ಜನರನ್ನು ಅಲೆದಾಡಿಸುವ ಅಧಿಕಾರಿ ಮೇಲೆ ಕ್ರಮ

| Published : Jan 07 2025, 12:15 AM IST

ಜನರನ್ನು ಅಲೆದಾಡಿಸುವ ಅಧಿಕಾರಿ ಮೇಲೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ಅಧಿಕಾರಿಗಳು ಕೂಡ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಸುಮ್ಮನೆ ಕಚೇರಿಗೆ ಅಲೆದಾಡಿಸಬಾರದು. ಹಾಗೇನಾದರೂ ಸುಮ್ಮನೆ ಅಲೆದಾಡಿಸುವುದು ನನ್ನ ಗಮನಕ್ಕೆ ಬಂದರೆ ಅಂತವರ ಮೇಲೆ ಶಿಸ್ತು ಕ್ರಮ ಜರಗಿಸಲು ಮುಂದಾಗುತ್ತೇನೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ, ಚನ್ನರಾಯಪಟ್ಟಣ

ಯಾವ ಅಧಿಕಾರಿಗಳು ಕೂಡ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಸುಮ್ಮನೆ ಕಚೇರಿಗೆ ಅಲೆದಾಡಿಸಬಾರದು. ಹಾಗೇನಾದರೂ ಸುಮ್ಮನೆ ಅಲೆದಾಡಿಸುವುದು ನನ್ನ ಗಮನಕ್ಕೆ ಬಂದರೆ ಅಂತವರ ಮೇಲೆ ಶಿಸ್ತು ಕ್ರಮ ಜರಗಿಸಲು ಮುಂದಾಗುತ್ತೇನೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಸಿದರು.

ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆದ ಕಂದಾಯ ಅದಾಲತ್ ಹಾಗೂ ಪೌತಿ ಖಾತಾ ಆಂದೋಲನ ಹಾಗೂ ಜನಸಂಪರ್ಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಕಾರ್ಯಾಂಗ ಮತ್ತು ಶಾಸಕಾಂಗ ಈ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ಶಾಸಕಾಂಗ ಶಾಸನ ಬದ್ಧವಾಗಿ ಕೆಲಸ ನಿರ್ವಹಿಸುತ್ತದೆ. ಕಾರ್ಯಾಂಗ ಕಾರ್ಯಗಳನ್ನು ರೂಪಿಸಲು ಕೆಲಸ ನಿರ್ವಹಿಸುತ್ತದೆ. ಆದಕಾರಣ ಯಾವುದೇ ಸಾರ್ವಜನಿಕರ ಕುಂದು ಕೊರತೆಗಳ್ಳಿದ್ದರೆ ಅಂತಹ ಕುಂದು ಕೊರತೆಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಬಗೆಹರಿಸುವುದು ಸೂಕ್ತ ಅದನ್ನು ಬಿಟ್ಟು ಕಚೇರಿಗಳಿಗೆ ಸುಮ್ಮನೆ ಸುಮ್ಮನೆ ಅಲೆದಾಡಿಸಿ ಕೆಲಸ ಕಾರ್ಯಗಳನ್ನು ಮಾಡದೆ ಸಮಯ ವ್ಯರ್ಥ ಮಾಡುವುದು ಒಳ್ಳೆಯ ಗುಣವಲ್ಲ ಕೆಲವು ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸುವ ವಿಷಯಕ್ಕೆ ನನ್ನ ಗಮನಕ್ಕೂ ಕೂಡ ಬಂದಿದೆ ಎಂದರು.

ಆದರೆ ತಾಲೂಕಿನಲ್ಲಿ ಶೇ. 10 ರಿಂದ 15 ರಷ್ಟು ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇನ್ನು ಕೆಲ ಅಧಿಕಾರಿಗಳು ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ತೊಡಗಿರುವುದು ಸಂತೋಷಕರ ವಿಚಾರವಾಗಿದೆ. ದಯಮಾಡಿ ಮುಂದಿನ ದಿನಗಳಲ್ಲಿ ಯಾರೂ ಕೂಡ ಸಾರ್ವಜನಿಕರನ್ನು ಅಲೆದಾಡಿಸದೆ ತಮ್ಮಗಳ ಮೂಲಕವೇ ಕ್ರಮಬದ್ಧವಾಗಿ ಮತ್ತು ಕಾನೂನು ಪ್ರಕಾರ ಕಾರ್ಯಗಳನ್ನು ನಿರ್ವಹಿಸುವುದು ಉತ್ತಮವಾಗಿದೆ ಎಂದರು.ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ನಿರ್ವಹಣೆಗಾಗಿ ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದರು. ಕುಂದು ಕೊರತೆ ನಿರ್ವಹಣಾ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ನವೀನ್ ಕುಮಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಹರೀಶ್, ಪಟ್ಟಣ ವೃತ್ತ ನಿರೀಕ್ಷಕ ರಘುಪತಿ ಭಟ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.