ಕಾನೂನು ಪ್ರಕಾರವೇ ಮಗು ದತ್ತು ಪಡೆದುಕೊಳ್ಳಿ

| Published : Nov 16 2024, 12:32 AM IST

ಸಾರಾಂಶ

ದತ್ತು ಪಡೆಯುವುದು ಎಂದರೆ ಅನಾಥ, ಪರಿತ್ಯಕ್ತ, ಒಪ್ಪಿಸಲ್ಪಟ್ಟ ಮಗುವಿಗೆ ಶಾಶ್ವತವಾಗಿ ಕುಟುಂಬ ವಾತಾವರಣ ಕಲ್ಪಿಸುವುದಾಗಿದೆ. ಮಕ್ಕಳ ಬಗ್ಗೆ ಯಾವುದೇ ವಿಷಯದ ಕುರಿತು ಮಾಹಿತಿ ಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು ಹಾಗೂ ಮಹಿಳೆಯರಿಗೆ ಸಂಬಂಧಿಸಿದಂತೆ 112/181 ಸಹಾಯವಾಣಿಗೆ ಕರೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ ರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದತ್ತು ಪಡೆಯುವುದು ಎಂದರೆ ಅನಾಥ, ಪರಿತ್ಯಕ್ತ, ಒಪ್ಪಿಸಲ್ಪಟ್ಟ ಮಗುವಿಗೆ ಶಾಶ್ವತವಾಗಿ ಕುಟುಂಬ ವಾತಾವರಣ ಕಲ್ಪಿಸುವುದಾಗಿದೆ. ಮಕ್ಕಳ ಬಗ್ಗೆ ಯಾವುದೇ ವಿಷಯದ ಕುರಿತು ಮಾಹಿತಿ ಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು ಹಾಗೂ ಮಹಿಳೆಯರಿಗೆ ಸಂಬಂಧಿಸಿದಂತೆ 112/181 ಸಹಾಯವಾಣಿಗೆ ಕರೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ ರೆಡ್ಡಿ ಹೇಳಿದರು.

ಬೆಂಗಳೂರು ಜಿಲ್ಲಾಡಳಿತ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೆಎಲ್‌ಇ 90.4 ಎಫ್‌.ಎಂ ರೇಡಿಯೋ ಕೇಂದ್ರ, ಕೆಎಲ್‌ಇ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ-25 ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕೆಎಲ್‌ಇ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ 2024ರ ಅಂಗವಾಗಿ ದತ್ತು ಅಧಿನಿಯಮ ಕಾಯ್ದೆ 2017ರ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಹಾಗೂ ರಾಜ್ಯ ದತ್ತು ಸಂಪನ್ಮೂಲ ಪ್ರಾಧಿಕಾರ ವತಿಯಿಂದ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ದತ್ತು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮತಿಯ ಗಲಭೆಯ ಕಾರಣದಿಂದ ದೌರ್ಜನಕ್ಕೆ ಒಳಗಾದವರು, ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನ್ಯತೆ ಹೊಂದಿದವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೋಳಗಾದವರು, ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲ ವರ್ಗದ ಜನರು, ರಕ್ಷಣಾಗೃಹ ಹಾಗೂ ಮನೋರೋಗಿಗಳ ಆಸ್ಪತ್ರೆ ಮುಂತಾವುಗಳಲ್ಲಿ ಅಭಿರಕ್ಷಣೆಯಲ್ಲಿ ಇರುವವರು ಕಾನೂನು ಸೇವೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಅಣ್ಣಪ್ಪ ಹೆಗಡೆ ಮಾತನಾಡಿ, ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅಂತರಾಷ್ಟ್ರೀಯ ದತ್ತು ಮಾಸವಾಗಿ ಆಚರಿಸಲಾಗುತ್ತಿದ್ದು 0-6 ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಲಾಗುತ್ತಿದೆ. ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ 126 ಮಕ್ಕಳನ್ನು ದತ್ತು ನೀಡಲಾಗಿದ್ದು, ಅದರಲ್ಲಿ ವಿದೇಶಿ ದಂಪತಿಗಳಿಗೆ ದತ್ತು ನೀಡಿದ ಮಕ್ಕಳ ಸಂಖ್ಯೆ, 13 ಹೀಗೆ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಒಟ್ಟು-139 ದತ್ತು ನೀಡಲಾಗಿದೆ ಎಂದರು.ಮಮತೆಯ ತೊಟ್ಟಿಲು ಕಾರ್ಯಕ್ರಮದ ಮಹತ್ವ ಏನೆಂದರೆ, ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಮಗುವನ್ನು ಬಿಸಾಡಿ ಹಿಂಸಿಸಬೇಡಿ, ಇಂತಹ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ಮಮತೆಯ ತೊಟ್ಟಿಲಿನಲ್ಲಿ ಇಡಬಹುದು ಹಾಗೂ ಮಕ್ಕಳನ್ನು ದತ್ತು ಪಡೆಯಲು ದಂಪತಿಗಳಿಗೆ ಕನಿಷ್ಠ 25 ವರ್ಷಗಳಾಗಿರಬೇಕು, ಕನಿಷ್ಠ ಎರಡು ವರ್ಷ ವೈವಾಹಿಕ ಜೀವನ ನಡಿಸಿರಬೇಕು. ಅನಧಿಕೃತವಾಗಿ/ಕಾನೂನು ಬಾಹಿರವಾಗಿ ಮಕ್ಕಳನ್ನು ಮಾರಾಟ ಮಾಡುವರಿಗೆ/ ಕೊಳ್ಳುವವರಿಗೂ ಬಾಲನ್ಯಾಯ ಕಾಯಿದೆ ಪ್ರಕಾರ 5 ವರ್ಷ ಕಠಿಣ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲಾಗುತ್ತಿದೆ ಎಂದು ಕಾಯಿದೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೆಎಲ್‌ಇ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ವಿರೇಶಕುಮಾರ ನಂದಗಾವಿ, ಕೆಎಲ್‌ಇ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಪ್ರೀತಿ ಭೂಪಾಲಿ, ಕಾರ್ಯಕ್ರಮದ ಸಂಯೋಜಕರಾದ ಮಜುನಾಥ ಬಳ್ಳಾರಿ, ಕೆಎಲ್‌ಇ 90.4 ಎಫ್‌ಎಂ ರೇಡಿಯೋ ಕೇಂದ್ರ ಕಾರ್ಯಕ್ರಮದ ನಿರ್ವಾಹಿಕಿಯಾದ ಮನಿಷಾ.ಪಿ, ಎನ್‌ಎಸ್‌ಎಸ್ ಘಟಕದ ವಿರುಪಾಕ್ಷ ಸವದಿ, ಮಕ್ಕಳ ಸಹಾಯವಾಣಿ-1098 ಸಂಯೋಜಕರಾದ ಮಲ್ಲಪ್ಪ ಕುಂದರಗಿ, ಅಸಾಂಸ್ಥಿಕ ಸೇವೆ ಮಕ್ಕಳ ರಕ್ಷಣಾಧಿಕಾರಿಗಳಾದ ಸಚಿನಕುಮಾರ ಹಿರೇಮಠ, ಆಪ್ತಸಮಾಲೋಚಕರಾದ ಮಹೇಶ ಸಂಗಾನಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಾದ ಶ್ರೀದೇವಿ ಗುಳ್ಳ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿರುವ ಯೋಜನೆ ಉಚಿತ ಕಾನೂನು ಸಲಹೆ ಪಡೆಯಲು ಅರ್ಹತೆಗಳ ಬಗ್ಗೆ ಹಾಗೂ ಪೋಕ್ಸೋ ಪ್ರಕರಣದ ಕುರಿತು ಮಾಹಿತಿ ಬಂದಲಿ ತಕ್ಷಣವೇ ಮಾಹಿತಿ ನೀಡಬೇಕು.

-ಮುರಳಿ ಮೋಹನ ರೆಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ.

ಜಿಲ್ಲೆಯಲ್ಲಿ ಎರಡು ದತ್ತು ಸ್ವೀಕಾರ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ. ಬೆಳಗಾವಿ ರಾಮತಿರ್ಥ ನಗರ ಸರ್ಕಾರಿ ವಿಶೇಷ ದತ್ತು ಕೇಂದ್ರ, ಸುಭಾಷ ನಗರ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರ, ದತ್ತು ಕಾರ್ಯಕ್ರಮದಲ್ಲಿ ಅನಾಥ, ಪರಿತ್ಯಕ್ತ, ಒಪ್ಪಿಸಲ್ಟಟ್ಟ ಮಕ್ಕಳು ಹೀಗೆ 3 ವರ್ಗಿಕರಣ ಮಾಡಲಾಗಿರುತ್ತದೆ.

-ಅಣ್ಣಪ್ಪ ಹೆಗಡೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.