ಕ್ರೀಡಾಕೂಟದಲ್ಲಿ ಜೆಜೆ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

| Published : Oct 15 2025, 02:06 AM IST

ಕ್ರೀಡಾಕೂಟದಲ್ಲಿ ಜೆಜೆ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಮೂರು ರಾಜ್ಯಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ 100 ಮೀಟರ್ ಓಟ ಮತ್ತು ಮತ್ತು ಉದ್ದ ಜಿಗಿತ ಸ್ಪರ್ಧೆಯಲ್ಲಿ ಮಹಮದ್ ಶಾಹಿದ್ ಪ್ರಥಮ ಸ್ಥಾನ ಪಡೆದಿದ್ದಾನೆ. ಗುಂಡು ಎಸೆತದಲ್ಲಿ ವಿ.ಧನ್ಯತಾ ಪ್ರಥಮ ಸ್ಥಾನ ಪಡೆದಿದ್ದಾಳೆ.

ಹಲಗೂರು:

ವಿದ್ಯಾ ಭಾರತಿ ವತಿಯಿಂದ ಇತ್ತೀಚಿಗೆ ಬೆಂಗಳೂರಿನ ಚನ್ನೇನಹಳ್ಳಿ ಜನಸ್ನೇಹಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಂಶುಪಾಲೆ ಕೆ.ಎನ್‌.ಲಲಿತಾಂಭ ತಿಳಿಸಿದರು.

ಹಲಗೂರಿನ ಜೆ.ಜೆ.ಪಬ್ಲಿಕ್ ಸ್ಕೂಲ್ ಶಾಲಾ ಅವರಣದಲ್ಲಿ ಮಾತನಾಡಿದ ಅವರು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಮೂರು ರಾಜ್ಯಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ 100 ಮೀಟರ್ ಓಟ ಮತ್ತು ಮತ್ತು ಉದ್ದ ಜಿಗಿತ ಸ್ಪರ್ಧೆಯಲ್ಲಿ ಮಹಮದ್ ಶಾಹಿದ್ ಪ್ರಥಮ ಸ್ಥಾನ ಪಡೆದಿದ್ದಾನೆ. ಗುಂಡು ಎಸೆತದಲ್ಲಿ ವಿ.ಧನ್ಯತಾ ಪ್ರಥಮ ಸ್ಥಾನ ಪಡೆದಿದ್ದಾಳೆ. ಮುಂದಿನ ದಿನ ರಾಷ್ಟ್ರ ಮಟ್ಟದಲ್ಲಿಯೂ ಗೆದ್ದು ಬರಲಿ ಎಂದು ಅಶಿಸಿದರು.

ಈ ವೇಳೆ ವಳ್ಳಳ್ಳಿ ಎಜುಕೇಷನ್‌ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಭ, ಸಂಯೋಜಕ ವಿಕಾಶ್, ದೈಹಿಕ ಶಿಕ್ಷಕ ರಾಜಶೇಖರಮೂರ್ತಿ ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಎನ್.ಹೊನ್ನು ಉತ್ತಮ ಪ್ರದರ್ಶನ

ಪಾಂಡವಪುರ:

ರಾಜ್ಯ ಮಟ್ಟದ ಬಾಲಕಿಯರ 17 ವರ್ಷದೊಳಗಿನ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಕಬಡ್ಡಿ ಆಟಗಾರ ನಿರಂಜನ್ ಪುತ್ರಿ ಎನ್.ಹೊನ್ನು ಉತ್ತಮ ಪ್ರದರ್ಶನದೊಂದಿಗೆ ತಂಡಕ್ಕೆ ಚಿನ್ನದ ಪದಕ ಹಾಗೂ ಪ್ರಥಮ ಸ್ಥಾನ ಪಡೆದುಕೊಂಡಿದೆ.

ತುಮಕೂರು ಜಿಲ್ಲೆ ಮಾಯಸಂದ್ರ ಟಿಬಿಯ ಎಸ್ ಬಿಜಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕ್ರೀಡಾಪಟು ಎನ್.ಹೊನ್ನು ನೇತೃತ್ವದ ಶಾಲೆ ತಂಡ, ಮಾಯಸಂದ್ರದಲ್ಲೇ ನಡೆದ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಈ ತಂಡ ಸತತವಾಗಿ ಎರಡನೇ ಬಾರಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಗುಜರಾತ್ ರಾಜ್ಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟು ಎನ್.ಹೊನ್ನುಗೆ ಶ್ರೀಪ್ರಸನ್ನನಂದನಾಥ ಸ್ವಾಮೀಜಿ, ತರಬೇತುದಾರರಾದ ಚಿಕ್ಕಮರಳಿ ಉದಯ್, ಕೂಡಲಕು ಪ್ಪೆ ಮಹದೇವ್, ಶಾಲೆಯ ಪ್ರಾಂಶುಪಾಲ, ಶಿಕ್ಷಕರ ವರ್ಗ ಮತ್ತು ಎಣ್ಣೆಹೊಳೆಕೊಪ್ಪಲು ಹಾಗೂ ಕೆನ್ನಾಳು ಗ್ರಾಮಸ್ಥರು ಅಭಿನಂದಿಸಿ ಶುಭಕೋರಿದ್ದಾರೆ.