ಬುಡಕಟ್ಟು ಜನರ ಅಭಿವೃದ್ಧಿಗೆ ಆದಿ ಕರ್ಮಯೋಗಿ ಅಭಿಯಾನ: ಕವಿರಾಜ್‌

| Published : Sep 24 2025, 01:00 AM IST

ಬುಡಕಟ್ಟು ಜನರ ಅಭಿವೃದ್ಧಿಗೆ ಆದಿ ಕರ್ಮಯೋಗಿ ಅಭಿಯಾನ: ಕವಿರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಅಭಿವೃದ್ಧಿ, ಸಮುದಾಯ ಸಬಲೀಕರಣಕ್ಕೆ ಆದಿ ಕರ್ಮಯೋಗಿ ಅಭಿಯಾನ ಸಹಕಾರಿಯಾಗಿದೆ ಎಂದು ನ್ಯಾಮತಿ ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಅಭಿವೃದ್ಧಿ, ಸಮುದಾಯ ಸಬಲೀಕರಣಕ್ಕೆ ಆದಿ ಕರ್ಮಯೋಗಿ ಅಭಿಯಾನ ಸಹಕಾರಿಯಾಗಿದೆ ಎಂದು ನ್ಯಾಮತಿ ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ತಿಳಿಸಿದರು.

ತಾಲೂಕಿನ ಕುದರೆಕೊಂಡ ಗ್ರಾಮದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹೊನ್ನಾಳಿ, ನ್ಯಾಮತಿ ಆಶಾಕಿರಣ ಸಂಸ್ಥೆ, ದರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ಆದಿ ಕರ್ಮಯೋಗಿ ಅಭಿಯಾನ ಗ್ರಾಮ ಮಟ್ಟದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ಆದಿ ಕರ್ಮಾಯೋಗಿ ಅಭಿಯಾನ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಆದೇಶದಂತೆ ಆದಿ ಕರ್ಮಯೋಗಿ ಅಭಿಯಾನ ಯೋಜನೆಯಡಿ ಬುಡಕಟ್ಟು ಜನಾಂಗದವರು ಹೆಚ್ಚಾಗಿರುವ ಅವಳಿ ತಾಲೂಕಿನಿಂದ 2 ಗ್ರಾಮಗಳು ಆಯ್ಕೆಯಾಗಿದ್ದು ತಾಲೂಕಿನ ಕುದರೆಕೊಂಡ ಗ್ರಾಮವು ಒಂದಾಗಿದೆ ಎಂದರು.

ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶಗಳಲ್ಲಿ ಅಲ್ಲಿಯ ಜನರ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಆರೋಗ್ಯ, ದೂರವಾಣಿ ಸಂಪರ್ಕ, ವಿದ್ಯುಚ್ಛಕ್ತಿ, ವಸತಿ ನಿರ್ಮಾಣ, ಅಂಗನವಾಡಿ ಕೇಂದ್ರಗಳ ಸ್ಥಾಪನೆ, ಆರೋಗ್ಯಕಾರ್ಡ್, ಜಾತಿ ಪ್ರಮಾಣ ಪತ್ರ, ಅರಣ್ಯ ಹಕ್ಕು ಯೋಜನೆಯಡಿ ಅರ್ಹರಿಗೆ ಹಕ್ಕು ಪತ್ರ, ಯುವಕರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ನೀಡುವ ಮೂಲಕ ಉದ್ಯೋಗ ಕಲ್ಪಿಸುವುದು, ಇತರೆ ಸೌಲಭ್ಯಗಳನ್ನು ಒದಗಿಸಿ ಗ್ರಾಮಗಳನ್ನು ಉನ್ನತೀಕರಿಸಲು ಈ ಯೋಜನೆ ಸಹಾಯವಾಗಿದೆ ಎಂದರು.

ಹೊನ್ನಾಳಿ ಸಮಾಜ ಕಲ್ಯಾಣಾಧಿಕಾರಿ ಉಮಾ ಮಾತನಾಡಿ, ಅವಳಿ ತಾಲೂಕಿನಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿರುವ ಹೊನ್ನಾಳಿಯ ಕೋಣನತೆಲೆ, ನ್ಯಾಮತಿಯ ಕುದರೆಕೊಂಡ ಗ್ರಾಮಗಳು ಆಯ್ಕೆಯಾಗಿದ್ದು ಬುಡಕಟ್ಟು ಸಮುದಾಯದವರಿಗೆ ಸಿಗಬೇಕಾದ ಅಗತ್ಯ ಮೂಲ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ರಸ್ತೆ ಇತರೆ ಸೌಲಭ್ಯಗಳನ್ನು ಗ್ರಾಮಗಳಲ್ಲಿ ಅಭಿವೃದ್ಧಿ ಪಡಿಸಿ ಪರಿಶಿಷ್ಟ ವರ್ಗದ ಶ್ರೇಯೋಭಿವೃದ್ದಗೆ ಶ್ರಮಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.

ಕಂದಾಯ ಇಲಾಖೆಯ ವೃಷಭೇಂದ್ರಸ್ವಾಮಿ, ವೇಣುಗೋಪಾಲ, ಯರಗನಾಳ್‌ ಗ್ರಾ.ಪಂ.ಪಿಡಿಓ ಪ್ರದೀಪ್‌, ಹಿರೇಗೋಣಿಗೇರೆ ಗ್ರಾ.ಪಂ. ಪಿಡಿಓ ಅರುಣ ಕೆ., ತೋಟಗಾರಿಕೆ ಇಲಾಖೆ ನಾಗರಾಜ್‌, ಆರೋಗ್ಯ ಇಲಾಖೆ ಗೀತಾ ಎಂ.ಎಚ್‌., ಆಶಾ ಕಾರ್ಯಕರ್ತೆ ಕೆ.ಜಿ.ರೂಪಾ, ಗ್ರಾ.ಪಂ.ಸದಸ್ಯ ಕುಬೇರಪ್ಪ, ಗ್ರಾಮದ ಮುಖಂಡರಾದ ಪ್ರಕಾಶ್‌, ವಿವಿಧ ಇಲಾಖೆಯ ಅಧಿಕಾರಿಗಳು, ತರಬೇತುದಾರರು ಇದ್ದರು.