ಸಾರಾಂಶ
ಮಂತ್ರ ಮಾಂಗಲ್ಯ ಪದ್ಧತಿಯಂತೆ ಕುಪ್ಪಳ್ಳಿಯಲ್ಲಿ ಮದುವೆಯಾಗ ಬಯಸಿದ್ದ ಪೂಜಾ ಗಾಂಧಿ, ಅವರ ತಾಯಿ ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿನಲ್ಲಿಯೇ ಮಂತ್ರಮಾಂಗಲ್ಯದಂತೆ ವಿವಾಹವಾಗಿದ್ದರು. ಈ ವಿವಾಹವನ್ನು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ನೇತೃತ್ವದಲ್ಲಿ ಚಿತ್ರ ಸಾಹಿತಿ, ತಾಲೂಕಿನವರಾದ ಕವಿರಾಜ ಅವರು ನಡೆಸಿಕೊಟ್ಟಿದ್ದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ರಾಷ್ಟ್ರಕವಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ಪತಿಯೊಂದಿಗೆ ಮಂಗಳವಾರ ಕುಪ್ಪಳಿಗೆ ಆಗಮಿಸಿ ರಾಷ್ಟ್ರಕವಿ ಜನಿಸಿದ ಹಿರೇಕೊಡಿಗೆ ಸೇರಿದಂತೆ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದರು.ಪತಿ ವಿಜಯ್ ರಾಥೋಡ್ ಅವರೊಂದಿಗೆ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ದೇವಂಗಿ ಮನೆ ಮತ್ತು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಮನೆಗಳಿಗೆ ಭೇಟಿ ನೀಡಿ, ಅವರ ಆತಿಥ್ಯ ಸ್ವೀಕರಿಸಿದರು.
ಮಂತ್ರ ಮಾಂಗಲ್ಯ ಪದ್ಧತಿಯಂತೆ ಕುಪ್ಪಳ್ಳಿಯಲ್ಲಿ ಮದುವೆಯಾಗ ಬಯಸಿದ್ದ ಪೂಜಾ ಗಾಂಧಿ, ಅವರ ತಾಯಿ ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿನಲ್ಲಿಯೇ ಮಂತ್ರಮಾಂಗಲ್ಯದಂತೆ ವಿವಾಹವಾಗಿದ್ದರು. ಈ ವಿವಾಹವನ್ನು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ನೇತೃತ್ವದಲ್ಲಿ ಚಿತ್ರ ಸಾಹಿತಿ, ತಾಲೂಕಿನವರಾದ ಕವಿರಾಜ ಅವರು ನಡೆಸಿಕೊಟ್ಟಿದ್ದರು.- - - -6ಟಿಟಿಎಚ್02:
ತೀರ್ಥಹಳ್ಳಿ ತಾಲೂಕಿನ ರಾಷ್ಟ್ರಕವಿ ಕುವೆಂಪು ಆಶಯದ ಮಂತ್ರ ಮಾಂಗಲ್ಯದಂತೆ ಮದುವೆಯಾದ ಕನ್ನಡದ ನಟಿ ಪೂಜಾ ಗಾಂಧಿ, ಪತಿ ವಿಜಯ್ ರಾಥೋಡ್ ಮಂಗಳವಾರ ಕುಪ್ಪಳಿಗೆ ಬೇಟಿ ನೀಡಿದರು.