ಶಿಬಿರದಲ್ಲಿ ತುಟಿ ಸೀಳಿರುವ ಮಕ್ಕಳು, ಅಡುಕು ಮಂಡಿ/ಬಾಯಿ ಸೀಳಿರುವವರು ಹಾಗೂ ಬೆಂಕಿ ಅಥವಾ ಇತರೆ ಕಾರಣಗಳಿಂದ ಸುಟ್ಟು ದೇಹದ ಭಾಗಗಳು ವಿಕೃತಿಗೊಂಡಿರುವ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ಕನಿಷ್ಠ 3 ತಿಂಗಳಿಗಿಂತ ಮೇಲ್ಪಟ್ಟವರು ಈ ಶಿಬಿರದ ಪ್ರಯೋಜನ ಪಡೆಯಬಹುದು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆದಿಚುಂಚನಗಿರಿ ವಿವಿ ಹಾಗೂ ರೋಟಾಪ್ಲಾಸ್ಟ್ ಇಂಟರ್ನ್ಯಾಷನಲ್ ಮತ್ತು ರೋಟರಿ ಬೆಂಗಳೂರು ನಾರ್ತ್ (ಡಿಸ್ಟ್ರಿಕ್ಟ್ 3192) ಸಹಯೋಗದಲ್ಲಿ ಅ.26 ರಿಂದ ನ.5ರವರೆಗೆ ಬೃಹತ್ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ ನಡೆಯಲಿದೆ.ಅ.26ರ ಸಂಜೆ 4 ಗಂಟೆಗೆ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಜಿ.ಎಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಬಿರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ವಿವಿ ಕುಲಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್, ರೋಟಾಪ್ಲಾಸ್ಟ್ ಇಂಟರ್ನ್ಯಾಷನಲ್ ಕಾರ್ಯನಿರ್ವಾಹಕ ನಿರ್ದೇಶಕ ರೊ.ಡೇನಿಯಲ್ ಡಿ.ಸಾಂಟೋ, ಆರ್.ಐ.ಜಿಲ್ಲಾ ಗವರ್ನರ್ (3192) ಎ.ಕೆ.ಎಸ್. ರೊ.ರವಿಶಂಕರ್ ಡಾಕುಜು, ಯು.ಎಸ್.ಎ. ರೋಟಾಪ್ಲಾಸ್ಟ್ ಇಂಟರ್ನ್ಯಾಷನಲ್ ವೈದ್ಯಕೀಯ ನಿರ್ದೇಶಕ ಡಾ.ಟಾಡ್ ಫಾರ್ನ್ವರ್ತ್, ಮಿಷನ್ ನಿರ್ದೇಶಕ ರೊ. ಬ್ರಿಯನ್ ವಾಕರ್, ರೋಟರಿ ಬೆಂಗಳೂರು ನಾರ್ತ್ ಅಧ್ಯಕ್ಷ ರೊ.ಸಿ.ಮೋಹನ್ ವೇಲನ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎನ್.ಶ್ರೀಧರ ಹಾಗೂ ಕುಲಸಚಿವ ಎಲ್. ಶ್ರೀ ಹರ್ಷ ಭಾಗವಹಿಸಲಿದ್ದಾರೆ.ಈ ಶಿಬಿರದ ಸಂಪೂರ್ಣ ಮಾರ್ಗದರ್ಶನವನ್ನು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಹಾಗೂ ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಎಸ್.ರವಿ ವಹಿಸಲಿದ್ದಾರೆ.
ಶಿಬಿರದಲ್ಲಿ ತುಟಿ ಸೀಳಿರುವ ಮಕ್ಕಳು, ಅಡುಕು ಮಂಡಿ/ಬಾಯಿ ಸೀಳಿರುವವರು ಹಾಗೂ ಬೆಂಕಿ ಅಥವಾ ಇತರೆ ಕಾರಣಗಳಿಂದ ಸುಟ್ಟು ದೇಹದ ಭಾಗಗಳು ವಿಕೃತಿಗೊಂಡಿರುವ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ಕನಿಷ್ಠ 3 ತಿಂಗಳಿಗಿಂತ ಮೇಲ್ಪಟ್ಟವರು ಈ ಶಿಬಿರದ ಪ್ರಯೋಜನ ಪಡೆಯಬಹುದು.ಅಮೆರಿಕದ ತಜ್ಞ ವೈದ್ಯರ ತಂಡ:
ಅಮೆರಿಕದ ‘ರೋಟಾಪ್ಲಾಸ್ಟ್ ಇಂಟರ್ನ್ಯಾಷನಲ್’ ಸಂಸ್ಥೆಯ 30 ಜನ ತಜ್ಞ ವೈದ್ಯರ ತಂಡವು ಆದಿಚುಂಚನಗಿರಿ ಆಸ್ಪತ್ರೆ ಪ್ಲಾಸ್ಟಿಕ್ ರಿಕನ್ಸ್ಟ್ರಕ್ಟಿವ್ ಮತ್ತು ಅಸ್ತೆಟಿಕ್ ಸರ್ಜರಿ ವಿಭಾಗದೊಂದಿಗೆ ಸೇರಿ ಈ ಜಟಿಲ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ, ಔಷಧೋಪಚಾರ, ಊಟ ಹಾಗೂ ವಸತಿ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗಿದೆ.ಆಸಕ್ತ ಸಾರ್ವಜನಿಕರು ಹಾಗೂ ರೋಗಿಗಳು ಆದಿಚುಂಚನಗಿರಿ ಆಸ್ಪತ್ರೆಗೆ ನೇರವಾಗಿ ಭೇಟಿ ನೀಡಿ ಅಥವಾ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊ-63648 54932, 99455 58579, 89702 23725, 78292 25323 ಸಂಪರ್ಕಿಸಬಹುದು.