ಸಾರಾಂಶ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಉತ್ತಮ ಗುರಿ ಮೂಲಕ ಸಾಧನೆ ಸಾಧ್ಯವಿದೆ ಎಂದು ಯಾದಗಿರಿ ಇಎಸ್‍ಐ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಗದೇವಿ ವಿ. ಜ್ಯೋತಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಉತ್ತಮ ಗುರಿ ಮೂಲಕ ಸಾಧನೆ ಸಾಧ್ಯವಿದೆ ಎಂದು ಯಾದಗಿರಿ ಇಎಸ್‍ಐ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಗದೇವಿ ವಿ. ಜ್ಯೋತಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಆಯೋಜಿಸಿದ್ದ ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಇಂದು ಸಾಕಷ್ಟು ಜವಾಬ್ದಾರಿಗಳಿವೆ. ಕೌಟಂಬಿಕ ನಿರ್ವಹಣೆ ಜೊತೆಗೆ ಸಮಾಜವನ್ನು ಮಾನವೀಯ ಮೌಲ್ಯಗಳ ಮೇಲೆ ಕಟ್ಟುವ ಬಹುದೊಡ್ಡ ಜವಾಬ್ದಾರಿಗಳಿವೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ವಿಭಾಗದ ಸಂಯೋಜಕಿ ಜ್ಯೋತೊ ಕೆ, ಉಪನ್ಯಾಸಕ ಡಾ. ಪ್ರಕಾಶ್ ಎಂ. ಬಡಿಗೇರ್ ಮಾತನಾಡಿದರು. ಎಂಎ ಇತಿಹಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಶ್ವೇತಾ ಹಾಗೂ ಭಾಗ್ಯಲಕ್ಷ್ಮಿ ಅನಿಸಿಕೆ ಹಂಚಿಕೊಂಡರು.ಡಾ. ಸೂರ್ಯಕಾಂತ ಸೊನ್ನದ, ಡಾ. ಪ್ರಕಾಶ ಪಾಟೀಲ, ಡಾ. ಚಂದ್ರಶೇಖರ್, ಅಣವೀರಪ್ಪ ಬೋಳೆವಾಡ ಹಾಗೂ ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ನಗರದ ಜೇವರ್ಗಿ ಕಾಲೋನಿಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಡಾ. ಜಗದೇವಿ ವಿ. ಪೂಜಾರಿ ಉದ್ಘಾಟಿಸಿದರು. ಪತ್ರಕರ್ತ ಬಾಬುರಾವ ಯಡ್ರಾಮಿ, ಡಾ. ಪ್ರಕಾಶ ಮೋರಗೆ, ಡಾ. ಜ್ಯೋತಿ ಕೆ. ಎಸ್., ಡಾ. ಪ್ರಕಾಶ ಬಡಿಗೇರ ಸೇರಿದಂತೆ ಮುಂತಾದವರಿದ್ದರು.