ಚುನಾವಣೆಯಲ್ಲಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ: ಆನಂದ್

| Published : Apr 08 2024, 01:08 AM IST

ಸಾರಾಂಶ

ಚಳ್ಳಕೆರೆ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಬಿ.ಆನಂದ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಂಡಿರುವ ಸಿಬ್ಬಂದಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಬಿ.ಆನಂದ್ ಹೇಳಿದರು.ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆಕಾಲೇಜು ಆವರಣದಲ್ಲಿ ಈ ತಿಂಗಳ ೨೬ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ೨೬೦ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳ ವಿಶೇಷ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಸಂದರ್ಭದಲ್ಲಿ ಎಆರ್‌ಒ, ಪಿಆರ್‌ಒಗಳು ಪರಿಶೀಲನೆ ಮಾಡಬೇಕಾದ ದಾಖಲತಿಗಳು ಹಾಗೂ ಮತದಾನ ಕೇಂದ್ರಕ್ಕೆ ಆಗಮಿಸುವ ಮತದಾರರ ವಿವರ ತಿಳಿಯುವ ಮತಯಂತ್ರಗಳನ್ನು ಬಳಸುವ ಬಗ್ಗೆ ಸ್ವಷ್ಟ ಮಾಹಿತಿ ನೀಡಿದರು.

ತರಬೇತುದಾರರಾಗಿ ಆಗಮಿಸಿದ್ದ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು ಮುಂತಾದವರು ಅಧಿಕಾರಿಗಳಿಗೆ ಬೆಳಗ್ಗೆ ೧೧ರಿಂದ೧ ಅವಧಿಯಲ್ಲಿ ನಡೆದ ತರಬೇತಿಯಲ್ಲಿ ದಾಖಲಾತಿ, ಜೋಡಣೆ, ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನ ೩ರಿಂದ೫ರ ತನಕ ನಡೆದ ತರಬೇತಿಯಲ್ಲಿ ಇವಿಎಂ, ಇವಿಪ್ಯಾಟ್ ಉಪಯೋಗಿಸುವ ಬಗ್ಗೆ ತಿಳಿಸಿದರು. ಕ್ಷೇತ್ರದ ಸುಮಾರು ೬೦೦ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಹಸೀಲ್ಧಾರ್ ರೇಹಾನ್‌ಪಾಷ, ಇಒ ಬಿ.ಎಸ್.ಲಕ್ಷ್ಮಣ್‌ ಬಿಇಒ ಕೆ.ಎಸ್.ಸುರೇಶ್, ಪರಿಶಿಷ್ಟ ವರ್ಗ ಕಲ್ಯಾಣಧಿಕಾರಿ ಶಿವರಾಜ್, ಪ್ರಾಂಶುಪಾಲ ಬಿ.ಎಸ್. ಮಂಜುನಾಥ, ಶಿರಸ್ತೇದಾರ್ ಸದಾಶಿವಪ್ಪ, ಚುನಾವಣಾ ಶಿರಸ್ತೇದಾರ್ ಹಸೀನಬೇಗಂ, ಓಬಳೇಶ್, ಶ್ರೀಧರ್, ಡಿ.ಶ್ರೀನಿವಾಸ್, ಕಂದಾಯಾಧಿಕಾರಿ ಲಿಂಗೇಗೌಡ, ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.