ಸಮರ್ಪಕ ಬಸ್ ಸೌಲಭ್ಯ ದೊರೆಯಲಿ

| Published : Jan 02 2025, 12:34 AM IST

ಸಾರಾಂಶ

ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ದೊರೆಯುವಂತಾಗಬೇಕು ಇದರಿಂದ ಗ್ರಾಮೀಣ ಭಾಗದ ಜನರು ಪ್ರತಿ ನಿತ್ಯ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬಂದು ಹೋಗುವುದು ಸುಲಭ

ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಬಸ್ ಸೌಲಭ್ಯ ಸಿಗುವಂತಾಗಬೇಕು.ವಿದ್ಯಾರ್ಥಿಗಳಿಗೆ ಕಾಲೇಜಿನ ಸರಿಯಾದ ಸಮಯಕ್ಕೆ ಬಸ್ಸುಗಳು ಬರುವಂತಾಗಬೇಕು ಎನ್ನುವುದು ನಮ್ಮಲ್ಲರ ಆಶಯವಾಗಿದೆ ,ಈ ನಿಟ್ಟಿನಲ್ಲಿ ಸರ್ಕಾರ ಲಕ್ಷ್ಮೇಶ್ವರ ಬಸ್ ಡಿಪೋಗೆ ಒಟ್ಟು 7 ನೂತನ ಬಸ್‌ ನೀಡುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ನೂತನ ಬಸ್ ಸೇವೆಗೆ ಶಾಸಕ ಡಾ.ಚಂದ್ರು ಲಮಾಣಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ದೊರೆಯುವಂತಾಗಬೇಕು ಇದರಿಂದ ಗ್ರಾಮೀಣ ಭಾಗದ ಜನರು ಪ್ರತಿ ನಿತ್ಯ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬಂದು ಹೋಗುವುದು ಸುಲಭವಾಗುತ್ತದೆ. ನೂತನ ಬಸ್ ಸೇವೆಯಿಂದ ಸಾರ್ವಜನಿಕರು ಶೀಘ್ರವಾಗಿ ತಮ್ಮ ನಿಗದಿತ ಸ್ಥಳಗಳಿಗೆ ತೆರಳಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತೇಶೆಟ್ಟರ, ನಗರ ಘಟಕ ಅಧ್ಯಕ್ಷ ನವೀನ ಬೆಳ್ಳಟ್ಟಿ, ವಿಜಯ ಬೂದಿಹಾಳ, ಗಿರೀಶ ಚೌರಡ್ಡಿ, ಮಂಜುನಾಥ ಗೊರವರ, ಬಸವರಾಜ ಚಕ್ರಸಾಲಿ, ಸಂತೋಷ ಜಾವೂರ, ಶಕ್ತಿ ಕತ್ತಿ, ಅನಿಲ್ ಮುಳಗುಂದ, ರಾಜು ರೆಡ್ಡಿ, ತುಕಪ್ಪ ಪೂಜಾರ,ವೀರೇಶ ತಂಗೋಡ, ಜಾನು ಲಮಾಣಿ ಹಾಗೂ ಘಟಕ ವ್ಯವಸ್ಥಾಪಕಿ ಸವಿತಾ ಆದಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು.