ಸಾರಾಂಶ
ಪೊಲೀಸ್ ಇಲಾಖೆಯಲ್ಲಿ ಹದಿನೈದು ಸಾವಿರ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪಿಎಸ್ಐ ನೇಮಕಾತಿ ಹಗರಣ ಪ್ರಯುಕ್ತ 545 ಹುದ್ದೆ ಗೊಂದಲವಾಗಿತ್ತು. ಈಗ ಕೋರ್ಟ್ ರೀ ಎಕ್ಸಾಮ್ ಗೆ ಆದೇಶಿಸಿದೆ. ಕೆಇಓಯಿಂದ 545 ಹುದ್ದೆ ಗಳಿಗೆ ಪುನರ್ ಪರೀಕ್ಷೆ ಆದೇಶ ಹೊರಡಿಸಲಾಗಿದೆ. ದಿನಾಂಕ ನಿಗದಿಯಾಗಿಲ್ಲ. ಇದರ ಜೊತೆಗೆ 600 ಪಿಎಸ್ ಐ ನೇಮಕ ಹಂತ ಹಂತವಾಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗುವುದು. 3 ಸಾವಿರ ಪೋಲೀಸ್ ಕಾನಸ್ಟೇಬಲ್ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗಿದೆ. ನಮ್ಮಲ್ಲಿರುವ ತರಬೇತಿ ಸಾಮರ್ಥ್ಯ ನೋಡಿಕೊಂಡು ನೇಮಕಾತಿ ನಡೆಯಲಿದೆ ಎಂದರು.
ಚಿತ್ರದುರ್ಗದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗರಾಜ್ಯದ ಪೊಲೀಸರಿಗೆ ಹತ್ತು ಸಾವಿರ ವಸತಿ ಗೃಹ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಪೋಲೀಸರ ವಸತಿ ಸಮುಚ್ಚಯ ಉದ್ಘಾಟಿಸಿ 72 ಮನೆಗಳ ಹಸ್ತಾಂತರ ಮಾಡಲಾಗಿದೆ. ಪೊಲೀಸ್ ಇಲಾಖೆ ಉನ್ನತೀಕರಣಕ್ಕೆ ಹೊಸ ಆಯಾಮ ನೀಡಲಾಗುತ್ತಿದೆ. ಪೊಲೀಸರಿಗೆ ಬೇಕಾದ ತರಬೇತಿ, ಸವಲತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದರು. ಪೊಲೀಸ್ ಇಲಾಖೆಯಲ್ಲಿ ಹದಿನೈದು ಸಾವಿರ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪಿಎಸ್ಐ ನೇಮಕಾತಿ ಹಗರಣ ಪ್ರಯುಕ್ತ 545 ಹುದ್ದೆ ಗೊಂದಲವಾಗಿತ್ತು. ಈಗ ಕೋರ್ಟ್ ರೀ ಎಕ್ಸಾಮ್ ಗೆ ಆದೇಶಿಸಿದೆ. ಕೆಇಓಯಿಂದ 545 ಹುದ್ದೆ ಗಳಿಗೆ ಪುನರ್ ಪರೀಕ್ಷೆ ಆದೇಶ ಹೊರಡಿಸಲಾಗಿದೆ. ದಿನಾಂಕ ನಿಗದಿಯಾಗಿಲ್ಲ. ಇದರ ಜೊತೆಗೆ 600 ಪಿಎಸ್ ಐ ನೇಮಕ ಹಂತ ಹಂತವಾಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗುವುದು. 3 ಸಾವಿರ ಪೋಲೀಸ್ ಕಾನಸ್ಟೇಬಲ್ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗಿದೆ. ನಮ್ಮಲ್ಲಿರುವ ತರಬೇತಿ ಸಾಮರ್ಥ್ಯ ನೋಡಿಕೊಂಡು ನೇಮಕಾತಿ ನಡೆಯಲಿದೆ ಎಂದರು.ಸಿಎಂ ಪಟಾಲಂನಿಂದ ನನ್ನನ್ನು ಕಳ್ಳನಾಗಿಸುವ ಯತ್ನ ಎಂಬ ಮಾಜಿ ಸಿಎಂ ಎಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಎಚ್ ಡಿಕೆ ಸರ್ಕಾರಕ್ಕೆ ಸಕಾರಾತ್ಮಕ ಸಲಹೆ ನೀಡಲಿ, ಕ್ಷುಲ್ಲಕ ಕಾರಣಗಳಿಗೆ ಹೇಳಿಕೆ ನೀಡಿದರೆ ನಾವು ಪ್ರತಿಕ್ರಿಯಿಸಲ್ಲ. ಗ್ಯಾರಂಟಿ ಜಾರಿಯಲ್ಲಿ ರಾಜಕೀಯ ನಾಯಕ ಸರ್ಟಿಫಿಕೇಟ್ ಬೇಕಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
---------------