ಹರಿಹರ ಸರ್ಕಾರಿ ಪದವಿ ಕಾಲೇಜು ಸ್ನಾತಕ ಪದವಿ ಕೋರ್ಸ್‌ ಪ್ರವೇಶಾತಿ ಆರಂಭ

| Published : May 21 2025, 02:44 AM IST

ಹರಿಹರ ಸರ್ಕಾರಿ ಪದವಿ ಕಾಲೇಜು ಸ್ನಾತಕ ಪದವಿ ಕೋರ್ಸ್‌ ಪ್ರವೇಶಾತಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025 -26ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸ್‍ಗಳಾದ ಬಿ.ಎ., ಬಿ.ಎಸ್ಸಿ., ಬಿ.ಸಿಎ., ಬಿ.ಕಾಂ. ಹಾಗೂ ಬಿಬಿಎ ಪ್ರವೇಶಾತಿಗಾಗಿ ಪಿ.ಯು.ಸಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಪ್ರವೇಶಾತಿ ಆರಂಭಿಸಲಾಗಿದೆ.

- ಹೆಚ್ಚಿನ ವಿವರಗಳಿಗೆ ಕಾಲೇಜು ಕಚೇರಿಗೆ ಭೇಟಿ ನೀಡಲು ಸಲಹೆ

- - -

ಹರಿಹರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025 -26ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸ್‍ಗಳಾದ ಬಿ.ಎ., ಬಿ.ಎಸ್ಸಿ., ಬಿ.ಸಿಎ., ಬಿ.ಕಾಂ. ಹಾಗೂ ಬಿಬಿಎ ಪ್ರವೇಶಾತಿಗಾಗಿ ಪಿ.ಯು.ಸಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಪ್ರವೇಶಾತಿ ಆರಂಭಿಸಲಾಗಿದೆ. ಪದವಿ ಕೋರ್ಸ್‍ಗಳು:

ಬಿ.ಎ ಕೋರ್ಸ್‌ಗಳಾದ ಎಚ್.ಇ.ಇ (ಇತಿಹಾಸ, ಆರ್ಥಶಾಸ್ತ್ರ, ಐಚ್ಚಿಕ ಇಂಗ್ಲಿಷ್) ಇ.ಕೆ.ಜೆ. (ಅರ್ಥಶಾಸ್ತ್ರ, ಐಚ್ಚಿಕ ಕನ್ನಡ, ಪತ್ರಿಕೋದ್ಯಮ), ಎಚ್.ಇ.ಕೆ. (ಇತಿಹಾಸ, ಅರ್ಥಶಾಸ್ತ್ರ, ಐಚ್ಚಿಕ ಕನ್ನಡ), ಎಚ್.ಇ.ಪಿ. (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಎಚ್.ಇ.ಎಸ್. (ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ), ಹಾಗೂ ಎಚ್.ಪಿ.ಎಸ್. (ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ). ಬಿ.ಎಸ್ಸಿ ಕೋರ್ಸ್‌ಗಳಾದ ಪಿ.ಸಿ.ಎಂ. (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ), ಪಿ.ಎಂ.ಸಿಎಸ್. (ಭೌತಶಾಸ್ತ್ರ, ಗಣಿತಶಾಸ್ತ್ರ, ಗಣಕ ವಿಜ್ಞಾನ) ಹಾಗೂ ಬಿ.ಸಿ.ಎ. (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್) ಬಿ.ಕಾಂ. ಮತ್ತು ಬಿ.ಬಿ.ಎ. (ಕಡ್ಡಾಯ ವಿಷಯ) ಸ್ನಾತಕ ಪದವಿಗಳಿಗೆ ಪ್ರವೇಶ ಬಯಸುವ ಪಿ.ಯು.ಸಿ. ಪೂರ್ಣಗೊಳಿಸಿದ ಅರ್ಹ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ ಕಾಲೇಜಿನ ಕಚೇರಿಗೆ ಭೇಟಿ ನೀಡಿ ವಿಚಾರಿಸಬಹುದು ಅಥವಾ ದೂ: 94486- 52585, 94820- 88777, 96325- 52517 ಹಾಗೂ 99454- 31055 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಪ್ರವೇಶಾತಿಗೆ ಕಾಲೇಜಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಪ್ರವೇಶಾತಿ ಪಡೆಯಬಹುದು ಎಂದು ಪ್ರಾಂಶುಪಾಲ ಡಾ.ರಮೇಶ್ ಎಂ.ಎನ್. ತಿಳಿಸಿದ್ದಾರೆ.