ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ಎಲ್ಲಿ ಒಗ್ಗಟ್ಟು ಇರುತ್ತದೆ ಅಲ್ಲಿ ಜಯವಿರುತ್ತದೆ. ಅದಕ್ಕೆ ತಾಜಾ ಉದಾಹರಣೆ ದಿನ್ನೇರಿ ಹಾರೋಹಳ್ಳಿ ವಿವಿಧೊದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆ. ಇಲ್ಲಿ ಎಲ್ಲ ೧೨ ಮಂದಿ ಸದಸ್ಯರು ಕಾಂಗ್ರೆಸ್ ಬೆಂಬಲಿತರಾಗಿ ಜಯಗಳಿಸಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.ಅವರು ಸಂಘದ ಎಲ್ಲ ಸದಸ್ಯರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಮಾಲೂರು ತಾಲೂಕಿನಲ್ಲಿ ದಿನ್ನೇರಿ ಹಾರೋಹಳ್ಳಿ, ದ್ಯಾಪಸಂದ್ರ ಸಹಕಾರ ಸಂಘಗಳು ಇತಿಹಾಸವಿರುವ ಸಂಘಗಳಾಗಿವೆ. ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಟವಾಗಿರುವುದರಿಂದ ಎಲ್ಲಾ ನಾಯಕರು ಚುನಾವಣೆಗಳು ಬಂದಾಗ ಒಟ್ಟಾಗಿ ಜವಾಬ್ದಾರಿ ತೆಗೆದುಕೊಳ್ಳುವುದರ ಮೂಲಕ ಎದುರಾಳಿ ಪಕ್ಷಗಳಿಗೆ ಸಿಂಹಸ್ವಪ್ನವಾಗಿದೆ ಎಂದರು.
ಬಡ್ಡಿರಹಿತ ಸಾಲಕ್ಕೆ ಕ್ರಮದಿನ್ನೇರಿ ಹಾರೋಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಒದಗಿಸಿಕೊಡುವುದಾಗಿ ಮಾಲೂರು ತಾಲ್ಲೂಕು ಎಲ್ಲಾ ಸಹಕಾರ ಸಂಘಗಳಿಗೆ ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲ, ರೈತರಿಗೆ ಸಾಲ ಯೋಜನೆ ನೀಡುವುದಕ್ಕೆ ಸರ್ಕಾರದಿಂದ ಅನುದಾನ ಕಲ್ಪಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ರತ್ನಮ್ಮನಂಜೇಗೌಡ, ಆಡಳಿತ ಮಂಡಳಿ ಸಂಘದ ನೂತನ ಸದಸ್ಯರಾದ ನಾರಾಯಣಸ್ವಾಮಿ, ಆರ್.ನಂಜುಂಡಪ್ಪ, ಮುನೇಗೌಡ.ಎನ್., ರಮೇಶ, ರಾಜಪ್ಪ.ಎಸ್, ವೆಂಕಟಸ್ವಾಮಿ, ನಾಗೇಶ, ಸರೋಜಮ್ಮ, ಲಕ್ಷ್ಮೀ.ಕೆ.ಎನ್., ಸಂಘದ ಮಾಜಿ ಅಧ್ಯಕ್ಷ ಟಿ.ಕೆಂಚಪ್ಪ, ಸಂಘದ ಸಿಇಒ ತಿರುಮೇಗೌಡ, ಮುಖಂಢರು ಗ್ರಾ.ಪಂ.ಸದಸ್ಯರು ಕೆ.ಎಸ್.ವೆಂಕಟೇಶಗೌಡ, ವಿ.ಚಂದ್ರಶೇಖರ್, ಡೈರಿ ಅಧ್ಯಕ್ಷ ಮಂಜುನಾಥ, ಸಿಬ್ಬಂದಿ ಶ್ರೀನಿವಾಸ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.