ನಾರಾಯಣ ಗುರುಗಳ ಸಂದೇಶ ಅಳವಡಿಸಿದಾಗ ಕಾರ್ಯಸಿದ್ಧಿ: ಖಾದರ್‌

| Published : Jan 26 2025, 01:33 AM IST

ನಾರಾಯಣ ಗುರುಗಳ ಸಂದೇಶ ಅಳವಡಿಸಿದಾಗ ಕಾರ್ಯಸಿದ್ಧಿ: ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಬಲ್ಯೊಟ್ಟು ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮುಂಬೈ ಪೊವಾಯಿಯ ಶ್ರೀ ಕ್ಷೇತ್ರದ ಶ್ರೀ ಸುವರ್ಣ ಬಾಬ ಸ್ವಾಮೀಜಿ, ಬೆಳಗಾವಿ ಶ್ರೀ ಕ್ಷೇತ್ರ ನಿಪ್ಪಾಣಿ ಮಠದ ಪೀಠಾಧಿಪತಿ ಶ್ರೀ ಅರುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಂಘಟನೆಯಿಂದ ಬಲಯುತರಾಗಿ, ವಿದ್ಯಾರ್ಜನೆಯಿಂದ ಸ್ವತಂತ್ರರಾಗಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಸಮಾಜ ಅಳವಡಿಸಿಕೊಂಡಲ್ಲಿ ಯಾವುದೇ ಕಾರ್ಯಸಿದ್ಧಿಯಾಗಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಬಿಲ್ಲವ, ತೀಯಾ, ಆರ್ಯ ಈಡಿಗ ನಾಮದಾರಿಗಳ 26 ಪಂಗಡಗಳ ವಿಶ್ವ ಸಮ್ಮೇಳನ, ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಸುವರ್ಣ ಸಿರಿ ಕಾರ್ಯಕ್ರಮದ ‘ಸುವರ್ಣಾಕ್ಷರ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾಗತ ಸಮಿತಿಯ ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕು, ಕಾಂತರಾಜ್ ಆಯೋಗದ ವರದಿ ಜಾರಿಯಾಗಬೇಕು, ಬಿಲ್ಲವ ಅಭಿವೃದ್ದಿ ನಿಗಮ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು.

ವಿಶ್ವ ಸಮ್ಮೇಳನವನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಚೇಂಬರ್ಸ್ ಅಫ್ ಕಾಮರ್ಸ್‌ ಮುಂಬೈನ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಅವರಿಗೆ ಬಿಲ್ಲವ ರತ್ನಪ್ರಶಸ್ತಿ, ಉದ್ಯಮಿ ದಯಾನಂದ ಬೋಂಟ್ರಗೆ ಬಿಲ್ಲವ ಸುವರ್ಣ ರತ್ನ ಮತ್ತು ಬಿಲ್ಲವ ಫ್ಯಾಮಿಲಿ ದುಬೈನ ಎಸ್.ಕೆ. ಪೂಜಾರಿ ಅವರಿಗೆ ಬಿಲ್ಲವ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶ್ರೀ ಕ್ಷೇತ್ರ ಬಲ್ಯೊಟ್ಟು ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮುಂಬೈ ಪೊವಾಯಿಯ ಶ್ರೀ ಕ್ಷೇತ್ರದ ಶ್ರೀ ಸುವರ್ಣ ಬಾಬ ಸ್ವಾಮೀಜಿ, ಬೆಳಗಾವಿ ಶ್ರೀ ಕ್ಷೇತ್ರ ನಿಪ್ಪಾಣಿ ಮಠದ ಪೀಠಾಧಿಪತಿ ಶ್ರೀ ಅರುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಸಿಹಿತ್ಲು ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್, ಸಾಗರದ ಶಾಸಕ ಬೇಲೂರು ಗೋಪಾಲಕೃಷ್ಣ, ಮಾಜಿ ಸಚಿವ ವಿನಯಕುಮಾ‌ರ್ ಸೊರಕೆ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್, ಬಹು ಭಾಷಾ ನಟ ಸುಮನ್ ತಲ್ವಾರ್, ಶ್ರೀ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಟಪಾಡಿ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ ಮುಂಬ್ಯೆನ ಅಧ್ಯಕ್ಷ ಹರೀಶ್ ಜಿ. ಅಮೀನ್, ಬೆಂಗಳೂರು ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ವೇದಕುಮಾ‌ರ್, ಗುಜರಾತ್‌ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮಾಜಿ ಅಧ್ಯಕ್ಷ ಮನೋಜ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಗೋವಾ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಹಾಸ್ ಅಮೀನ್, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ದುಬೈ ಬಿಲ್ಲವ ಫ್ಯಾಮಿಲಿ ಅಧ್ಯಕ್ಷ ದೀಪಕ್ ಪೂಜಾರಿ, ಕತಾರ್‌ ಬಿಲ್ಲವ ಸಂಘದ ಅಧ್ಯಕ್ಷ ಸಂದೀಪ್ ಪೂಜಾರಿ, ಬಹರೈನ್‌ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸುವರ್ಣ, ಉದ್ಯಮಿ ಶಾರದಾ ಸೂರು ಕರ್ಕೇರ, ಸತೀಶ್ ಪೂಜಾರಿ, ಬಾಬು ಶಿವ ಪೂಜಾರಿ, ಅಚ್ಯುತ್ ಅಮೀನ್ ಕಲ್ಮಾಡಿ, ಎಸ್.ಕೆ. ಸಾಲ್ಯಾನ್ ಪದ್ಮರಾಜ್, ಶೇಖರ ಪೂಜಾರಿ ಪೂಣೆ, ನಾಗರಾಜ್, ವೆಂಕಟೇಶ್ ಶಿಂಧೆ, ನಾರಾಯಣ ಗುತ್ತೆದಾರ್‌ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಸ್ವಾಗತಿಸಿದರು. ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಹಾಸ ಬಳಂಜ ಮತ್ತು ಸ್ಮಿತೇಶ್ ಎಸ್. ಬಾರ್ಯ ನಿರೂಪಿಸಿದರು. ನರೇಶ್ ಕುಮಾ‌ರ್ ಸಸಿಹಿತ್ತು ವಂದಿಸಿದರು. ಸುವರ್ಣ ಸಿರಿ ಬೀಚ್‌ ಫೆಸ್ಟಿವಲ್‌ ಉದ್ಘಾಟನೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣಗುರುಗಳ ಜಾತ್ಯಾತೀತತೆಯ ಜಾಗೃತಿಯಿಂದ ಸಮಾಜ ಬೆಳೆದಿದ್ದು ಸಂಘಟನಾತ್ಮಕವಾಗಿ ಬೆಳೆಯುವಾಗ ಜಾತಿ ಮತ ಬೇಧವಿಲ್ಲದೆ ಸಮಾಜಮುಖಿಯಾಗಿ ಬೆಳೆಯಬೇಕೆಂದು ಮುಂಬೈ ಪೊವಾಯಿಯ ಶ್ರೀ ಕ್ಷೇತ್ರದ ಶ್ರೀ ಸುವರ್ಣ ಬಾಬಾ ಹೇಳಿದರು.

ಸಸಿಹಿತ್ಲು ಅಗ್ಗಿದ ಕಳಿಯ ಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣಮಹೋತ್ಸವದ ಅಂಗವಾಗಿ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಹಮ್ಮಿಕೊಂಡ ಸುವರ್ಣ ಸಿರಿ ಬೀಚ್‌ ಫೆಸ್ಟಿವಲ್‌ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ದೇವಾಡಿಗ ಸಮಾಜ ಸಂಘಟನೆಯ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರಿಗೆ ಸುವರ್ಣಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮ್ಮೇಳನದ ಸಂಚಾಲಕ ರಮೇಶ್ ಪೂಜಾರಿ ಚೇಳ್ಯಾರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಸಿಹಿತ್ತು ಶ್ರೀ ಭಗವತೀ ಕ್ಷೇತ್ರದ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಹರೀಶ್ ಪೂಜಾರಿ, ಉದ್ಯಮಿ ಧನಂಜಯ ಶೆಟ್ಟಿ, ಎಲ್.ವಿ. ಅಮೀನ್ ಮುಂಬೈ, ಮೀನಾಕ್ಷಿ ಶಿಂಧೆ ಥಾಣೆ, ಮನಪಾ ವಿಪಕ್ಷ ನಾಯಕ ಅನಿಲ್ ಪೂಜಾರಿ, ಮುಂಬೈ ತೀಯ ಸಮಾಜದ ಚಂದ್ರಶೇಖರ ಬೆಳ್ಳಡ, ರಾಜಶೇಖರ ಕೋಟ್ಯಾನ್, ಶಿವಮೊಗ್ಗದ ಬಿಲ್ಲವ ಸಂಘದ ಭುಜಂಗ ಕೆ., ಸಿ.ಬಿ. ಕರ್ಕೇರ, ಮನೋಜ್ ನಾಗ್‌ಪಾಲ್ ಮುಂಬೈ, ಸತ್ಯಜಿತ್ ಸುರತ್ಕಲ್, ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್., ಆರೋಗ್ಯ ಇಲಾಖೆಯ, ಉಲ್ಲಾಸ್ ರಂಗಯ್ಯ, ನಿಶ್ಚಲ್ ಶೆಟ್ಟಿ ವೈಷ್ಣವಿ ಕಾರ್ಗೋ, ಮಹಿಳಾ ಸಂಘದ ಸರೋಜಿನಿ ಶಾಂತಾರಾಜ್ ಮತ್ತಿತರರಿದ್ದರು. ನರೇಶ್ ಸಸಿಹಿತ್ಲು ಸ್ವಾಗತಿಸಿದರು, ಎಸ್.ಆರ್. ಪ್ರಭಾತ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಮತ್ತು ಪ್ರಜ್ಞಾ ಒಡಿಲಾಳ ಕಾರ್ಯಕ್ರಮ ನಿರೂಪಿಸಿದರು.