ಶರಣರ ಸಂಘಟನೆ ವೇದಿಕೆಯನ್ನು ಜಿಲ್ಲಾದ್ಯಂತ ಸಂಘಟಿಸಲು ಕ್ರಮ: ನಂದೀಶ್

| Published : Jul 28 2025, 12:30 AM IST

ಸಾರಾಂಶ

ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಶರಣರ ಸಂಘಟನೆ ವೇದಿಕೆ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಮಳವಳ್ಳಿ, ಮದ್ದೂರು, ಮಂಡ್ಯ ತಾಲೂಕುಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆಮಾಡಿ ಸಂಘವನ್ನು ರಚಿಸಲಾಗಿದೆ. ನಾವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶರಣರ ಸಂಘಟನೆ ವೇದಿಕೆಯನ್ನು ಜಿಲ್ಲಾದ್ಯಂತ ಸಂಘಟಿಸಲು ಕ್ರಮ ವಹಿಸಿರುವುದಾಗಿ ವೇದಿಕೆ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶರಣರ ಸಂಘಟನಾ ವೇದಿಕೆ ತಾಲೂಕು ಘಟಕದಿಂದ ನಡೆದ ತಾಲೂಕು ಘಟಕದ ಅಧ್ಯಕ್ಷ ಶಿವಪುರ ಗಂಗಾಧರ್ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಬ್ಬಣಿ ಬಸವಣ್ಣರವರ ಸಮ್ಮುಖದಲ್ಲಿ ನಡೆದ ಕಾರ್ಯಕಾರಣಿ ಸಭೆ ಹಾಗೂ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಶರಣರ ಸಂಘಟನೆ ವೇದಿಕೆ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಮಳವಳ್ಳಿ, ಮದ್ದೂರು, ಮಂಡ್ಯ ತಾಲೂಕುಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆಮಾಡಿ ಸಂಘವನ್ನು ರಚಿಸಲಾಗಿದೆ. ನಾವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಜಾತಿ ಜಾತಿಗಳ ಮೇಲೆ ಜನಪ್ರತಿನಿಧಿಗಳು ಎತ್ತಿಕಟ್ಟುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾವುದೇ ಜಾತಿ ಬೇಧಗಳಿಲ್ಲದೆ ನಾವೆಲ್ಲರೂ ಒಂದಾಗಿ ಬಾಳೋಣ ಎಂದರು.

ತಾಲೂಕು ಅಧ್ಯಕ್ಷ ಗಂಗಾಧರ ಮಾತನಾಡಿ, ಜಿಲ್ಲಾ ಘಟಕದ ಆದೇಶದಂತೆ ತಾಲೂಕಿನಾದ್ಯಂತ ಉತ್ತಮ ಕೆಲಸದ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸೋಣ. ಸಂಘಗಳನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ತಾಲೂಕು ಮಹಿಳಾಧ್ಯಕ್ಷರಾಗಿ ತ್ರಿವೇಣಿ, ತಾಲೂಕು ಉಪಾಧ್ಯಕ್ಷರಾಗಿ ಭೀಮನಕೆರೆ ಬಸವರಾಜು, ಮದ್ದೂರು ನಗರ ಅಧ್ಯಕ್ಷರಾಗಿ ಪರಮೇಶ್, ತಾಲೂಕು ಸಂಚಾಲಕರಾಗಿ ಮಡೇನಳ್ಳಿ, ಮಹದೇವಸ್ವಾಮಿ, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಮಾಲಗಾರನಹಳ್ಳಿ ಗಿರೀಶ್, ಆತಗೂರು ಹೋಬಳಿ ಅಧ್ಯಕ್ಷರಾಗಿ ಕಲ್ಲೇಶ್ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಹಿಳಾ ನಗರಾಧ್ಯಕ್ಷರಾದ ರಶ್ಮಿ, ತಾಲೂಕು ಸಂಚಾಲಕಾ ಗಿರೀಶ್, ಕಾರ್ಯದರ್ಶಿ ಅರೇಚಾಕನಹಳ್ಳಿ ಕುಮಾರ್, ಇಗ್ಗಲೂರು ನಾಗೇಶ್, ಕರಡಕೆರೆ ಯೋಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.