ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ನಟ ಪುನೀತ್ ರಾಜ್ ಕುಮಾರ್ ಅವರ ಸಮಾಜಮುಖಿ ಕಾರ್ಯಗಳು ಹಾಗೂ ಚಿಂತನೆಗಳು ಯುವ ಸಮೂಹಕ್ಕೆ ಮಾದರಿ ಎಂದು ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಹೇಳಿದರು.ತಾಲೂಕಿನ ತಮ್ಮಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನದ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿ, ತಮ್ಮ ಚಲನಚಿತ್ರಗಳ ಮೂಲಕ ಯುವ ಸಮೂಹಕ್ಕೆ ಆಕರ್ಷಿಕರಾಗಿದ್ದ ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಕಾರ್ಯಗಳು ಜನಪ್ರಿಯವಾಗಿದ್ದವು ಎಂದರು.
ಪುನೀತ್ ಮತೊಮ್ಮೆ ನಮ್ಮ ನಾಡಿನಲ್ಲಿ ಹುಟ್ಟಿ ಬರಬೇಕು. ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಅಭಿನಯಿಸಿ ಜನರ ಮನಸ್ಸು ಗೆದ್ದಿದ್ದರು. ಅವರು ಬದುಕಿಲ್ಲದಿದ್ದರೂ ಎಲ್ಲರ ಆತ್ಮದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.ಸಿದ್ದಪ್ಪಾಜಿ ಸೇವಾ ಸಮಿತಿ ಜವರಾಯ, ಶಿವಕುಮಾರ್, ಟಿ.ಸಿ.ಪ್ರಕಾಶ್, ಅಂಗಡಿಸಿದ್ದು, ಕುಮಾರ್, ಸಿದ್ದರಾಜು, ನಾಗಣ್ಣ, ಹುಚ್ಚಯ್ಯ, ಬೆಳ್ಳಪ್ಪ, ಲೋಕೇಶ್, ಸಿದ್ದಪ್ಪ, ಟಿ.ಬಿ.ನಾಗರಾಜು, ಆರತಿ, ನಾಗರತ್ನಮ್ಮ, ಸುಬ್ಬಣ್ಣ, ಅನಿತಾ ಪಾಲ್ಗೊಂಡಿದ್ದರು.
ದಿ.ಪುನೀತ್ ರಾಜ್ ಕುಮಾರ್ ಜನ್ಮದಿನಾಚರಣೆ:ಶುಕ್ರವಾರ ಪಟ್ಟಣದ ಆನಂತ್ ರಾಂ ವೃತ್ತದ ಬಳಿ ರಾ.ಶಿ.ರಾ.ಪು ಸಂಘದಿಂದ ನಡೆದ ನಟ ದಿ.ಪುನೀತ್ ರಾಜ್ ಕುಮಾರ್ ಜನ್ಮದಿನಾಚರಣೆಯಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರು ಚಿತ್ರನಟರಾಗಿದ್ದು ಕೊಂಡೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ಶ್ಲಾಘಿಸಿದರು.
ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ಅವರ ಸೇವಾ ಕಾರ್ಯಗಳನ್ನು ಇಂದಿನ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದರು.ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಪುನೀತ್ ರಾಜ್ ಕುಮಾರ್ ಕೇವಲ ನಟರಾಗಿರಲಿಲ್ಲ. ಬದಲಾಗಿ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಡಿನ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದರು ಎಂದರು.
ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಮೂರೂವರೆ ವರ್ಷ ಕಳೆದರೂ ಅವರ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗಿಲ್ಲ, ತಂದೆಯಂತೆ ಅವರು ಸಹ ಕನ್ನಡಾಭಿಮಾನ ಬೆಳೆಸಿಕೊಂಡು ನಾಡಿನ ಹಿತದೃಷ್ಟಿಗೆ ಸದಾ ದುಡಿಯುತ್ತಿದ್ದ ಅವರನ್ನು ಯುವಕರು ಮಾದರಿಯಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಇದೇ ವೇಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಾಜಣ್ಣ, ಪರಿಸರ ಪ್ರೇಮಿ ಸಾಲುಮರದ ನಾಗರಾಜು ಅವರನ್ನು ಅಭಿನಂದಿಸಲಾಯಿತು. ಸಾರ್ವಜನಿಕರಿಗೆ ಅನ್ನಸಂಪರ್ತಣೆ ನಡೆಯಿತು. ಕಾರ್ಯಕ್ರಮದಲ್ಲಿದ್ದ ಗಣ್ಯರು ಪುನೀತ್ ರಾಜ್ ಕುಮಾರ್ ಪೂಜೆ ಸಲ್ಲಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾದ ನೂರುಲ್ಲಾ, ನಾಗೇಶ್, ಬಿಜೆಪಿ ಮುಖಂಡ ಮಧು ಗಂಗಾಧರ್, ರಾ.ಶಿ.ರಾ.ಪು ಸಂಘದ ಅಧ್ಯಕ್ಷ ಕೃಷ್ಣ, ಗ್ರಾಪಂ ಸದಸ್ಯ ನಂಜುಂಡ, ಮುಖಂಡರಾದ ಪೊತ್ತಂಡೆ ನಾಗರಾಜು, ಗುಳಘಟ್ಟ ಜವರೇಗೌಡ, ರೇವಣ್ಣ, ಮಹದೇವು, ಕುಮಾರ್, ಸುನೀ ಬೆಳ್ಳಿ, ಮಹೇಶ್, ಅಕ್ಕಿ ಕೃಷ್ಣ, ಚಿನ್ನಗಿರಿ, ನಾಗೇಂದ್ರ, ಮಾದೇಶ್, ಮಹದೇವಸ್ವಾಮಿ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.