ಅಡಿಕೆ ಬ್ರಹ್ಮರಾಯ ಪಲ್ಲಕ್ಕಿ ಉತ್ಸವ ಸಂಪನ್ನ

| Published : Feb 10 2024, 01:54 AM IST

ಸಾರಾಂಶ

ಯಕ್ಷ ಶ್ರೀ ಬ್ರಹ್ಮದೇವ ದಿಗಂಬರ ಜೈನ ಮಂದಿರದಲ್ಲಿ ಶ್ರೀ ಅಡಿಕೆ ಬ್ರಹ್ಮರಾಯ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು.

ಜೇವರ್ಗಿ: ಪಟ್ಟಣದಲ್ಲಿರುವ ಜೈನ್ ಸಮುದಾಯದ ಆರಾಧ್ಯ ದೈವ ಶ್ರೀ 1008ಭಗವಾನ ಶಾಂತಿನಾಥ ತೀರ್ಥಂಕರ ಹಾಗೂ ಯಕ್ಷ ಶ್ರೀ ಬ್ರಹ್ಮದೇವ ದಿಗಂಬರ ಜೈನ ಮಂದಿರದಲ್ಲಿ ಶ್ರೀ ಅಡಿಕೆ ಬ್ರಹ್ಮರಾಯ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಅರ್ಚಕ ಬ್ರಹ್ಮಸೂರಿ ಪಂಡಿತ್ ವಿಶೇಷ ಪೂಜೆ ನೆರವೇರಿಸಿದರು. 9 ಗಂಟೆಗೆ ಧ್ವಜಾರೋಹಣ, 10ಗಂಟೆಗೆ ಪಲ್ಲಕ್ಕಿ ಮಹೋತ್ಸವ, 11ಗಂಟೆಗೆ ಅಭಿಷೇಕ, ಚಡಾವೆಗಳು, ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣ, ಧಾರ್ಮಿಕ ಸಭೆ ನಡೆದವು. ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು ಕುಂಬ ಕಳಸದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ದೇವಸ್ಥಾನ ಸಮಿತಿಯಿಂದ ಕಲ್ಪಿಸಲಾಗಿತ್ತು.

ಉತ್ಸವದಲ್ಲಿ ಪ್ರಕಾಶ ಜೈನ್, ವಜ್ರಕುಮಾರ ಪಾಟೀಲ್, ದೀಪಕ ಪಂಡಿತ್, ಭರಮಶೆಟ್ಟಿ ಜಗಶೆಟ್ಟಿ, ಬಾಹುಬಲಿ ತಾಳಿಕೋಟಿ, ರಾಜೇಂದ್ರ ಚಂಡಕೆ, ಅರಿಹಂತ ಪಾಟೀಲ್, ಅಮೀತ ಕಾವೇರಿ, ಪದ್ಮಣ್ಣ ಪಂಡಿತ್, ಅಂಬಣ್ಣ ಜೈನ್, ದೇವಿಂದ್ರ ಜೈನ್, ಸಚೀನ್ ತುಪ್ಪದ್, ಸೂರ್ಯಕಾಂತ ಬಪ್ಪಣಕರ್, ವಿಜಯಕುಮಾರ, ಗೋಮಟೇಶ್ವರ ವರ್ಧಮಾನ, ಬ್ರಹ್ಮಪ್ರಕಾಶ ವರ್ಧಮಾನ, ಬಿ.ಕೆ.ಪಾಟೀಲ್, ಶ್ರೀಕಾಂತ ಕಟಂಬಲೆ, ಅಜೀತ್‌ಕುಮಾರ ಪಂಡಿತ್ ಸೇರಿದಂತೆ ಸಾವಿರಾರು ಜನ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.