ಗೊಟೂರ ಗ್ರಾಪಂ ಪಿಡಿಓ ವಿರುದ್ಧ ಕ್ರಮಕ್ಕೆ ಒತ್ತಾಯ

| Published : Jul 12 2024, 01:39 AM IST

ಸಾರಾಂಶ

ಗೊಟೂರ ಗ್ರಾಪಂ ಪಿಡಿಓ ಗುರುನಾಥ ರಾಠೋಡ ಕಳೆದ ಎಂಟು ತಿಂಗಳಿಂದ ಸಾಮಾನ್ಯ ಸಭೆ ನಡೆಸದೇ ಸದಸ್ಯರು ಕೇಳಿದ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸುತ್ತಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯೆ ಇಂದೂಬಾಯಿ ರಾಜಕುಮಾರ ಸಜ್ಜನ್ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಗೊಟೂರ ಗ್ರಾಪಂ ಪಿಡಿಓ ಗುರುನಾಥ ರಾಠೋಡ ಕಳೆದ ಎಂಟು ತಿಂಗಳಿಂದ ಸಾಮಾನ್ಯ ಸಭೆ ನಡೆಸದೇ ಸದಸ್ಯರು ಕೇಳಿದ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸುತ್ತಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯೆ ಇಂದೂಬಾಯಿ ರಾಜಕುಮಾರ ಸಜ್ಜನ್ ಒತ್ತಾಯಿಸಿದ್ದಾರೆ.

ಗೊಟೂರ ಗ್ರಾಪಂ ವ್ಯಾಪ್ತಿಯ ಕಣಸೂರ ಗ್ರಾಮದಲ್ಲಿ ಅನೇಕ ಮೂಲಭೂತ ಸೌಕರ್ಯಗಳು ಇಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತಾಗಿ ಪಿಡಿಓ ಅವರನ್ನು ಅನೇಕ ಬಾರಿ ಮನವಿ ಮಾಡಿದರೂ ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ಸದಸ್ಯರು ಕೇಳಿದ ಯಾವುದೇ ಮಾಹಿತಿ ನೀಡುವದಿಲ್ಲಾ. ಎಂಟು ತಿಂಗಳಿಂದ ಸಾಮಾನ್ಯ ಸಭೆ, ವಾರ್ಡ್‌ ಸಭೆ ನಡೆಸಿಲ್ಲಾ. ಎಸ್.ಸಿ ಎಸ್‌ಟಿ ಅನುದಾನದ ಬಗ್ಗೆ ಮಾಹಿತಿ ನೀಡುತ್ತಿಲ್ಲಾ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೂ ಪರಿಹಾರ ಮಾಡುತ್ತಿಲ್ಲ. ಈಗ ಡೆಂಘೀ ಭಿತಿ ಇದ್ದು ಚರಂಡಿ ಸ್ವಚ್ಛತೆ ಮಾಡಿ ಫಾಗಿಂಗ್ ಮಾಡಲು ಒತ್ತಾಯಿಸಿದರೂ ಮಾಡುತ್ತಿಲ್ಲಾ ಒಬ್ಬ ಗ್ರಾಪಂ ಸದಸ್ಯೆ ಹೇಳಿರುವ ಸಮಸ್ಯೆಗಳನ್ನು ಪರಿಹರಿಸದೇ ಈ ರೀತಿ ನಿರ್ಲಕ್ಷ ವಹಿಸುತ್ತಿರುವ ಇವರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವರೇ. ಇಂತಹ ಅಧಿಕಾರಿಗಳಿಂದ ಗ್ರಾಮ ಅಭಿವೃದ್ದಿ ಸಾಧ್ಯವಾಗುವದಿಲ್ಲಾ. ಕೂಡಲೇ ಇವರ ವಿರುದ್ದ ಕ್ರಮ ಕೈಗೊಂಡು ಉತ್ತಮ ಸೇವೆ ಸಲ್ಲಿಸುವ ಪಿಡಿಓ ಅವರನ್ನು ನೇಮಕ ಮಾಡಬೇಕು ಎಂದು ಕಾಳಗಿ ತಾಪಂ ಇಓ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.