ಚಿಕ್ಕಮಗಳೂರುಬಸವ ತತ್ತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರರ ಉಪದೇಶ, ಜ್ಞಾನ ಹಾಗೂ ಸಂದೇಶಗಳನ್ನು ಎಲ್ಲರೂ ಅವಲೋಕನ ಮಾಡುವ ಮೂಲಕ ತನು ಮನಗಳಲ್ಲಿ ಶ್ರದ್ಧಾಪೂರ್ವಕವಾಗಿ ಅರ್ಪಿಸಿಕೊಳ್ಳಬೇಕು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳ ಸಿದ್ಧ ಸ್ವಾಮೀಜಿ ನುಡಿದರು.

ಶ್ರೀ ಬಸವ ಮಂದಿರದಲ್ಲಿ ಮಕರ ಸಂಕ್ರಾಂತಿ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಸವ ತತ್ತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರರ ಉಪದೇಶ, ಜ್ಞಾನ ಹಾಗೂ ಸಂದೇಶಗಳನ್ನು ಎಲ್ಲರೂ ಅವಲೋಕನ ಮಾಡುವ ಮೂಲಕ ತನು ಮನಗಳಲ್ಲಿ ಶ್ರದ್ಧಾಪೂರ್ವಕವಾಗಿ ಅರ್ಪಿಸಿಕೊಳ್ಳಬೇಕು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳ ಸಿದ್ಧ ಸ್ವಾಮೀಜಿ ನುಡಿದರು.

ನಗರದ ದೊಡ್ಡ ಕುರುಬರಹಳ್ಳಿ ಸಮೀಪದ ಶ್ರೀ ಬಸವ ಮಂದಿರದಲ್ಲಿ ಮಕರ ಸಂಕ್ರಾಂತಿ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಆಯೋಜಿಸಿದ್ಧ ಗಣಪರ್ವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಿದ್ದರಾಮೇಶ್ವರರು ಸಮಾನತೆ ಕಾರುಡಿಗ. ಆ ತತ್ತ್ವ ದಡಿ ಮನುಷ್ಯ ಎಲ್ಲರನ್ನು ತಮ್ಮವರೆಂದು ಭಾವಿಸಿ, ಪ್ರತಿ ಕ್ಷಣದಲ್ಲೂ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳುವುದೇ ಸಮಾನತೆ ಅರ್ಥ. ಈ ಹೊರತಾಗಿ ಮನೆ ಮನಸ್ಸು ನೋಯಿಸಿ ಗಂಗೆ, -ತುಂಗಾ ನದಿ ಯಲ್ಲಿ ಮಿಂದೆಂದರೆ ಪಾಪ ಕಳೆದು, ಪುಣ್ಯಪಾಲು ಲಭಿಸುವುದಿಲ್ಲ ಎಂದು ತಿಳಿಸಿದರು.

ಮಾನವರು ಸಿದ್ದರಾಮೇಶ್ವರರ ಸಮಾನತೆ ವಚನಗಳನ್ನು ಅರ್ಥೈಸಿಕೊಂಡು ಸದ್ವಿಚಾರ, ಸನ್ನಡತೆ ಸಂಕಲ್ಪದ ಹಾದಿಯಲ್ಲಿ ಸಾಗಿದರೆ ಮಾತ್ರ ಆ ವ್ಯಕ್ತಿಗೆ ಸಾರ್ಥಕತೆ ಬದುಕು ಗಳಿಸುವ ಜೊತೆಗೆ ಆಚರಣೆಗೆ ನೈಜ ಅರ್ಥ ಮೂಡುವ ಮೂಲಕ ಪಾವನ ವಾಗುತ್ತಾನೆ ಎಂದು ತಿಳಿಸಿದರು.

ಮಾನವರು ಸದಾಕಾಲ ಒಳಿತನ್ನು ಬಯಸುವುದನ್ನು ರೂಢಿಸಿಕೊಳ್ಳಬೇಕು. ಸ್ವಾರ್ಥ, ಸ್ವಹಿತಸಕ್ತಿಗಾಗಿ ಇತರೆ ಕುಟುಂಬ ವರನ್ನು ನೋಯಿಸಿ, ಮನೆತನ ಹಾಳು ಮಾಡಿದರೆ ಪಾಪವೆಂಬುದು ಅಂಟಿಕೊಂಡು ದುರ್ಬಲರಾಗುತ್ತಾನೆ. ಹಾಗಾಗಿ ಸಿದ್ದರಾಮೇಶ್ವರರು ಸದ್ವಿಚಾರಗಳು ಅವಲೋಕನ ಮಾಡಿ ಧರ್ಮದಲ್ಲಿ ಹಾದಿಯಲ್ಲಿ ಸಾಗುವುದು ಲೇಸು ಎಂದರು.

ಬಸವ ಮಂದಿರದಲ್ಲಿ ಇಂದು ಭಕ್ತ ಸಮೂಹದಿಂದ ಸುಮಾರು 50ಕ್ಕೂ ಹೆಚ್ಚು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾಧಿಗಳು ಪ್ರಸಾದ ವ್ಯರ್ಥಗೊಳಿಸದೇ ಸೇವಿಸುವಷ್ಟು ಬಳಸಬೇಕು. ಅನ್ನಪ್ರಸಾದ ದೇವರಿಗೆ ಸಮಾನ. ಆ ಅನ್ನದೇವಿಗೆ ಪ್ರತಿಯೊಬ್ಬರು ತಲೆಬಾಗಿ ನಡೆಯುವುದು ಕರ್ತವ್ಯ ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಮಠದ ಆವರಣದಲ್ಲಿ ವಿಶೇಷ ಅಲಂಕಾರದೊಂದಿಗೆ ರಾಗಿ ರಾಶಿ, ತೆಂಗಿನ ಕಾಯಿ ಪೂಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಠದ ಖಜಾಂಚಿ ಸದಾಶಿವಪ್ಪ, ಟ್ರಸ್ಟಿ ಜಗದೀಶ್‌ಬಾಬು, ಭಕ್ತಾಧಿಗಳಾದ ರಾಜೇಶ್, ಸತೀಶ್, ಅರುಣ್‌ ಪ್ರಕಾಶ್, ಜಯಣ್ಣ, ಉಮೇಶ್, ಚಂದ್ರೇಗೌಡ, ಜಗದೀಶ್ ಬಿಳೇಕಲ್ಲು, ಎಂ.ಎಸ್.ನಾಗರಾಜ್ ಪಾಲ್ಗೊಂಡಿದ್ದರು.17 ಕೆಸಿಕೆಎಂ 2ಚಿಕ್ಕಮಗಳೂರಿನ ದೊಡ್ಡಕುರುಬರಹಳ್ಳಿ ಸಮೀಪದ ಶ್ರೀ ಬಸವ ಮಂದಿರದಲ್ಲಿ ಮಕರ ಸಂಕ್ರಾಂತಿ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಗಣ ಪರ್ವ ಕಾರ್ಯಕ್ರಮ ನಡೆಯಿತು.