ಸ್ವದೇಶ ದರ್ಶನ-೨.೦: ಹಂಪಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಕ್ರಮ

| Published : Dec 08 2023, 01:45 AM IST

ಸ್ವದೇಶ ದರ್ಶನ-೨.೦: ಹಂಪಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್‌ ದರ್ಶನ್ ೨.೦ ಯೋಜನೆಯಡಿ ಸಮಗ್ರ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಕರ್ನಾಟಕದ ಹಂಪಿಯನ್ನು ಆಯ್ಕೆ ಮಾಡಿದ್ದು, ಇದು ಜನವರಿ ೨೦೨೩ರಲ್ಲಿ ಪ್ರಾರಂಭಿಸಿ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹೭೦ ಕೋಟಿ ನಿಧಿಯನ್ನು ಕಾಯ್ದಿರಿಸಿದೆ. ಸ್ವದೇಶ್‌ ದರ್ಶನ ೨.೦ ಭಾಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ ಸ್ಥಳ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸ್ವದೇಶ ದರ್ಶನ- ೨.೦ ಅಡಿ ಹಂಪಿಯಲ್ಲಿ ಪ್ರವಾಸೋದ್ಯಮವನ್ನುಉತ್ತೇಜಿಸಲು ಬ್ರಾಂಡಿಂಗ್ ಹಂಪಿ ಅಡಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಎಲ್ಲರಿಗೂ ಭಾಗವಹಿಸಲು ದೇಶಾದ್ಯಂತ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್‌ ದರ್ಶನ್ ೨.೦ ಯೋಜನೆಯಡಿ ಸಮಗ್ರ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಕರ್ನಾಟಕದ ಹಂಪಿಯನ್ನು ಆಯ್ಕೆ ಮಾಡಿದ್ದು, ಇದು ಜನವರಿ ೨೦೨೩ರಲ್ಲಿ ಪ್ರಾರಂಭಿಸಿ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹೭೦ ಕೋಟಿ ನಿಧಿಯನ್ನು ಕಾಯ್ದಿರಿಸಿದೆ. ಸ್ವದೇಶ್‌ ದರ್ಶನ ೨.೦ ಭಾಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ ಸ್ಥಳ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ ಎಂದರು.

''''ಹಂಪಿಯಲ್ಲಿ ಸಮಯ ಪ್ರಯಾಣ'''' ಎಂಬ ಥೀಮ್ ನೊಂದಿಗೆ ''''ಹಂಪಿಯಲ್ಲಿ ಪ್ರವಾಸೋದ್ಯಮದ ಭವಿಷ್ಯವನ್ನುರೂಪಿಸಲು ನಿಮ್ಮ ಅವಕಾಶ!'''' ಎಂಬ ಉದ್ದೇಶದಿಂದ ಲೋಗೋ ವಿನ್ಯಾಸ, ಆಕರ್ಷಕ ಟ್ಯಾಗ್‌ಲೈನ್, ಆಕರ್ಷಕ ಮ್ಯಾಸ್ಕಾಟ್ ವಿನ್ಯಾಸ, ವಿಶಿಷ್ಟ ಸ್ಮರಣೆ(ಗಳು), ಹಂಪಿಯಲ್ಲಿ ನಿಮ್ಮ ನೆಚ್ಚಿನ ಸ್ಥಳ ಅಥವಾ ಚಟುವಟಿಕೆಯನ್ನು ವಿವರಿಸುವ ಒಂದು ಬ್ಲಾಗ್, ಹಂಪಿಯನ್ನು ಹೆಚ್ಚು ಪ್ರತಿನಿಧಿಸುವ ಒಂದು ಫೋಟೋ ಸಲ್ಲಿಸುವ ಈ ಸ್ಪರ್ಧೆಗಳಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು, ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು. ಅಲ್ಲದೇ ಬಹುಮಾನಗಳನ್ನು ಗೆಲ್ಲಲು ಮತ್ತು ಆಲೋಚನೆಗಳನ್ನು ಹಂಪಿಗೆ ತರಲು ಇದೊಂದು ಸುವರ್ಣಾವಕಾಶ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಉಪವಿಭಾಗಾಧಿಕಾರಿ ಮಹದ್‌ಅಲಿ ಅಕ್ರಮಷಾಹ, ಕಮಲಾಪುರ ಹೊಸಪೇಟೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಿಕೇರಿ ಸೇರಿದಂತೆ ಮತ್ತಿತರರಿದ್ದರು.

ಆಕರ್ಷಕ ಬಹುಮಾನ, ನೋಂದಣಿ:

ಪ್ರತಿ ಪ್ಯಾಕೇಜ್‌ಗೆ ಪ್ರಥಮ ₹೨೦,೦೦೦, ದ್ವಿತೀಯ ₹೧೦,೦೦೦, ತೃತೀಯ ₹೫,೦೦೦ ನಗದು ಬಹುಮಾನ ನೀಡಲಾಗುವುದು. ನೋಂದಾಯಿಸಲು ಡಿ.೨೧ ಮತ್ತು ಥೀಮ್ ಸಲ್ಲಿಸಲು ಡಿ. ೨೫ ಕೊನೆಯ ದಿನ. ನೋಂದಣಿ ಮತ್ತು ಪ್ರಶ್ನೆಗಳಿಗಾಗಿ competitions@karnatakatourism.orgಗೆ ಇಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://vijayanagara.nic.in/ಗೆ ಭೇಟಿ ನೀಡಬಹುದುಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.