ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ತೇರದಾಳ ಪಟ್ಟಣದ ಎಸ್.ಡಿ.ಎಂ ಟ್ರಸ್ಟ್ ದಾನಿಗೊಂಡ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಬೇಸಿಕ್ ನರ್ಸಿಂಗ್ ೬ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆದಿದ್ದಾರೆ.

ಎಸ್.ಡಿ.ಎಂ. ಟ್ರಸ್ಟ್ ದಾನಿಗೊಂಡ ಕಾಲೇಜ್ ಆಫ್ ನರ್ಸಿಂಗ್ ತೇರದಾಳ ೪ನೇ ವರ್ಷದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು, ಒಟ್ಟು ೩೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೩೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, ೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ರ‍್ಯಾಂಕ್ ಪಲ್ಲವಿ ಪೂಜೇರಿ ಪ್ರಥಮ ರ್‍ಯಾಂಕ್‌, ತೇಜಸ್ವಿನಿ ಕಾಂಬಳೆ ದ್ವಿತೀಯ ಮತ್ತು ಅಮೃತಾ ಬನ್ನಿಗಿಡದ ತೃತೀಯ ರ್‍ಯಾಂಕ್‌ ಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಚೇರಮನ್ ಡಾ.ಮಹಾವೀರ ಎಸ್. ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ಎಂ. ದಾನಿಗೊಂಡ, ಕಾಲೇಜಿನ ಪ್ರಾಚಾರ್ಯೆ ಡಾ.ಅನ್ನಪೂರ್ಣಾ ಎಸ್. ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.