ಬಿಜೆಪಿಗೆ ಹೊಸ ಸದಸ್ಯರ ನೋಂದಣಿಗೆ ಕಾರ್ಯಕರ್ತರು ಶ್ರಮಿಸಿ-ಬಿ.ಸಿ. ಪಾಟೀಲ

| Published : Sep 29 2024, 01:34 AM IST

ಬಿಜೆಪಿಗೆ ಹೊಸ ಸದಸ್ಯರ ನೋಂದಣಿಗೆ ಕಾರ್ಯಕರ್ತರು ಶ್ರಮಿಸಿ-ಬಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಬಿಜೆಪಿ ಸದಸ್ಯರನ್ನು ನೋಂದಣಿ ಮಾಡಿಸಲು ಪಕ್ಷ ೬೦,೦೦೦ ಗುರಿಯನ್ನು ಕೊಟ್ಟಿದೆ. ಆದ್ದರಿಂದ ಎಲ್ಲ ಪ್ರಮುಖ ಕಾರ್ಯಕರ್ತರು ತಮ್ಮ ಗ್ರಾಮಗಳಿಗೆ ತೆರಳಿ ಮನೆ ಮನೆ ಸಂಪರ್ಕ ಮಾಡಿ ಬಿಜೆಪಿಗೆ ಹೊಸ ಸದಸ್ಯರನ್ನು ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದರು.

ಹಿರೇಕೆರೂರು:ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಬಿಜೆಪಿ ಸದಸ್ಯರನ್ನು ನೋಂದಣಿ ಮಾಡಿಸಲು ಪಕ್ಷ ೬೦,೦೦೦ ಗುರಿಯನ್ನು ಕೊಟ್ಟಿದೆ. ಆದ್ದರಿಂದ ಎಲ್ಲ ಪ್ರಮುಖ ಕಾರ್ಯಕರ್ತರು ತಮ್ಮ ಗ್ರಾಮಗಳಿಗೆ ತೆರಳಿ ಮನೆ ಮನೆ ಸಂಪರ್ಕ ಮಾಡಿ ಬಿಜೆಪಿಗೆ ಹೊಸ ಸದಸ್ಯರನ್ನು ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದರು.

ತಾಲೂಕಿನ ಬಾಳಂಬೀಡ ಗ್ರಾಮದ ಬಿ.ಸಿ. ಪಾಟೀಲ್ ಅವರ ನಿವಾಸದ ಕಚೇರಿಯಲ್ಲಿ ಬಿಜೆಪಿ ಹಿರೇಕೆರೂರು ಮಂಡಲದ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನದ ಸಲುವಾಗಿ ಶಕ್ತಿ ಕೇಂದ್ರಗಳ ಹಾಗೂ ಮಹಾ ಶಕ್ತಿ ಕೇಂದ್ರಗಳ ಪ್ರಮುಖರ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ವಿಶೇಷ ಸಭೆಯನ್ನುದೇಶಿಸಿ ಮಾತನಾಡಿದರು. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ೧೫೦೦೦೦ ಸಾವಿರ ಸದಸ್ಯರ ನೋಂದಾಯಿಸಬೇಕು. ಸದಸ್ಯತ್ವ ಅಭಿಯಾನ ವೇಳೆ ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಸಾರ್ವಜನಿಕರಲ್ಲಿ ತಿಳಿಹೆಳಬೇಕು. ಕೇಂದ್ರ ಸರ್ಕಾರದ ಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಈಡೇರಿಸಬೇಕು ಎಂದರು,

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶಿವಕುಮಾರ್ ತಿಪ್ಪಶೆಟ್ಟಿ, ಮುಖಂಡರಾದ ಎನ್.ಎಂ. ಈಟೇರ್, ಎಸ್.ಎಸ್. ಪಾಟೀಲ್, ಲಿಂಗಾಚಾರ ಮಾಯಾಚಾರ್, ರವಿಶಂಕರ್ ಬಾಳಿಕಾಯಿ, ಜಗದೀಶ ದೊಡ್ಡಗೌಡ್ರು, ಗೀತಾ ದಂಡಿಗೆಹಳ್ಳಿ, ಮಧು ಪಾಟೀಲ್, ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ತೋರಣಗಟ್ಟಿ, ಹನುಮಂತಪ್ಪ ಕುರುಬರ ಹಾಗೂ ಇತರರು ಉಪಸ್ಥಿತರಿದ್ದರು.