ಸಾರಾಂಶ
ಬಿಹಾರ ರಾಜ್ಯದಲ್ಲಿರುವ ಬೌದ್ಧ ಗಯಾದಲ್ಲಿ ವಿದೇಶಿ ಬ್ರಾಹ್ಮಣರು, ಮನುವಾದಿಗಳು ಸೇರಿಕೊಂಡು ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಶತ ಶತಮಾನಗಳಿಂದ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಈ ಸಂಬಂಧ ಜಾಗೃತ ಭಾರತೀಯರಾದ ನಾವು ಬೌದ್ಧ ಧರ್ಮ ಅನುಯಾಯಿಗಳಿಗೆ ಬೌದ್ಧ ಗಯಾದ ಸಂಪೂರ್ಣ ಆಡಳಿತ ವ್ಯವಸ್ಥೆ ಬಿಟ್ಟುಕೊಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಹಾರದಲ್ಲಿರುವ ಬೌದ್ಧ ಗಯಾ ಆಡಳಿತವನ್ನು ಬೌದ್ಧ ಮತಾವಲಂಬಿಗಳಿಗೆ ಬಿಡಿಸಿಕೊಡುವಂತೆ ಬೆಂಗಳೂರಿನ ಸ್ಪೂರ್ತಿಧಾಮದ ಧಮ್ಮವೀರ ಬಂತೇಜಿ ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.ಬಿಹಾರ ರಾಜ್ಯದಲ್ಲಿರುವ ಬೌದ್ಧ ಗಯಾದಲ್ಲಿ ವಿದೇಶಿ ಬ್ರಾಹ್ಮಣರು, ಮನುವಾದಿಗಳು ಸೇರಿಕೊಂಡು ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಶತ ಶತಮಾನಗಳಿಂದ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಈ ಸಂಬಂಧ ಜಾಗೃತ ಭಾರತೀಯರಾದ ನಾವು ಬೌದ್ಧ ಧರ್ಮ ಅನುಯಾಯಿಗಳಿಗೆ ಬೌದ್ಧ ಗಯಾದ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಬಿಟ್ಟುಕೊಡುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಇಲ್ಲಿರುವ ಬ್ರಾಹ್ಮಣರು ವಿದೇಶಿಯರಾಗಿರುತ್ತಾರೆ. ಇವರು ಪ್ರತ್ಯೇಕ ಬ್ರಾಹ್ಮಣ ಧರ್ಮ ಎನ್ನುತ್ತಾರೆ. ಹಾಗೆಯೇ ಮನುವಿನ ಸಂವಿಧಾನವನ್ನೇ ತಮ್ಮ ಕಾರ್ಯಸೂಚಿಯಾಗಿ ರೂಪಿಸಿಕೊಂಡಿದ್ದಾರೆ. ಇವರಿಗೂ ಮತ್ತು ಬುದ್ಧರಿಗೂ ನಿತ್ಯ ನಿರಂತರ ಸಂಘರ್ಷಗಳು ಶತ ಶತಮಾನಗಳಿಂದಲೂ ನಡೆದುಕೊಂಡು ಹೋಗುತ್ತಿವೆ. ಇದಕ್ಕೆ ಪೂರ್ಣ ವಿರಾಮ ಹಾಕಲು ಮೂಲ ಭಾರತೀಯರಿಗೆ ಬೌದ್ಧ ಗಯಾದ ಪೂರ್ಣ ಸ್ವಾಯತ್ತೆಯನ್ನು ಬೌದ್ಧರಿಗೆ ವಹಿಸಿಕೊಡಬೇಕು ಎಂದು ಒತ್ತಾಯಿಸಿದರು.ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ ಜೆ. ರಾಮಯ್ಯ, ಮುಖಂಡರಾದ ಗಂಗರಾಜು, ಡಾ. ಶ್ರೆನಿವಾಸ್, ಸಿದ್ದರಾಮು ಗೋಷ್ಠಿಯಲ್ಲಿದ್ದರು.
7ರಂದು ಶ್ರೀಸೀತಾಳಲಿಂಗೇಶ್ವರಸ್ವಾಮಿ ರಥೋತ್ಸವಕೆ.ಎಂ.ದೊಡ್ಡಿ: ಸಮೀಪದ ಸಬ್ಬನಹಳ್ಳಿಯಲ್ಲಿ ಮಾ.7ರಂದು ಶ್ರೀಸೀತಾಳಲಿಂಗೇಶ್ವರಸ್ವಾಮಿ ರಥೋತ್ಸವ ನಡೆಯಲಿದೆ.
ಜಾತ್ರೆ ಅಂಗವಾಗಿ ಮಾ.4ರಂದು ಸಂಜೆ ಬಂಡಿ ಉತ್ಸವ, ಮಾ.5 ರಂದು ಬೆಳಗ್ಗೆ ಕೊಂಡೋತ್ಸವ, ಸಂಜೆ ಬಾಯಿಬೀಗ ಮತು ಮಡೆ ನಡೆಯಲಿದೆ. ಮಾ.6 ರಂದು ಸಂಜೆ ಕಾಳಮ್ಮ ದೇವರ ಮಡೆ ಪೂಜೆ ಮತು ಅಕ್ಕಿ ಅಸಿಹಿಟ್ಟು ಸಂಗ್ರಹ ನಡೆಯಲಿದೆ.ಮಾ.7 ರಂದು ಬೆಳಗ್ಗೆ 8.30ಕ್ಕೆ ಶ್ರೀ ಸೀತಾಳಲಿಂಗೇಶ್ವರಸ್ವಾಮಿ ರಥೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಮಾ.8 ರಂದು ಬೆಳಗ್ಗೆ ಶ್ರೀಪಟ್ಟಲದಮ್ಮ ದೇವರ ಮಡೆ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.