ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಅಪ್ಪರ್ ಭದ್ರ ನೀರಾವರಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಹಾಗೂ ಶಿರಾ-ಚಿತ್ರದುರ್ಗ ರೈಲ್ವೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕೆಂಬ ಜನರ ಒತ್ತಾಸೆಯನ್ನು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ, ಶೀಘ್ರದಲ್ಲಿ ಪೂರ್ಣಗೊಳಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ 22ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ನಂಜಾವಧೂತ ಶ್ರೀಗಳು ನೀರಾವರಿ ಯೋಜನೆಗಳ ಬಗ್ಗೆ ಇಟ್ಟಿರುವ ಜನಪದ ಕಾಳಜಿ ಮೆಚ್ಚುವಂಥದ್ದು ಎಂದರು.ಡ್ಯಾಂ ನಿರ್ಮಿಸಿ:
ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸಲು ಸಾಧ್ಯವಾಗುವ ರೀತಿ, ತುಂಗಭದ್ರಾ ಜಲಾಶಯ ಭರ್ತಿಯಾಗಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಈ ಜಿಲ್ಲೆಗಳಿಗೆ ಹರಿಸಲು ಸರ್ಕಾರ ತುಂಗಭದ್ರಾ ಜಲಾಶಯ ಸಮೀಪದಲ್ಲಿ 10 ಟಿಎಂಸಿ ನೀರು ಶೇಖರಣೆ ಮಾಡುವಂತಹ ಬೃಹತ್ ಡ್ಯಾಂ ಕಟ್ಟುವಂತಹ ನಿರ್ಧಾರ ಮಾಡಬೇಕಿದೆ ಎಂದರು.ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ಕಳೆದ 22 ವರ್ಷಗಳಿಂದ ಶ್ರೀಮಠ ರೈತರಿಗೆ ಕೃಷಿಯ ನೂತನ ತಾಂತ್ರಿಕತೆ ಬಗ್ಗೆ ಪರಿಣಾಮಕಾರಿಯಾಗಿ ವಸ್ತು ಪ್ರದರ್ಶನದಲ್ಲಿ ಅರಿವು ಮೂಡಿಸಿದ ಕಾರಣ ಹೆಚ್ಚು ಹೆಚ್ಚು ರೈತರಿಗೆ ಇದರ ಪ್ರಯೋಜನವಾಗಿದೆ. ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಅಪ್ಪರ ಭದ್ರ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಬರುಡಾಗಿರುವ ನಾಡಿಗೆ ನೀರು ಹರಿಸುವಂತಹ ಇಚ್ಛಾಶಕ್ತಿ ಸರ್ಕಾರ ಹೊಂದಬೇಕಿದೆ ಎಂದರು.ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ನಂಜಾವಧೂತ ಸ್ವಾಮಿಜಿಗಳು ರೈತರ ಪರವಾಗಿದ್ದು, ಅವರ ಜನ್ಮ ಜಯಂತಿಯನ್ನು ನೀರಿನ ಹಕ್ಕೋತ್ತಾಯದ ಮೂಲಕ ಆಚರಿಸುತ್ತಿದ್ದು, ಶಿರಾ, ಕಳ್ಳಂಬೆಳ್ಳ, ಮದಲೂರು ಕೆರೆಗಳಿಗೆ ಹೇಮಾವತಿ ನೀರು ಬರಲು ಮುಖ್ಯ ಪ್ರೇರಣೆ ಇವರಾಗಿದ್ದಾರೆ ಎಂದರು.ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ, ಮದಲೂರು ಕೆರೆಗೆ ಹೇಮಾವತಿ ನೀರು ಹರಿದು, ಕಳ್ಳಂಬೆಳ್ಳ 16 ಕೆರೆಗಳು ಭರ್ತಿಯಾಗಲು ಶ್ರೀ ನಂಜಾವದೂತ ಸ್ವಾಮೀಜಿಗಳ ನೀರಾವರಿ ಹೋರಾಟ ಪ್ರೇರಣೆಯಾಯಿತು, ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಆಧುನಿಕ ಕೃಷಿ ಪದ್ಧತಿಗೆ ಯುವ ರೈತರು ಉತ್ಸಾಹ ತೋರು ಬೇಕೆಂಬ ಸಂಕಲ್ಪದೊಂದಿಗೆ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಿ ಪ್ರಾತ್ಯಕ್ಷಿತ ಬೆಳೆಗಳ ಮೂಲಕ ರೈತರಿಗೆ ಮಾಹಿತಿ ನೀಡಿದ್ದು ಶ್ರೀಗಳಿಗೆ ಅನ್ನದಾತರ ಬಗ್ಗೆ ಇರುವ ಕಾಳಜಿಯನ್ನು ಸಾಕ್ಷಿಕರಿಸುತ್ತದೆ ಎಂದರು.ಈ ಸಂದರ್ಭದಲ್ಲಿ ತಾಲ್ಲೂಕು ಕುಂಚಿಟಿಗರ ಸಂಘದ ನಿರ್ದೇಶಕ ಪ್ರಕಾಶ್ ಗೌಡ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಟಿ.ಡಿ. ಮಲ್ಲೇಶ್, ಅರುಣೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಮಂಜುನಾಥ್, ಮಾಲೂರಿನ ರಾಘವೇಂದ್ರ, ತಮಿಳುನಾಡು ರಾಜ್ಯದ ಹೊಸೂರಿನ ಲಕ್ಷ್ಮೀಪತಿ, ಎಸ್‌ಬಿಐ ರಾಜಶೇಖರ್, ಶ್ರೀಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಮ್ಮಣ್ಣ, ಮದಲೂರು ನರಸಿಂಹಮೂರ್ತಿ, ಕೆ.ಎಂ. ಶ್ರೀನಿವಾಸ್ ಸೇರಿದಂತೆ ನೂರಾರು ರೈತರು, ಭಾಗವಹಿಸಿದ್ದರು. 27ಶಿರಾ1: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ 22ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ ಭಾಗವಹಿಸಿದ್ದರು.