ಪರಿಸರ ರಕ್ಷಣೆಯಲ್ಲಿ ಕ್ರಿಯಾಶೀಲತೆ ಅಗತ್ಯ: ಡಿಎಫ್‌ಒ ರಮೇಶ್‌ಬಾಬು

| Published : Jun 06 2024, 12:31 AM IST

ಪರಿಸರ ರಕ್ಷಣೆಯಲ್ಲಿ ಕ್ರಿಯಾಶೀಲತೆ ಅಗತ್ಯ: ಡಿಎಫ್‌ಒ ರಮೇಶ್‌ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಸಾಮಾಜಿಕ ಪ್ರಜ್ಞೆಯಷ್ಟೆ ಪರಿಸರ ಪ್ರಜ್ಞೆಯೂ ನಮ್ಮದಾಗಬೇಕು. ಪರಿಸರ ಸಂರಕ್ಷಣೆಯಲ್ಲಿ ಕ್ರಿಯಾ ಶೀಲವಾಗಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರಮೇಶ್‌ಬಾಬು ಕರೆ ನೀಡಿದರು.

ಐಡಿಎಸ್‌ಜಿ ಕಾಲೇಜಿನಲ್ಲಿ ಪರಿಸರ ಮಾಹಿತಿ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾಮಾಜಿಕ ಪ್ರಜ್ಞೆಯಷ್ಟೆ ಪರಿಸರ ಪ್ರಜ್ಞೆಯೂ ನಮ್ಮದಾಗಬೇಕು. ಪರಿಸರ ಸಂರಕ್ಷಣೆಯಲ್ಲಿ ಕ್ರಿಯಾ ಶೀಲವಾಗಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರಮೇಶ್‌ಬಾಬು ಕರೆ ನೀಡಿದರು.ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ರೋವರ್ಸ್‌ ಮತ್ತು ರೇಜರ್ಸ್‌ ಘಟಕ, ರೆಡ್‌ಕ್ರಾಸ್, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕಗಳ ಸಹಯೋಗದೊಂದಿಗೆ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ’ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಬುಧವಾರ ಆಯೋಜಿಸಿದ್ದ ಪರಿಸರ ಜಾಗೃತಿ ’ಮಾಹಿತಿ ಶಿಬಿರ’ ಉದ್ಘಾಟಿಸಿ ಮಾತನಾಡಿದರು. ಪರಿಸರದ ಜೊತೆಗೆ ನಮ್ಮ ಒಡನಾಟ ನಿರಂತರವಾಗಿದ್ದರೂ ಸಮತೋಲನ ಕಾಪಾಡಿಕೊಳ್ಳಲು ಹೋರಾಟ ನಡೆಯುತ್ತಲೇ ಇದೆ. ಭೂಮಂಡಲದ ಮೇಲೆ ಗಿಡ ಮರಗಳು ಕಡಿಮೆಯಾದಂತೆಲ್ಲ ಕಾಲಕ್ರಮೇಣ ಭೂಮಿ ತೇವಾಂಶ ಮತ್ತು ಸಾರಾಂಶ ಕಡಿಮೆಯಾಗುತ್ತಿದೆ. ಅಭಿವೃದ್ಧಿಯ ನಾಗಲೋಟದಲ್ಲಿ ವನಸ್ಪತಿ, ಸಸ್ಯ ಸಂಪತ್ತು ಕಡಿಮೆ ಯಾಗಿದೆ. ವಿವಿಧ ಕಾರಣಗಳಿಗೆ ಭೂಮಿಯ ಫಲವತತ್ತೆಯೂ ಕ್ಷೀಣಿಸುತ್ತಾ ಒಣಭೂಮಿ ನಂತರ ಮರು ಭೂಮಿಯಾಗಿ ಪರಿವರ್ತನೆಯಾಗುವ ಅಪಾಯವಿದೆ ಎಂದು ಹೇಳಿದರು.

ಜೀವವೈವಿಧ್ಯತೆಯ ಏರುಪೇರು ಮರು ಭೂಮೀಕರಣದ ವಿಸ್ತರಣೆ ಆಗುತ್ತಿದೆ. ಇದನ್ನು ತಡೆಯುವುದು ನಮ್ಮೆಲ್ಲರ ತುರ್ತು ಹೊಣೆಗಾರಿಕೆ. ಭೂಮಿ ಯೋಗ್ಯತೆಗೆ ಅನುಸಾರವಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ಅರಣ್ಯ ಭೂಮಿ, ಕೃಷಿ ಭೂಮಿ ವ್ಯತ್ಯಾಸ ಅರಿಯಬೇಕು. ಈ ಹಿನ್ನಲೆಯಲ್ಲಿ ಹಿಮಾಚಲಪ್ರದೇಶ, ತಮಿಳು ನಾಡು, ಒಡಿಸ್ಸಾ ಮತ್ತಿತರ ರಾಜ್ಯಗಳಲ್ಲಿ ಕಾಯ್ದೆಗಳೆ ಜಾರಿಯಲ್ಲಿವೆ ಎಂದ ರಮೇಶ್‌ಬಾಬು, ಪರಿಸರ ಸಂರಕ್ಷಣೆ ಕಾರ್‍ಯದಲ್ಲಿ ಕ್ರಿಯಾಶೀಲವಾಗಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.ಭಾರತ ಸ್ಕೌಟ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಪ್ರಧಾನ ಉಪನ್ಯಾಸ ನೀಡಿ, ವೈವಿಧ್ಯಮಯವಾದ ಸಸ್ಯ ಮತ್ತು ಪ್ರಾಣಿಗಳನ್ನೊಳಗೊಂಡ ಜೀವಸಂಕುಲಕ್ಕೆ ಪ್ರಕೃತಿ ಆಧಾರವಾಗಿದೆ. ಪರಿಸರದ ಕೊಂಡಿ ಎಲ್ಲರೊಂದಿಗೂ ಹದವಾಗಿ ಬೆಸೆದಿದೆ. ಒಂದು ಕೊಂಡಿ ಕಳಚಿದರೂ ಅಪಾಯ ತಪ್ಪಿದ್ದಲ್ಲ. ಪರಿಸರ ಸಂರಕ್ಷಣೆ ನಮ್ಮ ಸ್ವಾಭಾವಿಕ ಗುಣಲಕ್ಷಣವಾಗಬೇಕು ಎಂದರು. ಜಪಾನ್ ದೇಶದಲ್ಲಿ ಈಗಲೂ ಶೇ.66ರಷ್ಟು ಅರಣ್ಯ ಇದೆ. ಜನರ ಉಪಯೋಗಕ್ಕೆ ಬೇಕಾದ ಮರ ಮುಟ್ಟುಗಳನ್ನು ಮಲೇಶಿಯಾ, ಇಂಡೋನೇಶಿಯಾದಂತಹ ದೇಶಗಳಿಂದ ಖರೀದಿಸುತ್ತಾರೆ. ಜಪಾನ್, ಚೀನಾ ದೇಶಗಳು ಭಾರತದಿಂದ ಅದಿರು ತರಿಸಿಕೊಂಡು ಸಿದ್ಧ ವಸ್ತುಗಳಾಗಿ ಪರಿವರ್ತಿಸಿ ನಮಗೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭಮಾಡಿಕೊಳ್ಳುವ ಜೊತೆಗೆ ತಮ್ಮ ನೆಲದ ಖನಿಜವನ್ನು ಸಂರಕ್ಷಿಸುತ್ತಿವೆ ಎಂದರು.

ಪೊಲೀಸ್‌ ಸಬ್‌ಇನ್ಪ್‌ಕ್ಟರ್ ರವಿ ಮಾತನಾಡಿ, ಮನುಷ್ಯನ ದುರಾಸೆ ಫಲವಾಗಿ ಸಮೃದ್ಧ ಪ್ರಾಕೃತಿಕ ಸಂಪತ್ತು, ಅರಣ್ಯ ನಾಶವಾಗುತ್ತಿದೆ. ಮನೆ ಬಳಕೆಗಾಗಿ ಬೆಳೆಯುತ್ತಿದ್ದ ಉತ್ಪನ್ನಗಳೆಲ್ಲ ವಾಣಿಜ್ಯೀ ಕರಣಗೊಂಡಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿ ವಾಣಿಜ್ಯ ಉದ್ದೇಶದ ಬೆಳೆಗಾಗಿ ಬಳಕೆ ಮಾಡಿ ಕೊಳ್ಳುವ ಅಭ್ಯಾಸ ಮುಂದುವರಿದ ಪರಿಣಾಮ ಸಹಜ ಕಾಡು ನಾಶವಾಗುತ್ತಿದೆ ಎಂದು ಹೇಳಿದರು.

ಕಾಲೇಜು ಕ್ರೀಡಾ ವಿಭಾಗದ ಸಂಚಾಲಕ ಕೆ.ಎನ್.ಲಕ್ಷ್ಮೀಕಾಂತ ಮಾತನಾಡಿ, ತಾರಾಮಂಡಲದಲ್ಲಿ ಜೀವಿಗಳು ವಾಸಮಾಡಲು ಯೋಗ್ಯವಾದ ಏಕೈಕ ತಾಣವೇ ಭೂಮಂಡಲ. ಸಕಲಜೀವಿ ಚರಾಚರಗಳ ಆವಾಸ ಸ್ಥಾನವಾಗಿರುವ ಭೂಮಿಯನ್ನು ಹಾಳು ಮಾಡುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಐಡಿಎಸ್‌ಜಿ ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ.ಕೆ.ಸಿ.ಚಾಂದಿನಿ ಮಾತನಾಡಿ, ಗಿಡನೆಡುವುದಷ್ಟೇ ಅಲ್ಲ, ಅದರ ಪಾಲನೆ ಪೋಷಣೆಗೂ ಆಸಕ್ತಿ ವಹಿಸಬೇಕು. ಮಲೆನಾಡಿನಲ್ಲೂ ಈ ಬಾರಿ ಬಿರುಬೇಸಿಗೆ ಅಸಹನೀಯವಾಗಿತ್ತು. ಹಿಂದೆಲ್ಲ ದೇವರಕಾಡು, ಚೌಡಿಬನ, ನಾಗರಬನದ ಹೆಸರಿನಲ್ಲಿ ಪ್ರತಿ ಊರುಗಳಲ್ಲೂ ಒಂದಷ್ಟು ಪ್ರದೇಶದ ಅರಣ್ಯವನ್ನು ಶ್ರದ್ಧಾಭಕ್ತಿಯಿಂದ ಉಳಿಸಿಕೊಂಡು ಬರಲಾಗುತ್ತಿದೆ ಎಂದರು.

ಅಭಿವೃದ್ಧಿ ಹೆಸರಿನಲ್ಲಿ ನೂರಾರು ವರ್ಷಗಳ ಮರ ಆಹುತಿಯಾಗುತ್ತಿದೆ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅಪರೂಪದ ಮರಗಳು ಅವನ್ನು ಆಶ್ರಯಿಸಿದ ಬಳ್ಳಿಗಳು ಕಣ್ಮರೆಯಾಗುತ್ತಿವೆ. ಕನಿಷ್ಟಪಕ್ಷ ಇಂತಹ ತಳಿಯನ್ನಾದರೂ ಸಂರಕ್ಷಿಸಲು ಇಲಾಖೆ ಮುಂದಾಗಬೇಕೆಂದು ತಿಳಿಸಿದರು.ವಿದ್ಯಾರ್ಥಿ ಉಲ್ಲಾಸ್, ರೋವರ್ಸ್‌ ಸ್ಕೌಟ್ಕ್‌ ಲೀಡರ್ ಪ್ರೊ.ಈ.ಸತೀಶ್ , ರೆಡ್‌ಕ್ರಾಸ್ ಸಂಚಾಲಕ ಪ್ರೊ.ಎಂ.ಲೋಕೇಶ್ , ಐಕ್ಯೂಎ.ಸಿ.ಸಂಚಾಲಕಿ ಡಾ.ಕಲಾವತಿ, ಗೈಡ್ಸ್ ಜಿಲ್ಲಾ ಆಯುಕ್ತೆ ಡಿ.ಎಸ್. ಮಮತಾ, ಜಿಲ್ಲಾ ಸಂಘಟನಾ ಆಯುಕ್ತ ಕಿರಣಕುಮಾರ್, ತರಬೇತಿ ಆಯುಕ್ತೆ ಸಂಧ್ಯಾರಾಣಿ ಇದ್ದರು.ಪೋಟೋ ಫೈಲ್ ನೇಮ್‌ 5 ಕೆಸಿಕೆಎಂ 1ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ’ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಬುಧವಾರ ಆಯೋಜಿಸಿದ್ದ ಪರಿಸರ ಜಾಗೃತಿ ’ಮಾಹಿತಿ ಶಿಬಿರ’ವನ್ನು ಡಿಎಫ್‌ಒ ರಮೇಶ್‌ಬಾಬು ಉದ್ಘಾಟಿಸಿದರು. ಎಂ.ಎನ್‌. ಷಡಕ್ಷರಿ, ಡಾ. ಚಾಂದಿನಿ, ರವಿ, ಕಿರಣಕುಮಾರ್‌, ಡಾ. ಕಲಾವತಿ ಇದ್ದರು.

-----

(ಈ ಫೋಟೊ ಪ್ಯಾನಲ್‌ಗೆ ಬಳಸಿ)

ಪೋಟೋ ಫೈಲ್ ನೇಮ್‌ 5 ಕೆಸಿಕೆಎಂ 2ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಅಂಬರ್‌ ವ್ಯಾಲಿ ವಸತಿ ಶಾಲೆ ವಿದ್ಯಾರ್ಥಿಗಳು ಸೈಕಲ್‌ ಜಾಥಾದ ಮೂಲಕ ಪರಿಸರ ಅರಿವು ಮೂಡಿಸಿದರು.