ಸಾರಾಂಶ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನ ನಿವೃತ್ತ ಅಧ್ಯಕ್ಷ ಡಾ.ಎಂ.ನರೇಂದ್ರ, ಸಿನೆಮಾನಟಿ, ನಿರ್ಮಾಪಕಿ ಡಾ. ಜಯಮಾಲಾ ರಾಮಚಂದ್ರ, ಮಣಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್. ಮಂಜುನಾಥ ಹಂದೆ, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ. ಎಡ್ಕತೋಡಿ ಸಂಜೀವ ರೈ ಹಾಗೂ ಹಿರಿಯ ಕೃಷಿಕ ಬೆಳ್ತಂಗಡಿಯ ಬಿ.ಕೆ. ದೇವ ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತಿವರ್ಷದಂತೆ ಕಲೆ, ಸಂಸ್ಕೃತಿ, ವೈದ್ಯಕೀಯ ಮತ್ತು ಕೃಷಿ ಕ್ಕ್ಷೇತ್ರದ ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿಗಳನ್ನು ಶುಕ್ರವಾರ ಪ್ರದಾನ ಮಾಡಲಾಯಿತು.ಈ ಸಾಲಿನಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನ ನಿವೃತ್ತ ಅಧ್ಯಕ್ಷ ಡಾ.ಎಂ.ನರೇಂದ್ರ, ಸಿನೆಮಾನಟಿ, ನಿರ್ಮಾಪಕಿ ಡಾ. ಜಯಮಾಲಾ ರಾಮಚಂದ್ರ, ಮಣಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್. ಮಂಜುನಾಥ ಹಂದೆ, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ. ಎಡ್ಕತೋಡಿ ಸಂಜೀವ ರೈ ಹಾಗೂ ಹಿರಿಯ ಕೃಷಿಕ ಬೆಳ್ತಂಗಡಿಯ ಬಿ.ಕೆ. ದೇವ ರಾವ್ ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಹಯೋಗ ಸಂಸ್ಥೆಗಳ ಮುಖ್ಯಸ್ಥರಾದ ಟಿ. ಸತೀಶ್ ಪೈ, ವಾಸಂತಿ ರಾಮದಾಸ್ ಪೈ, ಅಶೋಕ್ ಪೈ ಉಪಸ್ಥಿತರಿದ್ದರು. ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರು. ಉಪಕುಲಪತಿ ಡಾ.ಎಂ.ಡಿ.ವೆಂಕಟೇಶ್ ಅಭಿನಂದನಾ ಭಾಷಣ ಮಾಡಿದರು, ಡಾ. ರವಿರಾಜ್ ಎನ್.ಎಸ್. ವಂದಿಸಿದರು.ತಾಯಿ- ಮಗಳಿಗೆ ಕಂಚಿನ ಪದಕ
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಕರ್ನಾಪೆಕ್ಸ್ - 2024ರಲ್ಲಿ ಉಡುಪಿ ಅಂಚೆ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರ ಸ್ಪೆಷಲ್ ನ್ಯಾಷನಲ್ ಆ್ಯಂಡ್ ಇಂಟರ್ ನ್ಯಾಷನಲ್ ಡೇಸ್ ಹಾಗೂ ಅವರ ಮಗಳು ಪ್ರಜ್ಞಾ ಜನಾರ್ದನ್ ಅವರ ಆರ್ಮಿ ಪೋಸ್ಟಲ್ ಕವರ್ ಸಂಗ್ರಹಕ್ಕೆ ಇಬ್ಬರಿಗೂ ಕಂಚಿನ ಪದಕದ ಪುರಸ್ಕಾರ ಪ್ರದಾನ ಮಾಡಲಾಗಿದೆ.ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ಬೆಂಗಳೂರು ದಕ್ಷಿಣ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಸ್, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್ ಹಾಗೂ ಜನರಲ್ ಮ್ಯಾನೇಜರ್ ಡಿಎಪಿ ಜೂಲಿಯಾ ಮೊಹಪಾತ್ರ ಉಪಸ್ಥಿತರಿದ್ದರು.