ಸಾರಾಂಶ
ಕೊಪ್ಪಳ: ಗ್ರಾಮಸಭೆಗೆ ಅವಶ್ಯವಾಗಿರುವುದು ರೈತರು ಹಾಗೂ ಕೂಲಿಕಾರರ ಮೂಲಕ ಬಂದ ಬೇಡಿಕೆಗಳು ನರೇಗಾ ಕ್ರಿಯಾ ಯೋಜನೆ ತಯಾರಿಸಲು ಅವಶ್ಯ ಎಂದು ಲೇಬಗೇರಿ ಪಿಡಿಒ ಸೋಮಪ್ಪ ಪೂಜಾರ ಹೇಳಿದರು.
ತಾಲೂಕಿನ ಲೇಬಗೇರಿ ಗ್ರಾಮದಿಂದ ಲೇಬಗೇರಿ ಗ್ರಾಮದ ಕಲಾರಂಗ ಮಂದಿರದಲ್ಲಿ ಏರ್ಪಡಿಸಿದ್ದ 2026-27ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಂಗವಾಗಿ ಕ್ರಿಯಾ ಯೋಜನೆ ಸಿದ್ದಪಡಿಸುವಿಕೆ ಕುರಿತು ಜರುಗಿದ ಗ್ರಾಮಸಭೆಯಲಿ ಮಾತನಾಡಿದರು.ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ವಾರ್ಡ್‌ಸಭೆಗಳ ಮೂಲಕ ಗ್ರಾಪಂದಿಂದ ಕಾಮಗಾರಿ ಬೇಡಿಕೆ ಪಡೆಯಲು ಈಗಾಗಲೇ ವಾರ್ಡಸಭೆ ಜರುಗಿಸಲಾಗಿದ್ದು, ಬರುವ ಏ.1 ರಿಂದ ಕಾಮಗಾರಿ ಆರಂಭಿಸಲು ಕೂಲಿಕಾರರ ಹಾಗೂ ರೈತರ ಬೇಡಿಕೆ ಸಲ್ಲಿಸಲು ಇದೊಂದು ಅವಕಾಶವಾಗಿದೆ. ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾದ ನಂತರ ಗ್ರಾಪಂ ಸಿಬ್ಬಂದಿ ಹಾಗು ತಾಂತ್ರಿಕ ಸಹಾಯಕರಿಂದ ಅಗತ್ಯ ಮಾಹಿತಿ ಪಡೆದು ಕಾಮಗಾರಿ ಅನುಷ್ಠಾನಿಸಬೇಕೆಂದರು.
ವಿಶ್ವ ಶೌಚಾಲಯ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಪಂ ಅಧಿಕಾರಿ ಹಾಗು ಆಡಳಿತ ಮಂಡಳಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು ತಂಬಾಕು ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಲೇಬಗೇರಿ ಗ್ರಾಪಂ ಅಧ್ಯಕ್ಷೆ ದೇವಮ್ಮ ಮಹಾದೇವಪ್ಪ ಕುರಿ, ಗ್ರಾಪಂ ಸದಸ್ಯರಾದ ಫಕೀರಗೌಡ್ರ ಗೊಲ್ಲರ, ಬಸವರಾಜ ಯತ್ನಟ್ಟಿ, ನಾಗಪ್ಪ ದೊಡ್ಡಮನಿ, ಸೋಮಪ್ಪ ತಳವಾರ, ಲೇಬಗೇರಿ ಗ್ರಾಪಂ ಕಾರ್ಯದರ್ಶಿ ಬಸವರಾಜ ಬಿಸನಳ್ಳಿ, ಕರವಸೂಲಿಗಾರ ರಾಜಪ್ಪ ಬಂಗಾರಿ, ಡಿಇಒ ಬಸವರಾಜ ಗ್ರಾಮ ಕಾಯಕ ಮಿತ್ರ ಅಂಬಮ್ಮ, ಸಂಜಿವಿನಿ ಯೋಜನೆಯ ಒಕ್ಕೂಟದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))