ಸಾಧಕರಿಂದ ಕುಷ್ಟಗಿ ಹಿರಿಮೆ ಹೆಚ್ಚಳ

| Published : Nov 24 2025, 02:45 AM IST

ಸಾರಾಂಶ

ಮೂವರು ಜನ ಸಾಧಕರಾದ ಶೇಖರಗೌಡ ಮಾಲಿಪಾಟೀಲ, ಶತಾಯುಷಿ ಬಸಪ್ಪ ಚೌಡ್ಕಿ ಹಾಗೂ ಮಹಾಲಿಂಗಪ್ಪ ದೋಟಿಹಾಳ ಅಪಾರ ಸಾಧನೆಗೈದು ಈ ವರ್ಷದ ರಾಜ್ಯೋತ್ಸವ ಹಾಗೂ ಸಹಕಾರ ರತ್ನ ಪ್ರಶಸ್ತಿ ಪಡೆದುಕೊಂಡಿರುವದು ಇತರರಿಗೂ ಮಾದರಿಯಾಗಿದ್ದಾರೆ

ಕುಷ್ಟಗಿ: ಪ್ರಸಕ್ತ ವರ್ಷದ ರಾಜ್ಯೋತ್ಸವ ಹಾಗೂ ಸಹಕಾರ ರತ್ನ ಪ್ರಶಸ್ತಿ ನಮ್ಮ ಕುಷ್ಟಗಿ ತಾಲೂಕಿನ ಮೂವರು ಜನ ಸಾಧಕರಿಗೆ ಲಭಿಸಿರುವದು ತಾಲೂಕಿನ ಹಿರಿಮೆ ಹೆಚ್ಚಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯೋತ್ಸವ ಹಾಗೂ ಸಹಕಾರ ರತ್ನ ಪ್ರಶಸ್ತಿಯ ಸಾಧಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನ ಮೂವರು ಜನ ಸಾಧಕರಾದ ಶೇಖರಗೌಡ ಮಾಲಿಪಾಟೀಲ, ಶತಾಯುಷಿ ಬಸಪ್ಪ ಚೌಡ್ಕಿ ಹಾಗೂ ಮಹಾಲಿಂಗಪ್ಪ ದೋಟಿಹಾಳ ಅಪಾರ ಸಾಧನೆಗೈದು ಈ ವರ್ಷದ ರಾಜ್ಯೋತ್ಸವ ಹಾಗೂ ಸಹಕಾರ ರತ್ನ ಪ್ರಶಸ್ತಿ ಪಡೆದುಕೊಂಡಿರುವದು ಇತರರಿಗೂ ಮಾದರಿಯಾಗಿದ್ದಾರೆ ಎಂದರು.

ಇದೆ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಪ್ಪ ಚೌಡ್ಕಿ,ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮಹಾಲಿಂಗಪ್ಪ ದೋಟಿಹಾಳಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಸಾಪ ಪ್ರತಿನಿಧಿ ಶ್ರೀನಿವಾಸ ಜಹಗೀರದಾರ, ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಅಬ್ದುಲ್‌ ಕರೀಮ್‌ ಒಂಟೇಳಿ, ಬಸವರಾಜ ಗಾಣಿಗೇರ, ಶರಣಪ್ಪ ಲೈನದ್‌, ದೇವರಾಜ ವಿಶ್ವಕರ್ಮ, ಸಂಗಮೇಶ ಲೂತಿಮಠ, ಬಸವರಾಜ ಉಪಲದಿನ್ನಿ, ಭರತೇಶ ಜೋಷಿ, ಅಡಿವೆಪ್ಪ ನೆರೆಬೆಂಚಿ, ಮಂಜುನಾಥ ಗುಳೇದಗುಡ್ಡ, ಭರಮಗೌಡ ಪಾಟೀಲ, ಹಂಪನಗೌಡ ಬಳೂಟಗಿ ಸೇರಿದಂತೆ ಅನೇಕರು ಇದ್ದರು.