ಭಗೀರಥ ಮಹರ್ಷಿಗಳ ತತ್ವಾದರ್ಶ ಅಳವಡಿಸಿಕೊಳ್ಳಿ: ಗಿರೀಶ ಸ್ವಾದಿ

| Published : May 05 2025, 12:50 AM IST

ಭಗೀರಥ ಮಹರ್ಷಿಗಳ ತತ್ವಾದರ್ಶ ಅಳವಡಿಸಿಕೊಳ್ಳಿ: ಗಿರೀಶ ಸ್ವಾದಿ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ನಡೆದ ಮಹರ್ಷಿ ಭಗಿರಥ ಮಹಾರಾಜರ ಜಯಂತಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಅವರನ್ನು ನಾಳಿನ ಸತ್ಪ್ರಜೆಗಳನ್ನಾಗಿ ರೂಪಿಸಿ, ಭಗಿರಥ ಮಹರ್ಷಿಗಳ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಹಸೀಲ್ದಾರ ಗಿರೀಶ ಸ್ವಾದಿ ಹೇಳಿದರು.

ರಬಕವಿ-ಬನಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ನಡೆದ ಮಹರ್ಷಿ ಭಗಿರಥ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಛಲಬಿಡದ ಪ್ರಯತ್ನಕ್ಕೆ ಹೆಸರಾದ ಭಗೀರಥ ದೇವಗಂಗೆಯನ್ನೇ ಭೂಮಿಗೆ ತಂದವರು. ಗಂಗೆಯ ರಭಸದಿಂದ ಭೂಮಿಯನ್ನು ಸಂರಕ್ಷಿಸುವುದಕ್ಕಾಗಿ ಶಿವನನ್ನು ಪ್ರಾರ್ಥಿಸಿ, ಆತನನ್ನೂ ಒಲಿಸಿಕೊಂಡ ಭಗೀರಥನಿಂದಲೇ ಭೂಲೋಕದಲ್ಲಿಂದು ಪಾವನ ಗಂಗೆ ಹರಿಯುತ್ತಿದ್ದಾಳೆ, ಪಾಪನಾಶಿನಿಯಾಗಿ ಸಕಲ ಜೀವ ಜಂತುಗಳ ಕೊಳೆ ತೊಳೆದು ಪವಿತ್ರರನ್ನಾಗಿಸುತ್ತಿದ್ದಾಳೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇವೆಲ್ಲ ಪುರಾಣ ಕತೆಗಳೇ ಆಗಿದ್ದರೂ, ಛಲ ಬಿಡದ ಅವರ ಪ್ರಯತ್ನಕ್ಕೆ ಭಗೀರಥರ ನೆನಪು ಸದಾ ಹಸಿರಾಗಿರುತ್ತದೆ, ಸ್ಫೂರ್ತಿಯಾಗಿರುತ್ತದೆ ಎಂದು ಹೇಳಿದರು.

ಶಾಸಕ ಸಿದ್ದು ಸವದಿ, ಜಿಲ್ಲಾ ಅಧ್ಯಕ್ಷ ಭೀಮಸಿ ಪಾಟೀಲ, ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಭೀಮಸಿ ಸಸಾಲಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಪಿ.ಜಿ. ಕಾಖಂಡಕಿ, ಪರಪ್ಪ ಬ್ಯಾಕೋಡ, ಬಸವರಾಜ ಗೋಪಾಳಿ, ಬಸವರಾಜ ಶಿರೋಳ, ವಿಠ್ಠಲ ಹೆಗ್ಗನ್ನವರ, ಶಂಕರ ಪಾಟೀಲ, ಮಂಜುನಾಥ ಕೊಡಗನೂರ, ವಿಠ್ಠಲ ಕಾಖಂಡಕಿ, ವಿಠ್ಠಲ ಬ್ಯಾಕೋಡ, ರಾಯಪ್ಪ ಹೆಗ್ಗನ್ನವರ, ನಾಗರಾಜ ಕಾಡಾಪುರ, ಬಸವರಾಜ ಮುಲೋಡಿ, ಸುರೇಶ ಪಾಟೀಲ, ಹನಮಂತ ಕೊಡಗಾನೂರ, ಯಮನಪ್ಪ ಉಪ್ಪಾರ, ರಾಜು ಮೆಳವಣಕಿ, ಅರ್ಜುನ ಕಾಖಂಡಕಿ ಸೇರಿದಂತೆ ಅನೇಕರು ಇದ್ದರು.