ಪ್ರತಿಷ್ಠಿತ ಏಮ್ಸ್‌, ಐಐಟಿ, ಎನ್‌ಐಟಿಗಳಲ್ಲಿ ಎಕ್ಸ್‌ಪರ್ಟ್‌ ವಿದ್ಯಾರ್ಥಿಗಳ ಪ್ರವೇಶ

| Published : Sep 28 2024, 01:15 AM IST

ಸಾರಾಂಶ

ಒಂದೇ ಶಿಕ್ಷಣ ಸಂಸ್ಥೆಯಿಂದ ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ ನಾಲ್ವರು ವಿದ್ಯಾರ್ಥಿಗಳು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸೇರಿದಂತೆ ಉಳಿದ ಏಮ್ಸ್‌ಗಳಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಜಿಪ್ಮರ್ (ಜೆಐಪಿಎಂಇಆರ್)ನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿದ್ದಾರೆ. ಅದೇ ರೀತಿ ದೇಶದ ಪ್ರತಿಷ್ಠಿತ ಐಐಟಿಗೆ ಸಂಸ್ಥೆಯ ನಾಲ್ವರು ಹಾಗೂ ಎನ್‌ಐಟಿಗೆ ಐವರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿದ್ದಾರೆ.ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ೭೨೦ರಲ್ಲಿ ೭೧೫ ಅಂಕ ಪಡೆದ ಸಂಜನಾ ಸಂತೋಷ್ ಕಟ್ಟಿ ಏಮ್ಸ್ ಹೊಸದಿಲ್ಲಿ, ೭೧೫ ಅಂಕ ಪಡೆದ ಅರ್ಜುನ್ ಕಿಶೋರ್ ಜಿಪ್ಮರ್ ಪಾಂಡಿಚೇರಿ, ೭೦೫ ಅಂಕ ಪಡೆದ ಉತ್ಸವ್ ಆರ್, ೭೦೫ ಅಂಕ ಪಡೆದ ಅಮನ್ ಅಬ್ದುಲ್ ಹಕೀಂ ಹಾಗೂ ೭೦೦ ಅಂಕ ಪಡೆದ ಸಾಯಿ ಭೇಶಜ್ ಜಿ. ಅವರು ನಾಗಪುರದ ಏಮ್ಸ್‌ನಲ್ಲಿ ಪ್ರವೇಶ ಪಡೆದರೆ, ಜಿಪ್ಮರ್ ಕರೈಕಲ್‌ನಲ್ಲಿ ಅನುಚಂದ್ರ ಎಸ್.ಎಂ. ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿರುತ್ತಾರೆ. ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ದೇಶದ ಪ್ರತಿಷ್ಠಿತ ಐಐಟಿಗೆ ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ನಾಲ್ವರು ಹಾಗೂ ಎನ್‌ಐಟಿಗೆ ಐವರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಐಐಟಿ ಮದ್ರಾಸ್ ಸಂಸ್ಥೆಗೆ ಸರ್ವೇಶ ಗೌಡ ಪಾಟೀಲ, ಐಐಟಿ ರೂರ್ಕಿ ಸಂಸ್ಥೆಗೆ ರೋಹನ್ ಹೆಬ್ಬಾಳೆ, ಐಐಟಿ ಭಿಲಾಯಿ ಸಂಸ್ಥೆಗೆ ದುಲಿಕಾ ರಾಣಿ ಎಸ್.ಎ., ಐಐಟಿ ಹೈದರಾಬಾದ್ ಸಂಸ್ಥೆಗೆ ಬಿ.ಚಿರಂಜೀವಿ ಆದಿತ್ಯ, ಎನ್‌ಐಟಿಕೆ ಸುರತ್ಕಲ್‌ಗೆ ಆರ್ಯ ಅರಿಕೇರಿ, ವಿಕ್ರಮ್ ಪ್ರೇಮ್ ಕುಮಾರ್, ರಮ್ಯಾ ಎನ್.ಆರ್., ಎನ್‌ಐಟಿ ತಿರುಚಿರಾಪಳ್ಳಿಗೆ ತೇಜಸ್ ಕಾಮತ್ ಸಾಣೂರ್, ಎನ್‌ಐಟಿ ವಾರಂಗಲ್ ಸಂಸ್ಥೆಗೆ ಪ್ರಣವ್ ವಿಜಯೇಂದ್ರ, ಎನ್‌ಐಟಿ ಕ್ಯಾಲಿಕಟ್‌ಗೆ ಶಾನ್ವಿನ್ ರಾಯ್ಸ್ ಪಿರೇರಾ, ಪ್ರವೇಶ ಪಡೆದಿದ್ದಾರೆ. ಇದೇ ವೇಳೆ ರಾಜ್ಯದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜ್ ಆಗಿರುವ ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ಗೆ ೧೮ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಹೊಸದಿಲ್ಲಿಯ ಏಮ್ಸ್ ಸೇರಿದಂತೆ ದೇಶದ ನಾನಾ ಭಾಗದಲ್ಲಿರುವ ಏಮ್ಸ್, ಜಿಪ್ಮರ್ (ಜೆಐಪಿಎಂಇಆರ್), ಬಿಎಂಸಿ, ಕೆಎಂಸಿ ಸೇರಿದಂತೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳು, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಐಐಟಿ, ಎನ್‌ಐಟಿಗಳಿಗೆ ಎಕ್ಸ್ಪರ್ಟ್ನ ಶೇ. ೪೦ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರವೇಶ ಪಡೆಯುತ್ತಾರೆ. ಒಂದೇ ಶಿಕ್ಷಣ ಸಂಸ್ಥೆಯಿಂದ ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.