ಕಾನೂನು ಸುವ್ಯವಸ್ಥೆ ಕದಡಿದರೆ ಕ್ರಮ

| Published : Mar 29 2025, 12:31 AM IST

ಸಾರಾಂಶ

ಯಾರಾದರು ಶಾಂತಿ, ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಿದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗುತ್ತದೆ.

ಹನುಮಸಾಗರ:

ಗ್ರಾಮದಲ್ಲಿ ಯುಗಾದಿಯಂದು ನಡೆಯುವ ಜಾತ್ರೆ ಹಾಗೂ ರಂಜಾನ್‌ ಹಬ್ಬವನ್ನು ಶಾಂತಿ ಮತ್ತು ಸೌರ್ಹಾದತೆಯಿಂದ ಆಚರಿಸಬೇಕು ಎಂದು ಪಿಎಸ್‌ಐ ಧನುಂಜಯ ಎಂ. ಹೇಳಿದರು.

ಗ್ರಾಮದ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಯಾರಾದರು ಶಾಂತಿ, ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಿದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಸೂಚಪ್ಪ ದೇವರಮನಿ ಮಾತನಾಡಿ, ಗ್ರಾಮದಲ್ಲಿ ಈ ವರೆಗೆ ಹಿಂದು-ಮುಸ್ಲಿಂ ನಡುವೆ ಜಾತಿ ಭೇದವಿಲ್ಲದೆ ಒಂದಾಗಿ ನೆಲೆಸಿದ್ದೇವೆ. ಅಂತಹ ಘಟನೆಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.ಸಭೆಯಲ್ಲಿ ಪ್ರಮುಖರಾದ ಮಹಾಂತಯ್ಯ ಕೋಮಾರಿ, ಮರೇಗೌಡ ಬೋದುರ, ಈರಣ್ಣ ಹುನಗುಂಡಿ, ಸೂಚಪ್ಪ ಭೋವಿ, ಮೈನುದ್ದೀನ್‌ ಖಾಜಿ, ಸಬ್ಜನಸಾಬ್‌ ಹೊಸಳ್ಳಿ, ಮೈಬೂಬ್‌ ಮೂಲಿಮನಿ, ರಾಜಾಸಾಬ್‌ ಡಾಲಾಯತ್, ಖಾದರಸಾಬ್‌ ತಹಸೀಲ್ದಾರ್‌, ನಜೀರಸಾಬ್‌ ಮೂಲಿಮನಿ, ರಾಮಣ್ಣ ವಡ್ಡರ, ರಮೇಶ ನಿಡಗುಂದಿ ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.