ಏಕಾಗ್ರತೆಯಿಂದ ಗುರಿ ಸಾಧನೆ: ಕಿರಣಚಂದ್ರ

| Published : Apr 20 2025, 02:01 AM IST

ಸಾರಾಂಶ

ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಮೂಡುಬಿದಿರೆಯ ಮೈಟ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ವಿಜೇತಾ ಪೈ ಅವರಿಗೆ ಕಾರ್ಕಳ ಹೊಸಸಂಜೆ ಬಳಗ ವತಿಯಿಂದ ಸನ್ಮಾನ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಮತ್ಸ್ಯಯಂತ್ರ ಛೇದನ ಪ್ರಸಂಗದಲ್ಲಿ ಅರ್ಜುನನ ಗುರಿ ಸಾಧನೆ, ಬಿಲ್ಗಾರಿಕೆಯಲ್ಲಿ ಏಕಲವ್ಯನ ಏಕಾಗ್ರತೆ, ಭಕ್ತ ಪ್ರಹ್ಲಾದನ ಅಚಲ ನಂಬಿಕೆ ಇವನ್ನು ವಿದ್ಯಾರ್ಥಿಗಳು ಗಮನದಲ್ಲಿರಿಸಿಕೊಂಡರೆ ಯಶಸ್ಸು ಪ್ರಾಪ್ತಿ ಖಂಡಿತ. ಪ್ರಯತ್ನದಿಂದ ಸಿಗುವ ಅಂತಿಮ ಫಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಕುಟುಂಬ, ಸ್ನೇಹಿತರು, ಸಮಾಜದ ಎಲ್ಲರಿಗೂ ಸಂತಸ ನೀಡುತ್ತದೆ ಎಂದು ಬೆಳ್ತಂಗಡಿಯ ಪುಷ್ಪಗಿರಿ ಶ್ರೀದೇವಿ ನೆರವಿನ ನೆರಳು ಸೇವಾ ಪ್ರತಿಷ್ಠಾನ ಅಧ್ಯಕ್ಷ ಕಿರಣಚಂದ್ರ ಡಿ ಹೇಳಿದರು.

ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಮೂಡುಬಿದಿರೆಯ ಮೈಟ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ವಿಜೇತಾ ಪೈ ಅವರಿಗೆ ಕಾರ್ಕಳ ಹೊಸಸಂಜೆ ಬಳಗ ಆಯೋಜಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ರಿಕ್ಷಾ ಚಾಲಕ ಮಾಲಕರ ಸಂಘ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ತಾಲೂಕು ಬಿಜೆಪಿ ವಕ್ತಾರ, ನ್ಯಾಯವಾದಿ ರವೀಂದ್ರ ಮೊಯ್ಲಿ, ಹಿರಿಯಂಗಡಿ ಎಸ್‌ಎನ್‌ವಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಉಷಾ ಪಡಿವಾಳ್, ಉದ್ಯಮಿ ಚಂದ್ರ ಶೇಖರ ಹೆಗ್ಡೆ, ಸುಧಾಕರ ಪೈ, ಗಾಯತ್ರಿ ನಾಯಕ್, ಹೊಸ ಸಂಜೆ ಬಳಗ ಅಧ್ಯಕ್ಷ ಆರ್. ದೇವರಾಯ ಪ್ರಭು, ವಿಜೇತಾ ಪೈ ಹೆತ್ತವರಾದ ಲಕ್ಷ್ಮೀಶ ಪೈ, ಅಕ್ಷತಾ ಪೈ ಉಪಸ್ಥಿತರಿದ್ದರು.ಶ್ವೇತಾ ಶೆಣೈ ಸ್ವಾಗತಿಸಿದರು. ಅಭಿಜ್ಞಾ ಕಾರ್ಯಕ್ರಮ ನಿರ್ವಹಿಸಿದರು. ದತ್ತಾತ್ರೇಯ ಹಿರಿಯಂಗಡಿ ವಂದಿಸಿದರು.