ಗ್ರಾಮಾಭಿವೃದ್ಧಿಗೆ ಅದಾನಿ ಪವರ್ 1.10 ಕೋಟಿ ರು. ಮೀಸಲು: ಕಿಶೋರ್‌ ಆಳ್ವ

| Published : Dec 22 2023, 01:30 AM IST

ಗ್ರಾಮಾಭಿವೃದ್ಧಿಗೆ ಅದಾನಿ ಪವರ್ 1.10 ಕೋಟಿ ರು. ಮೀಸಲು: ಕಿಶೋರ್‌ ಆಳ್ವ
Share this Article
  • FB
  • TW
  • Linkdin
  • Email

ಸಾರಾಂಶ

ಅದಾನಿ ಪವರ್ ಲಿಮಿಟೆಡ್, ತನ್ನ ಅಂಗಸಂಸ್ಥೆ ಅದಾನಿ ಫ಼ೌಂಡೇಷನ್‌ನ ಮೂಲಕ ಸಿಎಸ್ ಆರ್ ಯೋಜನೆಯಡಿ ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ರಸ್ತೆಯ ಕಾಂಕ್ರಿಟ್‌ ಕಾಮಗಾರಿಗೆ ಪಂಚಾಯಿತಿ ಅಧ್ಯಕ್ಷ ಸೌಮ್ಯಲತಾ ಶೆಟ್ಟಿ ಅವರೊಂದಿಗೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ಕಾಪು

ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ನ ಉಡುಪಿ ಟಿಪಿಪಿ ಸಂಸ್ಥೆಯ ಸಿಎಸ್ ಆರ್ ಯೋಜನೆಯಡಿ ಈ ವಾರ್ಷಿಕ ಸಾಲಿನಲ್ಲಿ ೧.೧೦ ಕೋಟಿ ರು. ಮೀಸಲಿಟ್ಟಿದ್ದು, ಸ್ಥಳೀಯ 7 ಗ್ರಾ.ಪಂ.ಗಳಲ್ಲಿ ತಲಾ ೧೫ - ೨೦ ಲಕ್ಷ ರು.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದ್ದಾರೆ.

ಅದಾನಿ ಪವರ್ ಲಿಮಿಟೆಡ್, ತನ್ನ ಅಂಗಸಂಸ್ಥೆ ಅದಾನಿ ಫ಼ೌಂಡೇಷನ್‌ನ ಮೂಲಕ ಸಿಎಸ್ ಆರ್ ಯೋಜನೆಯಡಿ ಇಲ್ಲಿನ ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ರಸ್ತೆಯ ಕಾಂಕ್ರಿಟ್‌ ಕಾಮಗಾರಿಗೆ ಪಂಚಾಯಿತಿ ಅಧ್ಯಕ್ಷ ಸೌಮ್ಯಲತಾ ಶೆಟ್ಟಿ ಅವರೊಂದಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಫಲಿಮಾರು ಗ್ರಾಮಸ್ಥರಿಗೆ, ವಿಶೇಷವಾಗಿ ಕೃಷಿಕರಿಗೆ ಅನುಕೂಲವಾಗುವಂತೆ ನಡಿಯಾರು - ಕುನ್ಯಾಲಿ ನಡುವೆ ೧೫೦ ಮೀಟರ್ ಉದ್ದದ ಕಚ್ಚಾ ರಸ್ತೆ ಅಭಿವೃದ್ಧಿಪಡಿಸಲು ಪಂಚಾಯಿತಿ ಕ್ರಿಯಾಯೋಜನೆಯನ್ನು ನೀಡಿತ್ತು. ಇದನ್ನೂ ಸೇರಿಸಿ ಇಲ್ಲಿಯತನಕ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ೧.೪೫ ಕೋಟಿ ರು.ಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ರಾಯೇಶ್ವರ ಪೈ, ಸದಸ್ಯರಾದ ಸತೀಶ್ ದೇವಾಡಿಗ, ಯೋಗಾನಂದ ಕುಕ್ಕಿಯಾನ್, ಜಯಶ್ರೀ ಆಚಾರ್ಯ, ಗುತ್ತಿಗೆದಾರ ರಾಘವೇಂದ್ರ ಶೆಟ್ಟಿ ಮತ್ತು ಅದಾನಿ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ, ಅದಾನಿ ಫ಼ೌಂಡೇಷನ್‌ನ ಅನುದೀಪ್ ಇದ್ದರು.