ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ವಂಡರ್ ಲಾ ದಲ್ಲಿ ಪರಿಚಯಿಸುತ್ತಿರುವ ಎಲ್ ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ಮಿಷನ್ ಇಂಟರ್ ಸ್ಟೆಲ್ಲರ್ ಗೆ ಚಿತ್ರನಟಿ ಆಶಿಕಾ ರಂಗನಾಥ್ ಶುಕ್ರವಾರ ಚಾಲನೆ ನೀಡಿದರು.ವಂಡರ್ ಲಾ ಸುಮಾರು 35 ಕೋಟಿ ರು.ಗಳ ಹೂಡಿಕೆಯೊಂದಿಗೆ ಯುಎಸ್ ಮತ್ತು ಯೂರೇಪಿನ ಪ್ರಮುಖ ಥೀಮ್ ಪಾರ್ಕ್ ವಿನ್ಯಾಸ ಕಂಪನಿಗಳೊಂದಿಗೆ ಬಾಹ್ಯಾಕಾಶ ವಿಷಯ ಹೊಂದಿರುವ ಮಿಷನ್ ಇಂಟರ್ ಸ್ಟೆಲ್ಲಾರ್ ರೈಡ್ ಮಾಡಿ ಆಶಿಕಾ ರಂಗನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಅದ್ಭುತ ಅನುಭವವನ್ನು ಅನುಭವಿಸಲು ವಿದೇಶಗಳಿಗೆ ತೆರಳಬೇಕಿತ್ತು. ಆದರೆ, ವಂಡರ್ ಲಾ ಬೆಂಗಳೂರಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ಥಿಯೇಟರ್ ಅನ್ನು ಸ್ಥಾಪಿಸಿರುವುದು ಹಾಗೂ ಅದನ್ನು ಸ್ವತಃ ನಾನೇ ಉದ್ಘಾಟಿಸಿರುವುದು ಅತ್ಯಂತ ಸಂತೋಷ ನೀಡಿದೆ ಎಂದರು.ಇಂಟರ್ ಸ್ಟೆಲ್ಲರ್ ಥಿಯೇಟರ್ ನ ರೈಡ್ ಬಾಹ್ಯಾಕಾಶಕ್ಕೆ ಹೋಗಿ ಬಂದಂತಹ ಅತ್ಯದ್ಭುತ ಅನುಭವವನ್ನು ನೀಡಿದೆ. ಆರಂಭದಲ್ಲಿ ನನಗೆ ಕೊಂಚ ಹೆದರಿಕೆ ಆಗಿತ್ತು. ಆದರೆ, ಎಲ್ಲಾ ರಕ್ಷಣಾ ಮಾನದಂಡಗಳನ್ನು ಅಳವಡಿಸಿರುವುದರಿಂದ ಯಾವುದೇ ಅಪಾಯವಿಲ್ಲ ಎಂದು ನಂತರ ತಿಳಿಯಿತು. ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ತಪ್ಪದೇ ಆಗಮಿಸಿ, ಇಂಟರ್ ಸ್ಟೆಲ್ಲರ್ ಥಿಯೇಟರ್ ನ ರೋಮಾಂಚಕಾರಿ ಅನುಭವವನ್ನು ಪಡೆಯಿರಿ ಎಂದು ಮನವಿ ಮಾಡಿದರು.
ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ ಮಾತನಾಡಿ, ಮಿಷನ್ ಇಂಟರ್ ಸ್ಟೆಲ್ಲರ್ ನೊಂದಿಗೆ, ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಉತ್ಸಾಹದೊಂದಿಗೆ ತಡೆರಹಿತವಾಗಿ ಬೆರೆಸುವ ಅದ್ಭುತ ಮನರಂಜನೆಯ ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.ವಂಡರ್ ಲಾ ಸಂದರ್ಶಕರ ನಿರಂತರವಾಗಿ ಬದಲಾಗುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ವಿಕಸನಗೊಂಡಿದೆ ಮತ್ತು ಮಿಷನ್ ಇಂಟರ್ ಸ್ಟೆಲ್ಲರ್ ವಿಶ್ವ ದರ್ಜೆಯ ಅನುಭವಗಳನ್ನು ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ವರ್ಷ ವಂಡರ್ ಲಾ 25ನೇ ವರ್ಷವನ್ನು ಆಚರಿಸಿಕೊಳ್ಳುವುದನ್ನು ನಾವು ಎದುರು ನೋಡುತ್ತಿರುವಾಗ, ಈ ಉದ್ಘಾಟನೆಯ ನಮ್ಮ ಪ್ರಯಾಣಕ್ಕೆ ಪ್ರಮುಖ ಸೇರ್ಪಡೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಸುರಕ್ಷತೆಯು ನಮ್ಮ ಉನ್ನತ ಆದ್ಯತೆಯಾಗಿ ಉಳಿದಿದೆ: ಸವಾರಿ ಆಯ್ಕೆ ಮತ್ತು ಸ್ಥಾಪನೆಯಿಂದ ಹಿಡಿದು ಕಠಿಣ ದೈನಂದಿನ ತಪಾಸಣೆ ಮತ್ತು ಸಿಬ್ಬಂದಿ ತರಬೇತಿಯವರೆಗೆ, ನಮ್ಮ ಅತಿಥಿಗಳಿಗೆ ತಡೆರಹಿತ, ಒತ್ತಡ ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ಅತ್ಯುನ್ನತ ಜಾಗತಿಕ ಮಾನದಂಡಗಳಿಗೆ ಬದ್ಧರಾಗಿದ್ದೇವೆ. ನಾವೀನ್ಯತೆ, ಸುರಕ್ಷತೆ ಮತ್ತು ಅತಿಥಿ ತೃಪ್ತಿಯ ಮೇಲಿನ ಈ ಅಚಲ ಗಮನದೊಂದಿಗೆ, ವಂಡರ್ ಲಾ ಮನರಂಜನೆಯನ್ನು ಮರುವ್ಯಾಖ್ಯಾನಿಸುತ್ತಲೇ ಇದೆ. ಲಕ್ಷಾಂತರ ಸಂದರ್ಶಕರಿಗೆ ಸಂತೋಷ, ರೋಮಾಂಚನ ಮತ್ತು ಮ್ಯಾಜಿಕ್ ಅನ್ನು ತರುತ್ತದೆ ಎಂದು ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ ಹೇಳಿದರು.ಈ ವೇಳೆ ವಂಡರ್ ಲಾ ಹಾಲಿಡೇಸ್ ನ ಸಿಇಒ ಧೀರನ್ ಚೌಧರಿ, ಪಾರ್ಕ್ ಮುಖ್ಯಸ್ಥ ಎಚ್.ಎಸ್. ರುದ್ರೇಶ್ ಉಪಸ್ಥಿತರಿದ್ದರು.