ಇಂಡಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್‌ ರೈಲುಗಳ ನಿಲುಗಡೆಗೆ ಕ್ರಮ: ಸಂಸದ ಜಿಗಜಿಣಗಿ

| Published : Jan 18 2024, 02:02 AM IST

ಇಂಡಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್‌ ರೈಲುಗಳ ನಿಲುಗಡೆಗೆ ಕ್ರಮ: ಸಂಸದ ಜಿಗಜಿಣಗಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗತಿಶಕ್ತಿ ಯೋಜನೆಯ ಕುರಿತು ಪರಿಶೀಲಿಸಲು ಸಂಸದ ರಮೇಶ ಜಿಗಜಿಣಗಿ ಹಾಗೂ ಹುಬ್ಬಳ್ಳಿ ರೈಲ್ವೆ ಇಲಾಖೆಯ ಜನರಲ್‌ ಮ್ಯಾನೇಜರ್ ಸಂಜು ಕಿಶೋರ ಹಾಗೂ ಡಿವಿಜನಲ್‌ ಮ್ಯಾನೇಜರ್‌ ಆಗಮಿಸಿದ ಸಂದರ್ಭದಲ್ಲಿ ಇಂಡಿ ರೈಲು ನಿಲ್ದಾಣದಲ್ಲಿನ ಪಾದಚಾರಿ ರಸ್ತೆ ಹಾಗೂ ವಿವಿಧ ವೇಗಧೂತ ರೈಲುಗಳ ನಿಲುಗಡೆ ಕುರಿತು ಇಂಡಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ ವೇಂಕಟೇಶ ಬೈರಾಮಡಗಿ ಹಾಗೂ ಇತರರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಂಸದ ರಮೇಶ ಜಿಗಜಿಣಗಿ ಸಾರ್ವಜನಿಕರ ಮನವಿ ಸ್ವೀಕರಿಸಿ ಮಾತನಾಡಿ, ಇಂಡಿ ರೈಲು ನಿಲ್ದಾಣದಲ್ಲಿ ಗದಗ ಹೊಸಪೇಟೆ ರೈಲು ಸೇರಿದಂತೆ ಇನ್ನೀತರ ಎಕ್ಸಪ್ರೇಸ್‌ ರೈಲುಗಳನ್ನು ನಿಲುಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ಭವರಸೆ ನೀಡಿದರು.

ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಸೇರಿದಂತೆ ಇದೇ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳ ಮನವಿಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುತ್ತು ಕವಟಗಿ, ಪ್ರವೀಣ ಪಾಗದ, ಪ್ರದೀಪ ತುಪ್ಪದ, ಎಸ್‌.ಎಂ.ಅಡ್ಕಿ ಮೊದಲಾದವರು ಇದ್ದರು.