ಸಾರಾಂಶ
- ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ-2025 ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನಾಡು, ನುಡಿ ಜೊತೆಗೆ ನಮ್ಮ ನಾಡಿನ ಕಲೆ, ಸಂಗೀತ, ಸಾಹಿತ್ಯ ಓದುವ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಎಂದು ಪಟ್ಟಣದ ಲೇಖಕ ಮನಸುಳಿ ಮೋಹನ್ ಕುಮಾರ್ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಯಶೋದಮ್ಮ ನಾಗತಿ ಪ್ರೌಢ ಶಾಲೆ ಆವರಣದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ದುರಭ್ಯಾಸದಿಂದ ದೂರವಿರಬೇಕು. ಮಕ್ಕಳು ಸಮಾಜಕ್ಕೆ ಮಾದರಿ ಯಾಗಬೇಕು ಎಂದು ಹೇಳಿದರು.ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ ತಂದೆ ತಾಯಿ ಗುರುಗಳನ್ನು ಗೌರವದಿಂದ ಕಾಣಬೇಕು, ಪ್ರತಿ ದಿನದ ಕಲಿಕೆ ನಮಗೆ ಜೀವನದ ಅನುಭವವಾಗಿ ಸಾಧಿಸುವ ಛಲ ನಮ್ಮದಾಗಬೇಕು. ಭಾರತ ಮಾತಾಕಿ ಜೈ, ಕನ್ನಾಡಾಂಬೆಗೆ ಜೈ ಎಂದು ಜೈಕಾರ ಹಾಕಿಸಿ ದೇಶಾಭಿಮಾನ ಮತ್ತು ಭಾಷಾಭಿಮಾನದ ಸಂದೇಶ ಸಾರಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ದತ್ತಾತ್ರೇಯ ಮಾತನಾಡಿ ಸರ್ಜಾ ಹನುಮಪ್ಪ ನಾಯಕರು ತರೀಕೆರೆಯ ಇತಿಹಾಸ ಪುರುಷರಾಗಿದ್ದರು. ಸಮಾಜ ಸೇವೆ ಮಾಡುವ ಮೂಲಕ ಜನರ ಪ್ರೀತಿ ಗಳಿಸಿದವರು. ಹುಲಿ ಕಾಳಗ ದಲ್ಲಿ ಗೆದ್ದ ಪರಿಣಾಮ ಸರ್ಜಾ ಎಂಬ ಬಿರುದು ಬಂದಿದೆ ಎಂದು ಹೇಳಿದರು. ಬಾಬಾಬುಡನಗಿರಿ ಮತ್ತು ಕೆಮ್ಮಣ್ಣು ಗುಂಡಿಗೆ ಇವರು ನೀಡಿರುವ ಕೊಡುಗೆ ಅಪಾರ, ಬಾಬಾಬುಡನಗಿರಿಯಿಂದ ನೇರ ಸಂಪರ್ಕ ಸುರಂಗ ಮಾರ್ಗ ಇತ್ತೆಂದು ಉಲ್ಲೇಖಿಸಲಾಗಿದೆ. ಇವರು ರಾಮಕೋಟೆ ಹನುಮಪ್ಪ ನಾಯಕ ಎಂದು ಹೆಸರು ವಾಸಿಯಾಗಿದ್ದರು. ತರೀಕೆರೆ ಪಟ್ಟಣವನ್ನು ಆ ಸಮಯದಲ್ಲೆ ಆಧುನಿಕ ನಗರೀಕರಣದ ಸವಲತ್ತಿನ ಪಟ್ಟಣ ನಿರ್ಮಾಣ ಮಾಡಿ ದವರು. ನಮಗೆ ಅವರು ಸ್ಫೂರ್ತಿ ಎಂದು ಹೇಳಿದರು. ಪುರಸಭೆ ಮಾಜಿ ಸದಸ್ಯ ಟಿ. ಆರ್. ಶ್ರೀಧರ್ ಮಾತನಾಡಿ ಇತಿಹಾಸ ಬಿಂಬಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯ ಶಿಕ್ಷಕ ಟಿ.ಯಲ್ಲಪ್ಪ ನೆರವೇರಿಸಿದರು. ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಶಿಕ್ಷಕ ಕುಮಾರ್ ನಾಯಕ್, ಶಾಂತಮ್ಮ ಭಾಗವಹಿಸಿದ್ದರು.
-30ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ತಾ.ಕಸಾಪ ಅಧ್ಯಕ್ಷರ ರವಿ ದಳವಾಯಿ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಲೇಖಕ ಮಸಸುಳಿ ಮೋಹನ್ ಕುಮಾರ್ ಪುರಸಭೆ ಮಾಜಿ ಸದಸ್ಯ ಟಿ. ಆರ್. ಶ್ರೀಧರ್ , ಶಾಲೆ ಮುಖ್ಯ ಶಿಕ್ಷಕ ಟಿ.ಯಲ್ಲಪ್ಪ ಮತ್ತಿತರರು ಇದ್ದರು.;Resize=(128,128))
;Resize=(128,128))