ಸಾರಾಂಶ
ಜಾನುವಾರು ಗಣತಿಗೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು.
ಹಾನಗಲ್ಲ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಕೈಗೊಳ್ಳಲಾಗಿರುವ ೨೧ನೇ ಜಾನುವಾರು ಗಣತಿ ೨೦೨೪ ಹಿನ್ನೆಲೆಯಲ್ಲಿ ಪ್ರಕಟಿಸಲಾಗಿರುವ ಕರಪತ್ರಗಳನ್ನು ಅನಾವರಣಗೊಳಿಸುವ ಮೂಲಕ ಶಾಸಕ ಶ್ರೀನಿವಾಸ ಮಾನೆ ಗಣತಿಗೆ ಚಾಲನೆ ನೀಡಿದರು.ಹಾನಗಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಗಣತಿಯಿಂದ ಪಶು ಸಂಗೋಪನೆ ಅಭಿವೃದ್ಧಿ, ಮೇವಿನ ಲಭ್ಯತೆ, ಆರೋಗ್ಯ, ಔಷಧೋಪಚಾರ, ಉತ್ಪಾದಕತೆ ಹೆಚ್ಚಿಸಲು ಹಾಗೂ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಒಂದೂ ಊರು ಸಹ ಬಿಡದಂತೆ ಎಲ್ಲ ಕಡೆಗಳಲ್ಲಿ ತೆರಳಿ ಗಣತಿ ಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ಶಾಸಕ ಮಾನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮುಖ್ಯ ಪಶು ವೈದ್ಯಾಧಿಕಾರಿ ಡಾ. ಗಿರೀಶ ರೆಡ್ಡೇರ ಮಾತನಾಡಿ, ತಾಲೂಕಿನಲ್ಲಿ ೧೪ ಗಣತಿದಾರರು ಗಣತಿ ಕಾರ್ಯದಲ್ಲಿ ತೊಡಗಲಿದ್ದು, ಮೂವರು ವೈದ್ಯಾಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗಣತಿ ಕಾರ್ಯದಲ್ಲಿ ಜಾನುವಾರುಗಳ ಪರಿಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯರಾದ ಟಾಕನಗೌಡ ಪಾಟೀಲ, ಕೊಟ್ರಪ್ಪ ಕುದರಿಸಿದ್ದನವರ, ಕೆಡಿಪಿ ಸದಸ್ಯ ಮಾರ್ಕಂಡಪ್ಪ ಮಣ್ಣಮ್ಮನವರ, ಮುಖಂಡರಾದ ರಾಜು ಗುಡಿ, ನಾಗಪ್ಪ ಚವ್ಹಾಣ, ರಘುನಾಥ ಗಾಯಕವಾಡ, ಕರಿಯಪ್ಪ ಗಂಟೇರ, ಬಸವರಾಜ ಡುಮ್ಮನವರ, ಸುಲೇಮಾನ ವರ್ದಿ, ರಾಮಣ್ಣ ಬುಡ್ಡನವರ, ಮಂಜುನಾಥ ಮಕರವಳ್ಳಿ, ನವೀದ್‌ಅಲಿ ಹರವಿ, ಮಾರುತಿ ದೊಡ್ಡಚಿಕ್ಕಣ್ಣನವರ, ವಿನಾಯಕ ಬಡಿಗೇರ, ಅನೂಪ್ ಸಿದ್ದುನವರ, ಸಿದ್ದಪ್ಪ ಹಂಚಿನಮನಿ, ನಾಗೇಶ ಬಣಕಾರ, ಮಲ್ಲಿಕಾರ್ಜುನ ಶಿರಮಾಪುರ, ಆಸಿಫ್ ಸೈಕಲಗಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.