ಕ್ರೀಡಾಕೂಟದಲ್ಲಿ ವಿಶೇಷಚೇತನ ಮಕ್ಕಳ ಸಾಧನೆ

| Published : Jan 17 2025, 12:49 AM IST

ಸಾರಾಂಶ

ರಾಮನಗರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಶೇಷಚೇತನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಾಮನಗರ ಜಿಲ್ಲೆಯ ವಿಶೇಷಚೇತನ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ 10 ಬಹುಮಾನ ಪಡೆದಿದ್ದಾರೆ.

ರಾಮನಗರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಶೇಷಚೇತನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಾಮನಗರ ಜಿಲ್ಲೆಯ ವಿಶೇಷಚೇತನ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ 10 ಬಹುಮಾನ ಪಡೆದಿದ್ದಾರೆ.

ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಮೂವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರೆ, ನಾಲ್ವರು ದ್ವಿತೀಯ ಬಹುಮಾನ, ಮೂವರು ಮೂರನೇ ಬಹುಮಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಪೂರ್ಣ ಅಂಧರ 14 ವರ್ಷದೊಳಗಿನ ಜಾವೆಲಿನ್ ಸ್ಪರ್ಧೆಯಲ್ಲಿ ಬಸಮ್ಮ(ಪ್ರಥಮ), ಭಾಗಃ ಅಂಧರ 14 ವರ್ಷದೊಳಗಿನ ಜಾವೆಲಿನ್ ಸ್ಪರ್ಧೆಯಲ್ಲಿ ಸ್ಪಂದನಾ(ಪ್ರಥಮ), ಪೂರ್ಣ ಅಂಧರ 17 ವರ್ಷದೊಳಗಿನ ಜಾವೆಲಿನ್ ಸ್ಪರ್ಧೆಯಲ್ಲಿ ನಿರ್ಮಲಾ(ದ್ವಿತೀಯ), ಭಾಗಃ ಅಂಧರ 17 ವರ್ಷದೊಳಗಿನ ಜಾವೆಲಿನ್ ಸ್ಪರ್ಧೆಯಲ್ಲಿ ಪ್ರಿಯಾಂಕ(ದ್ವಿತೀಯ), ಭಾಗಶ ಅಂಧರ 17 ವರ್ಷದೊಳಗಿನ ಗುಂಡು ಎಸೆತ ಸ್ಪರ್ಥೆಯಲ್ಲಿ ಪ್ರಿಯಾಂಕ(ತೃತೀಯ), ವಾಕ್ ಶ್ರವಣ ದೋಷ 14 ವರ್ಷದೊಳಗಿನ 50 ಮೀಟರ್ ಓಟದಲ್ಲಿ ರಂಜಿತಾ(ಪ್ರಥಮ) ಬಹುಮಾನ ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಪೂರ್ಣ ಅಂಧರ 17 ವರ್ಷದೊಳಗಿನ ಗುಂಡು ಎಸೆತ ಸ್ಪರ್ಧೆಯಲ್ಲಿ ಕೃಷ್ಣ (ದ್ವಿತೀಯ), ಪೂರ್ಣ ಅಂಧರ 14 ವರ್ಷದೊಳಗಿನ ಗುಂಡು ಎಸೆತದಲ್ಲಿ ಆನಂದ್ (ತೃತೀಯ), ಪೂರ್ಣ ಅಂಧರ 17 ವರ್ಷದೊಳಗಿನ ಜಾವೆಲಿನ್ ಸ್ಪರ್ಧೆಯಲ್ಲಿ ಅಂಜನ್ ಕುಮಾರ್ (ದ್ವಿತೀಯ), ವಾಕ್ ಶ್ರವಣ ದೋಷ 17 ವರ್ಷದೊಳಗಿನ ಜಾವೆಲಿನ್ ಸ್ಪರ್ದೆಯಲ್ಲಿ ಪ್ರವೀಣ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

16ಕೆಆರ್ ಎಂಎನ್ 3.ಜೆಪಿಜಿ

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಶೇಷ ಚೇತನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ 10 ಬಹುಮಾನಗಳನ್ನು ಗೆದ್ದ ರಾಮನಗರ ಜಿಲ್ಲೆಯ ವಿಶೇಷ ಚೇತನ ಮಕ್ಕಳು.