ಚಿನ್ನ, ಅನ್ವಿ ಸೋನಾರ್-1 ಚಿನ್ನ, ಸಾಯಿ ಶಿಂಡೆ-1 ಚಿನ್ನ, ಶರ್ವರಿ ದಡ್ಡಿಕರ-1 ಚಿನ್ನ, ಮುದ್ಲಿಕ್ಕಾ-1 ಚಿನ್ನ.
ಪ್ರತ್ಯೇಕ ಮತ್ತು ಪ್ಯಾರಾ ಸ್ಕೇಟರ್ಸ್:
ಸಾಯಿ ಪಾಟೀಲ-1 ಚಿನ್ನ, ತೀರ್ಥ ಪಚಾಪುರ-1 ಚಿನ್ನ, ಸಿದ್ಧಾರ್ಥ ಕಾಲೆ- 1 ಚಿನ್ನ, ವಿರಾಜ್ ಪಾಟೀಲ್-1 ಕಂಚು, ಸ್ವಾಯಂ ಪಾಟೀಲ-1 ಕಂಚು. ಆಲ್ಪೈನ್ ಸ್ಕೇಟರ್, ಸೈರಾಜ್ ಮೆಂಡಕೆ-1 ಬೆಳ್ಳಿ. ಕಲಾತ್ಮಕ ಸ್ಕೇಟರ್: ಖುಷಿ ಅಗಶಿಮನಿ-1 ಚಿನ್ನ, 1 ಕಂಚು.ಈ ಎಲ್ಲಾ ಸ್ಕೇಟರ್ಸ್‌ಗಳು ಕೆಎಲ್‌ಇ ಸ್ಕೇಟಿಂಗ್ ರಿಂಕ್ ಮತ್ತು ಗುಡ್ ಶೆಪರ್ಡ್ ಸ್ಕೇಟಿಂಗ್ ರಿಂಕ್, ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕೋಚ್ ಸೂರ್ಯಕಾಂತ್ ಹಿಂಡಲಗೇಕರ, ಯೋಗೇಶ ಕುಲಕರ್ಣಿ, ವಿಶಾಲ ವೇಶನೇ, ಮಂಜುನಾಥ ಮಂಡೋಲ್ಕರ್, ವಿತ್ತಲ ಗಗನೇ, ಅನುಷ್ಕಾ ಶಂಕರಗೌಡ ಮತ್ತು ವಿಶ್ವನಾಥ್ ಯಳ್ಳೂರಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಡಾ.ಪ್ರಭಾಕರ ಕೋರೆ, ಮಾಜಿ ಶಾಸಕರಾದ ಶಾಮ್ ಘಾಟಗೆ, ರಾಜ್ ಘಾಟಗೆ, ಉಮೇಶ ಕಲಘಟಗಿ, ಪ್ರಸಾದ ತೆಂಡೋಲ್ಕರ ಮತ್ತು ಇಂದುಧರ ಸೀತಾರಮ (ಸಾಮಾನ್ಯ ಕಾರ್ಯದರ್ಶಿ, ಕೆಆರ್‌ಎಸ್‌ಎ) ಪ್ರೋತ್ಸಾಹ ನೀಡಿದ್ದಾರೆ.