ನ್ಯಾಮತಿ ಪಟ್ಟಣದಲ್ಲಿ ಕುಡಿವ ನೀರಿಗೆ ಕ್ರಮ

| Published : Jan 19 2024, 01:48 AM IST

ಸಾರಾಂಶ

ಮಳೆ ಕೊರತೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ದರಿಂದ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಮತ್ತು ಗ್ರಾಮೀಣ ಭಾಗದ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ನದಿ ತಟದಲ್ಲಿರುವ ನೀರು ಸಂಗ್ರಹ, ಜಾಕ್‌ವೆಲ್‌ಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು.

ಶುದ್ಧೀಕರಣ ಘಟಕಕ್ಕೆ ಪಪಂ ಮುಖ್ಯಾಧಿಕಾರಿ ಗಣೇಶ್‌ ರಾವ್‌, ಸಿಬ್ಬಂದಿ ಭೇಟಿ

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿದ್ದು, ಪ್ರಸ್ತುತ ಮಳೆ ಅಭಾವದಿಂದ ನದಿ ದಡದಲ್ಲಿರುವ ಜಾಕ್‌ವೆಲ್‌ ಮತ್ತು ಅರೇಹಳ್ಳಿ ಗ್ರಾಮದ ನೀರಿನ ಸಂಗ್ರಹ ಶುದ್ಧೀಕರಣ ಘಟಕಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್‌ ರಾವ್‌, ಸಿಬ್ಬಂದಿ ಹಾಗೂ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.

ಮಳೆ ಕೊರತೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ದರಿಂದ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಮತ್ತು ಗ್ರಾಮೀಣ ಭಾಗದ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ನದಿ ತಟದಲ್ಲಿರುವ ನೀರು ಸಂಗ್ರಹ, ಜಾಕ್‌ವೆಲ್‌ಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಸೂಕ್ತ ಸಮಯಕ್ಕೆ ನೀರು ಪೂರೈಸುವ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ನೀರಿನ ಹರಿವು ಹಾಗೂ ಜಾಕ್‌ವೆಲ್‌ ನೀರು ಸಿಗುವ ಹಾಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಇಂಟ್‌ ಟ್ಯಾಂಕ್‌ ವಾಲ್‌, ಪಂಪ್‌ಹೌಸ್‌ಗೆ 50ಅಶ್ವ ಶಕ್ತಿಯ ಯಂತ್ರದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಈ ಸಮಯದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್‌ರಾವ್‌ ಮಾಹಿತಿ ನೀಡಿದರು.

ನ್ಯಾಮತಿ ಘಟಕದ ಕಾಂಗ್ರೆಸ್‌ ಅಧ್ಯಕ್ಷ ಗುಂಡೂರು ಲೋಕೇಶ್‌, ನಿರಗಂಟಿ ಜಿ.ನಾಗಪ್ಪ, ಪಂಪ್‌ಹೌಸ್‌ನ ಕೃಷ್ಣ ಸೇರಿ ಮತ್ತಿತರರಿದ್ದರು.