ಸಾರಾಂಶ
ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ರಾಮಭಕ್ತೆ ಶಬರಿ ಕೊಳ್ಳದ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ರಾಮಭಕ್ತೆ ಶಬರಿ ಕೊಳ್ಳದ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ತಾಲೂಕಿನ ಶಬರಿ ಕೊಳ್ಳದ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವಿ ದರ್ಶನದ ನಂತರ ಮಾತನಾಡಿದ ಅವರು, ತಾಲೂಕಿನಲ್ಲಿರುವ ಐತಿಹಾಸಿಕ ಶಬರಿಕೊಳ್ಳದಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.
ಭಗವಾನ್ ಶ್ರೀರಾಮಚಂದ್ರನ ಭಕ್ತಳೆನಿಸಿದ ಶಬರಿಮಾತೆಯು ಅತಿಯಾದ ಭಕ್ತಿಯಿಂದಾಗಿ ಆಗಿನ ಕಾಲದಲ್ಲಿ ಶ್ರೀರಾಮನಿಗಾಗಿ ಕಾದು ತಿನ್ನಲು ಬೋರೆಹಣ್ಣು ನೀಡಿದ ಈ ಶಬರಿಕೊಳ್ಳ ಪೂಣ್ಯ ಕ್ಷೇತ್ರವಾಗಿದೆ. ಈಗಲೂ ಇಲ್ಲಿ ಬೋರೆ ಹಣ್ಣಿನ ಮರಗಳಿವೆ. ಅವುಗಳ ರಕ್ಷಣೆಯ ಜತೆಗೆ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.ದೇವಸ್ಥಾನ ಪಕ್ಕದಲ್ಲಿರುವ ಎರಡು ಪುಸ್ಕರಣಿಗಳಲ್ಲಿ ನಿರಂತರ ನೀರು ಹರಿಯುತ್ತಿದೆ. ಬೇಸಿಗೆಯ ಕಾಲದಲ್ಲಿಯೂ ಇಲ್ಲಿ ನೀರಿನ ಸಮಸ್ಯೆ ಇರಲ್ಲ. ಇಂಥ ಸ್ಥಳವನ್ನು ಅಭಿವೃದ್ಧಿ ಪಡಿಸುವುದಕ್ಕೆ ತಮಗೆ ಪ್ರೇರಣೆ. ಶ್ರೀರಾಮ ತನ್ನ ಅಜ್ಞಾತ ಸಮಯದಲ್ಲಿ ಇಲ್ಲಿಗೆ ಬಂದು ಹೋಗಿರುವ ಕುರುಹುಗಳು ಇರುವುದರಿಂದ ಇದನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ರಾಮದುರ್ಗ ಮಂಡಲ ಅಧ್ಯಕ್ಷ ಡಾ.ಕೆ.ವಿ ಪಾಟೀಲ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ರಾಜೇಶ ಬೀಳಗಿ, ಸಂಗನಗೌಡ ಪಾಟೀಲ, ನಿಂಗಪ್ಪ ಮೆಳ್ಳಿಕೇರಿ, ಮಹಾದೇವಪ್ಪ ಮದಕಟ್ಟಿ, ಶ್ರೀಶೈಲ ಮಳ್ಳಿಕೇರಿ, ನಿಂಗಪ್ಪ ಮುಳ್ಳೂರ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣ ಹೂಲಗೇರಿ ಹಾಗೂ ಗ್ರಾಮಸ್ಥರು ಇದ್ದರು.