ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಸಂಗೀತ ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯಲ್ಲಿ 3 ವರ್ಷಗಳ ಕಾಲ ವೇದ ಆಗಮ ಸಂಸ್ಕೃತ ಸಂಗೀತ ಯೋಗ ಮತ್ತು ಜ್ಯೋತಿಷ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಸಂಗೀತ ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯಲ್ಲಿ 3 ವರ್ಷಗಳ ಕಾಲ ವೇದ ಆಗಮ ಸಂಸ್ಕೃತ ಸಂಗೀತ ಯೋಗ ಮತ್ತು ಜ್ಯೋತಿಷ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ. ಮೇ 30 ರವರೆಗೆ ಹೆಸರು ನೋಂದಾಯಿಸಿಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಶ್ರೀಮಠದಲ್ಲಿ ನೇರ ಸಂದರ್ಶನವಿರುವುದು. ಸಂದರ್ಶನ ಮೂಲಕ ಕೇವಲ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶ್ರೀಮಠದಲ್ಲಿ 3 ವರ್ಷಗಳ ಕಾಲ ವೇದ ಆಗಮ ಸಂಸ್ಕೃತ ಸಂಗೀತ ಯೋಗ ಮತ್ತು ಜ್ಯೋತಿಷ್ಯ ಕಲಿಸಲಾಗುತ್ತದೆ. ವಿಶೇಷವಾಗಿ ಕಂಪ್ಯೂಟರ್ ಕ್ಲಾಸ್ ಕೂಡ ಕಳಿಸಲಾಗುತ್ತದೆ. 6, 7, 8, 9,10 ಹಾಗೂ ಪದವಿ ಪೂರ್ವ, ಪದವಿ ಶಿಕ್ಷಣ ಪಡೆಯಬಹುದಾಗಿದ್ದು, 10ನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗೆ ಶ್ರೀಮಠದಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಜೂನ್ 2ನೇ ವಾರದಿಂದ ತರಗತಿಗಳು ಪ್ರಾರಂಭವಾಗಲಿವೆ. ಮೊದಲ ಬಂದವರಿಗೆ ಆದ್ಯತೆ ಇದೆ. ಮಾಹಿತಿಗಾಗಿ ಮೊ.8088968655, 8431378365, 8495920018 ಸಂರ್ಪಕಿಸಿ.