ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿ, ಭಜಂತ್ರಿ ಓಣಿ ಬನಶಂಕರಿ ಬಡಾವಣೆ ಹಳ್ಳದಕೇರಿ ಕೇರಿಯಲ್ಲಿರುವ ಲಂಡಿಹಳ್ಳದಲ್ಲಿ ಹಲವು ವರ್ಷಗಳಿಂದ ಗಿಡಮರಗಳು ಬೆಳೆದು ನೀರು ಹೋಗಲಾರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.ಲಂಡಿ ಹಳ್ಳದಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವಲ್ಲಿ ಪುರಸಭೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. 2- 3 ದಿನಗಳಲ್ಲಿ ಪುರಸಭೆಯು ಅಧಿಕಾರಿಗಳು ಕಾರ್ಯೋನ್ಮುಖವಾಗಿ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕಾರ್ಯವಾಗಬೇಕು ಎಂದರು. ಈ ವೇಳೆ ಮಂಜುನಾಥ ಮಾಗಡಿ ಹಾಗೂ ಅಲ್ಲಿನ ನಿವಾಸಿಗಳು ಲಂಡಿಹಳ್ಳದ ಸಮಸ್ಯೆ ಹಾಗೂ ಅಲ್ಲಿ ವಾಸಿಸುವ ನಿವಾಸಿಗಳಿಗೆ ಆಗುವ ತೊಂದರೆ ವಿವರಿಸಿದರು. ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡ ಗಂಗಪ್ಪ ಎಂ. ಅವರು ಅಲ್ಲಿಯೇ ಇದ್ದ ಪುರಸಭೆ ಹಿರಿಯ ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಅವರಿಗೆ ಇಲ್ಲಿ ಎರಡು ದಿನದಲ್ಲಿ ಜೆಸಿಬಿ ಹಿಟಾಚಿ ಹಾಗೂ ಟ್ರ್ಯಾಕ್ಟರ್ ಮೂಲಕ ಕೆಲಸ ಪ್ರಾರಂಭವಾಗಬೇಕು.
ಗಿಡ ಕಂಟಿಗಳನ್ನು ತೆಗೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಿಗೆ ಇದರಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಪುರಸಭೆ ಜವಾಬ್ದಾರಿ ಎಂದು ಸೂಚನೆ ನೀಡಿದರಲ್ಲದೆ ಜೂ. 20ರಂದು ಮತ್ತೆ ಇದೆ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಅಷ್ಟೊತ್ತಿಗೆ ಸ್ವಚ್ಛತೆ ಆಗಿರಬೇಕು ಎಂದರು ತಹಸೀಲ್ದಾರ್ ಧನಂಜಯ ಎಂ., ಪುರಸಭೆ ಮಾಜಿ ಉಪಾಧ್ಯಕ್ಷ ದಾದಾಪೀರ ಮುಚ್ಚಾಲೆ, ಸಾಹೇಬಜಾನ್ ಹವಾಲ್ದಾರ, ನಾಗರಾಜ ಚಿಂಚಲಿ, ಗಣೇಶ ನೂಲ್ವಿ, ಚನ್ನಬಸನಗೌಡ ಉದ್ದನಗೌಡ್ರ, ಹೇಮಣ್ಣ ಬುರಡಿ, ದೇವು ಶಿರಹಟ್ಟಿ ಸೋಮು ಮಜ್ಜಿಗುಡ್ಡ, ರಾಜಪ್ಪ ಕಣವಿ, ದಶರಥ ಘೋರ್ಫಡೆ, ಪರಪ್ಪ ಕಣವಿ, ಫಕ್ಕೀರೇಶ ಭಜಂತ್ರಿ, ಮುದಕಪ್ಪ ಭಜಂತ್ರಿ, ಮಹಾದೇವಪ್ಪ ಅಂದಲಗಿ, ಮುದಕಪ್ಪ ಸಾಲ್ಮನಿ, ಈಶಪ್ಪ ರೋಣದ, ಅರುಣಾ ಕಣವಿ, ಫಕ್ಕೀರೇಶ ಕಣವಿ, ಪವನ ಬಂಕಾಪುರ, ಶಂಕರ ಬ್ಯಾಡಗಿ ಸ್ಥಳೀಯರು ಇದ್ದರು.ಲಂಡಿ ಹಳ್ಳದ ಸ್ವಚ್ಛತೆಗೆ ಕ್ರಮ: ಎಸಿ ಭರವಸೆ: ಉಪವಿಭಾಗಾಧಿಕಾರಿ ಗಂಗಪ್ಪ ಎಂ.
ಈ ವೇಳೆ ಮಂಜುನಾಥ ಮಾಗಡಿ ಹಾಗೂ ಅಲ್ಲಿನ ನಿವಾಸಿಗಳು ಲಂಡಿಹಳ್ಳದ ಸಮಸ್ಯೆ ಹಾಗೂ ಅಲ್ಲಿ ವಾಸಿಸುವ ನಿವಾಸಿಗಳಿಗೆ ಆಗುವ ತೊಂದರೆ ವಿವರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.