ಸಾರಾಂಶ
ಹಾನಗಲ್ಲ: ತಾಲೂಕಿನ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಹುಬ್ಬಳ್ಳಿಯ ಹೆಸ್ಕಾಂ ಕಚೇರಿ ಸಭಾಂಗಣದಲ್ಲಿ ಹೆಸ್ಕಾಂ ಅಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ ಸಭೆ ನಡೆಸಿದರು.ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಸಹ ಬೀದಿದೀಪ ಉರಿಯುತ್ತಿದ್ದು, ಬಿಲ್ ಹೊರೆ ಗ್ರಾಪಂಗಳ ಮೇಲೆ ಬೀಳುತ್ತಿದೆ. ಇನ್ನೊಂದು ಲೈನ್ ಅಳವಡಿಸುವ ಮೂಲಕ ಹಗಲು ಹೊತ್ತಿನಲ್ಲಿ ಬೀದಿದೀಪ ಉರಿಯದಂತೆ ಕ್ರಮ ಕೈಗೊಂಡರೆ ಗ್ರಾಪಂಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಹಾನಗಲ್ಲ ತಾಲೂಕಿನಲ್ಲಿ ಯೋಜನೆ ರೂಪಿಸಿ ಲೈನ್ ಅಳವಡಿಸಬೇಕು. ಅದಕ್ಕೆ ತಗಲುವ ವೆಚ್ಚದಲ್ಲಿ ಅರ್ಧ ಹಣವನ್ನು ಆಯಾ ಗ್ರಾಪಂಗಳು ಭರಿಸಲಿದ್ದು, ಉಳಿದರ್ಧ ಹಣವನ್ನು ಹೆಸ್ಕಾಂ ಭರಿಸಿದರೆ ಯೋಜನೆ ಪೂರ್ಣಗೊಳಿಸಬಹುದು ಎಂದು ಶಾಸಕ ಮಾನೆ ಅವರ ಅಭಿಪ್ರಾಯಕ್ಕೆ ಅಧಿಕಾರಿಗಳು ಸ್ಪಂದಿಸಿದರು.ಉಳಿದಂತೆ 25 ಕೆವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು 63 ಕೆವಿಎ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವುದು, ನಾನಾ ವಿದ್ಯುತ್ ಸಂಬಂಧಿತ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸುವುದು, ಹಾನಗಲ್ಲ ತಾಲೂಕಿಗೆ ಅಗತ್ಯವಿರುವ ಸಹಾಯಕ ಅಭಿಯಂತರರು, ಪವರ್ ಮೆನ್‌ಗಳ, ಮೀಟರ್ ರೀಡರ್ಸ್ ಸೇರಿದಂತೆ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ಕೈಗೊಳ್ಳಲಾಯಿತು.ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ದೇಶದ ಸರ್ವತೋಮುಖ ಪ್ರಗತಿಗೆ ಭ್ರಷ್ಟಾಚಾರ ಅಡ್ಡಿಗುತ್ತಲ: ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಭ್ರಷ್ಟಾಚಾರ ಅಡ್ಡಿಯಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಬೆಂಗಳೂರು ವಿಭಾಗದ ವಿಚಕ್ಷಣಾ ಅಧಿಕಾರಿ ಶರತಚಂದ್ರ ಪದಿಹರಿ ತಿಳಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ವಿಚಕ್ಷಣಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಭ್ರಷ್ಟಾಚಾರ ಎಂಬ ಪಿಡುಗನ್ನು ತೊಲಗಿಸಲು ಸರ್ಕಾರ, ನಾಗರಿಕರು ಒಟ್ಟಾಗಿ ಹೋರಾಡಿದಾಗ ಸಾಧ್ಯವಾಗುತ್ತದೆ. ಪ್ರತಿಯೊಬ್ಬ ನಾಗರಿಕನು ಜಾಗೂರಕನಾಗಿರಬೇಕು ಮತ್ತು ಎಲ್ಲ ಸಮಯದಲ್ಲೂ ಪ್ರಾಮಾಣಿಕತೆ ಹಾಗೂ ಸಮಗ್ರತೆಯ ಮಾನದಂಡಗಳಿಗೆ ಬದ್ಧರಾಗಿರಬೇಕು ಎಂದರು.ವಿಚಕ್ಷಣಾ ಜಾಗೃತಿ ಅಭಿಯಾನದ ಪ್ರತಿಜ್ಞೆಯನ್ನು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗುತ್ತಲ ಶಾಖಾ ಮ್ಯಾನೇಜರ್ ಸುನೀಲ ಕೆ., ಪಪಂ ಅಧ್ಯಕ್ಷೆ ಮಾಳವ್ವ ಗೊರವರ, ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಮುಖ್ಯಾಧಿಕಾರಿ ದೇವಾನಂದ ದೊಡ್ಡಮನಿ ಬ್ಯಾಂಕಿನ ಸಿಬ್ಬಂದಿ ವೀರಣ್ಣ ಬಾರ್ಕಿ ಸೇರಿದಂತೆ ಅನೇಕರಿದ್ದರು.