ಸಾರಾಂಶ
ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದ ವಿದ್ಯಾರ್ಥಿನಿ ಅಶ್ವಿನಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಸಮುದಾಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹನೂರು: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸಮುದಾಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದ ಕೂಲಿ ಕಾರ್ಮಿಕ ಬಸವರಾಜ್ ನಾಯಕ್ ಮತ್ತು ತನುಜಾಬಾಯಿ ಪುತ್ರಿ ಅಶ್ವಿನಿ ಕಲಾ ವಿಭಾಗದಲ್ಲಿ 573 ಅಂಕಗಳನ್ನು ಪಡೆದು ಚಾಮರಾಜನಗರ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆದಿರುವ ವಿದ್ಯಾರ್ಥಿನಿಗೆ ಜಿಲ್ಲಾ ಲಂಬಾಣಿ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕೂಲಿ ಕಾರ್ಮಿಕರ ಮಗಳು ಜಿಲ್ಲೆಗೆ ಟಾಪರ್:
ಅಶ್ವಿನಿ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪಾಲಕರು ಕೂಲಿ ಮಾಡಿ ಮಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ಕಲಾ ವಿಭಾಗದಲ್ಲಿ 573 ಅಂಕಗಳನ್ನು ಪಡೆದು ಚಾಮರಾಜನಗರ ಜಿಲ್ಲೆಯಲ್ಲಿಯೇ ಕಲಾವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಕೂಲಿ ಕಾರ್ಮಿಕನ ಮಗಳು ಜಿಲ್ಲೆಗೆ ಟಾಪರ್ ಆಗಿರುವುದರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.ಸಂಘ ಸಂಸ್ಥೆ ಗ್ರಾಮಸ್ಥರಿಂದ ಸನ್ಮಾನ:
ಕಲಾ ವಿಭಾಗದಲ್ಲಿ ದಿನ್ನಳ್ಳಿ ಗ್ರಾಮದ ಗುಡ್ಡಗಾಡು ಪ್ರದೇಶದಿಂದ ಉತ್ತಮ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ ನಿಸರ್ಗ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿ ಅಶ್ವಿನಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿನಿಗೆ ಜಿಲ್ಲಾ ಲಂಬಾಣಿ ನೌಕರರ ಸಂಘದ ವತಿಯಿಂದ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಲಂಬಾಣಿ ಸಂಘದ ಶಾಂತರಾಜು ಕೃಷ್ಣ ನಾಯಕ್, ಶಿವಕುಮಾರ್, ರಾಮಾಜಿನಾಯಕ, ಗ್ರಾಮದ ಮುಖಂಡರಾದ ರವಿ ನಾಯಕ,ಮುರುಗೇಶ್, ವಾಲು ನಾಯಕ, ಸ್ವರ ಬಂಡನ ಕೊಪ್ಪ ಮಹಾಮಠದ ನಿರ್ದೇಶಕ ಕೃಷ್ಣ ನಾಯಕ್ ಗ್ರಾಮಸ್ಥರು ವಿದ್ಯಾರ್ಥಿಗೆ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.