ಸಾರಾಂಶ
Activists celebrate BJP's victory
ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವು ಹಾಗೂ ಜಮ್ಮು ಕಾಶ್ಮೀರದಲ್ಲಿ ಅಭೂತಪೂರ್ವ ಸಾಧನೆಗೈದ ಭಾರತೀಯ ಜನತಾ ಪಾರ್ಟಿಯ ಗೆಲುವಿನಿಂದ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು. ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು ಬಿಜೆಪಿ ಅಭೂತ ಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಮಂಡಲ ಅಧ್ಯಕ್ಷ ಡಾ ಪಿ.ಎಂ.ಮಂಜುನಾಥ, ಮುಖಂಡರಾದ ಶ್ರೀರಾಮರೆಡ್ಡಿ, ಕೃಷ್ಣಪ್ಪ, ಮೂರ್ತಿ, ನಾಗರಾಜ್, ಪ.ಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ಲಕ್ಷ್ಮಣ ಪಿ, ಮಂಜಣ್ಣ, ಪಕ್ಷದ ಪದಾಧಿಕಾರಿಗಳಾದ ಪ್ರಭಾಕರ, ಸಿದ್ದಾರ್ಥ, ಹರೀಶ್, ಗೋವಿಂದಣ್ಣ, ಕಿರಣ್ ಗಾಯಕ್ವಾಡ್, ತಿಪ್ಪೇಸ್ವಾಮಿ, ಮರಿಸ್ವಾಮಿ, ಸ್ವಾಮಿ, ಸಿದ್ದಣ್ಣ, ಶಿವು ಕೆರೆ, ರಾಮಾಂಜಿನೇಯ, ಹನುಮಂತಪ್ಪ, ಶಿವಣ್ಣ ಇದ್ದರು.----