ಕನಕಭವನ ನಿರ್ಮಾಣಕ್ಕೆ ನಿವೇಶನ ಮಂಜೂರಿಗೆ ಕ್ರಮ: ದರ್ಶನ್ ಪುಟ್ಟಣ್ಣಯ್ಯ

| Published : Nov 19 2024, 12:47 AM IST

ಕನಕಭವನ ನಿರ್ಮಾಣಕ್ಕೆ ನಿವೇಶನ ಮಂಜೂರಿಗೆ ಕ್ರಮ: ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹನೀಯರ ಆಶಯಗಳನ್ನು ಬರೀ ಮಾತು ಮತ್ತು ಭಾಷಣಗಳಿಗೆ ಸೀಮಿತಗೊಳಿಸಬಾರದು. ನಮ್ಮ ಜೀವನದ ನಡೆಯಲ್ಲೂ ಅದರ ಸಾರ ಇರಬೇಕು. ಶ್ರದ್ಧೆ ಭಕ್ತಿ ಇದ್ದರೆ ದೇವರು ಪ್ರತ್ಯಕ್ಷನಾಗುತ್ತಾನೆ ಎಂಬುದಕ್ಕೆ ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿರುವ ಕನಕ ಕಿಡಿಯೇ ಸಾಕ್ಷಿ. ಕನಕದಾಸರ ಭಕ್ತಿಗೆ ದೇವರು ದಿಕ್ಕನ್ನು ಬದಲಾಯಿಸಿ ದರ್ಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕುರುಬ ಸಮುದಾಯದ ಮುಖಂಡರ ಬೇಡಿಕೆಯಂತೆ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.

ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಕನಕದಾಸರ 565ನೇ ಜಯಂತಿ ಉದ್ಘಾಟಿಸಿ ಮಾತನಾಡಿ, 500 ವರ್ಷಗಳ ಹಿಂದೆ ಬದುಕಿದ್ದ ಕನಕದಾಸರ ತಾವು ನಡೆದು ಬಂದು ಹಾದಿಯನ್ನು ಕೀರ್ತನೆ ರೂಪದಲ್ಲಿ ಹೇಳಿದ್ದಾರೆ ಎಂದರು.

ಕನಕದಾಸರ ಕೀರ್ತನೆಗಳನ್ನು ಅರ್ಥ ಮಾಡಿಕೊಂಡು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಕೇವಲ ಜಯಂತಿಗಳ ದಿನದಂದು ಮಹನೀಯರನ್ನು ಸ್ಮರಣೆ ಮಾಡಿದರೆ ಸಾಲದು. ಸಮ ಸಮಾಜ ಮತ್ತು ಸಮಾನತೆ ಮೈಗೂಡಿಸಿಕೊಳ್ಳುವಂತೆ ಕೀರ್ತನೆಗಳಲ್ಲಿ ತಿಳಿ ಹೇಳಲಾಗಿದೆ ಎಂದರು.

ಮಹನೀಯರ ಆಶಯಗಳನ್ನು ಬರೀ ಮಾತು ಮತ್ತು ಭಾಷಣಗಳಿಗೆ ಸೀಮಿತಗೊಳಿಸಬಾರದು. ನಮ್ಮ ಜೀವನದ ನಡೆಯಲ್ಲೂ ಅದರ ಸಾರ ಇರಬೇಕು. ಶ್ರದ್ಧೆ ಭಕ್ತಿ ಇದ್ದರೆ ದೇವರು ಪ್ರತ್ಯಕ್ಷನಾಗುತ್ತಾನೆ ಎಂಬುದಕ್ಕೆ ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿರುವ ಕನಕ ಕಿಡಿಯೇ ಸಾಕ್ಷಿ. ಕನಕದಾಸರ ಭಕ್ತಿಗೆ ದೇವರು ದಿಕ್ಕನ್ನು ಬದಲಾಯಿಸಿ ದರ್ಶನ ನೀಡಿದ್ದಾರೆ. ನಾವೆಲ್ಲರೂ ದೇಶದ ಪ್ರತಿಯೊಬ್ಬ ಮಹನೀಯರ ಆದರ್ಶನ ಮೈಗೂಡಿಸಿಕೊಳ್ಳುವ ಕಡೆ ಗಮನಹರಿಸಿಬೇಕು ಎಂದರು.

ಇದೇ ವೇಳೆ ಕನಕ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಬೇಕು ಮತ್ತು ಅಗತ್ಯ ನಿವೇಶನವನ್ನು ತಕ್ಷಣ ಮಂಜೂರಾತಿಗಾಗಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹಾಗೂ ಸಮಾಜದ ಮುಖಂಡರಾದ ಚಿಕ್ಕಮರಳಿ ಮಂಗಳಾ ನವೀನ್ ಶಾಸಕರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಶು ಸಖಿಯರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಮ್ಮ ವೈಯಕ್ತಿಕ ಹಣದಲ್ಲಿ ಸಮವಸ್ತ್ರ ನೀಡಿದರು.

ತಹಸೀಲ್ದಾರ್ ಎಸ್.ಸಂತೋಷ್, ಶಿರಸ್ತೇದಾರ್ ಮೋಹನ್, ತಾಪಂ ಇಒ ಲೋಕೇಶ್‌ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮಂಗಳಾ ನವೀನ್‌ಕುಮಾರ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಉಪನ್ಯಾಸಕಿ ಉಷಾ, ಕುರುಬರ ಸಂಘದ ಅಧ್ಯಕ್ಷ ಹುಚ್ಚೇಗೌಡ, ಸಿ.ಸ್ವಾಮೀಗೌಡ, ಗೋಪಾಲಗೌಡ ಸೇರಿದಂತೆ ಹಲವರು ಇದ್ದರು.