ಪ್ರಜ್ವಲ್‌ ಪ್ರಪಂಚದ ಯಾವುದೇ ಮೂಲೆಯಲ್ಲಿದ್ರೂ ಕ್ರಮ : ಕೆ.ಎನ್‌.ರಾಜಣ್ಣ

| Published : May 02 2024, 01:35 AM IST / Updated: May 02 2024, 10:42 AM IST

ಪ್ರಜ್ವಲ್‌ ಪ್ರಪಂಚದ ಯಾವುದೇ ಮೂಲೆಯಲ್ಲಿದ್ರೂ ಕ್ರಮ : ಕೆ.ಎನ್‌.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್‌ ರೇವಣ್ಣ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

 ಬಾಗಲಕೋಟೆ:  ಪ್ರಜ್ವಲ್‌ ರೇವಣ್ಣ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ತಪ್ಪು ಮಾಡುತ್ತಾರೆ ಬಹಳ ಬುದ್ಧಿವಂತರಿರುತ್ತಾರೆ. ಆದರೆ, ಭೂಮಿ ಮೇಲೆಯೇ ಇರಬೇಕಲ್ವ? ಎಂತೆಂಥವ್ರನ್ನೇ ದೇಶಕ್ಕೆ ಕರೆತಂದು ಶಿಕ್ಷೆಗೆ ಗುರಿ ಪಡಿಸಿದ್ದೀವಿ. ಇದು ಯಾವ ದೊಡ್ಡ ವಿಷಯ ಅಲ್ಲ. ನಮ್ಮ ಪೊಲೀಸರು ಸಶಕ್ತರಿದ್ದಾರೆ ಎಂದರು.

ಈಗಾಗಲೇ ಎಸ್‌ಐಟಿ ತನಿಖೆ ನಡೆದಿದೆ. ಕೃತ್ಯ ಎಸಗದಿದ್ದರೆ ಏಕೆ ಇದು ಹೊರಗೆ ಬರುತ್ತಿತ್ತು?. ಕೃತ್ಯ ಎಸಗಿದ್ದಕ್ಕೆ ಹೊರಗೆ ಬಂದಿದೆ. ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಬೇಕು. ಸಮಾಜಕ್ಕೆ ಒಂದು ಸಂದೇಶ ಹೋಗಬೇಕು. ಕಾನೂನಿನ ಅಡಿಯಲ್ಲಿ ಪೊಲೀಸರು ಕ್ರಮ ಜರುಗಿಸುತ್ತಾರೆ ಎಂದರು.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ವಿಚಾರ ಇಂದು, ನಿನ್ನೆಯದಲ್ಲ. ಇದು ಹೊಸದೇನಲ್ಲ, ಹಳೆಯದು. ಆದರೆ, ಕಂಟೆಂಟ್ ಬಗ್ಗೆ ಗೊತ್ತಿರಲಿಲ್ಲ ಅಷ್ಟೆ. 6 ತಿಂಗಳ ಹಿಂದೆಯೇ ಅವರು ಸ್ಟೇ ತೆಗೆದುಕೊಂಡಿದ್ದರು. ಸ್ಟೇ ತೆಗೆದುಕೊಂಡಾಗ ಸಂಶಯ ಇತ್ತು. ಆಗ ಯಾರೂ ಅಷ್ಟು ಸೀರಿಯಸ್ ಆಗಿ ತಗೋಲಿಲ್ಲ. ಈಗ ಪೆನ್‌ಡ್ರೈವ್ ವಿಚಾರ ಗೊತ್ತಾಗಿದೆ. ಅಸಹಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗಿದೆ. ಇದನ್ನು ಖಂಡಿಸುತ್ತೇವೆ. ಕೃತ್ಯದಲ್ಲಿ ಭಾಗಿಯಾದ ಹೆಣ್ಣು ಮಕ್ಕಳ ಕುಟುಂಬಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.ಎನ್‌ಡಿಎ ದಿಂದ ಪ್ರಜ್ವಲ್‌ ರೇವಣ್ಣ ಮೊದಲು ಹೊರಗೆ ಹಾಕಿ:

ಪ್ರಜ್ವಲ್‌ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಮಿತ್ ಶಾ ಅವರು ಮೊದಲು ಪ್ರಜ್ವಲ್‌ ರೇವಣ್ಣ ಅವರನ್ನು ಎನ್‌ಡಿಎ ಒಕ್ಕೂಟದಿಂದ ಹೊರಹಾಕಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ಬದ್ಧ ಎನ್ನುವವರು ಪ್ರಜ್ವಲ್ ಈಗಲೂ ಸಂಸದರಾಗಿದ್ದಾರೆ. ಅವರನ್ನು ಎನ್‌ಡಿಎ ನಿಂದ ಹೊರ ಹೊರಹಾಕಬೇಕು ಎಂದು ಒತ್ತಾಯಿಸಿದರು.

ಪೆನ್‌ಡ್ರೈವ್ ವಿಚಾರದಲ್ಲಿ ಡಿಕೆಶಿ ಕೈವಾಡ ಇದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದವ್ರು, ಶ್ರೀರಾಮಚಂದ್ರನ ಗಾಳಿ ಎಚ್ಡಿಕೆಗೆ ಬೀಸಿದೆ ಎಂದು ವ್ಯಂಗ್ಯವಾಡಿದರು.

ಯಾತ್ನಾಳ ಯಾರಿಗೆ ಹುಟ್ಟಿದ್ದಾರೆ ವಿಚಾರ ಮಾಡಲಿ: ಸಚಿವ ಶಿವಾನಂದ

ಯತ್ನಾಳ ಮೊದಲು ಯಾರಿಗೆ ಹುಟ್ಟಿದ್ದಾರೆ ಅನ್ನೋದನ್ನು ವಿಚಾರ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಪದ ಬಳಸಬಹುದೇ ಎಂದು ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪಗೆ ಹುಟ್ಟಿದ್ರೆ 2ಎ ಮೀಸಲಾತಿ ತನ್ನಿ ಎಂದಿದ್ದ ಯತ್ನಾಳ ಮಾತಿಗೆ ತಿರುಗೇಟು ನೀಡಿದರು.

ಬಾಗಲಕೋಟೆ ಬಿಜೆಪಿ ಪ್ರಚಾರದ ವೇಳೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಸಂವಿಧಾನಿಕ ಪದ ಬಳಸಿದ ಹಿನ್ನೆಲೆಯಲ್ಲಿ ಯತ್ನಾಳ ವಿರುದ್ಧ ನನ್ನ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾಡಳಿತಕ್ಕೆ ಕಾಂಗ್ರೆಸ್‌ನಿಂದ ದೂರು ನೀಡಲಾಗಿದೆ. ಜಿಲ್ಲಾಡಳಿತದಿಂದ ಯತ್ನಾಳವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎನ್ನುವ ಮಾಹಿತಿ ಇದೆ ಎಂದು ತಿಳಿಸಿದರು.

ನಾನು ಬಾಗಲಕೋಟೆಯ ಯಾವುದೇ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಬಂದಿಲ್ಲ, ಬದಲಾಗಿ ಜನರ ಸೇವೆ ಮಾಡಲು ಬಂದಿದ್ದೇನೆ. ನಾನು ವಿಜಯಪುರದ ನಗರ ಸಭೆಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅಲ್ಲಿನ ಕಾರ್ಯವನ್ನು ಮತ್ತು ಬಸವನಬಾಗೇವಾಡಿ ಶಾಸಕನಾಗಿ ಮಾಡಿರುವ ಸೇವೆಯನ್ನು ಒಮ್ಮೆ ಅವರು ಗಮನಿಸಲಿ ಎಂದರು.