ಸೇವಾಲಾಲ್ ಮಹಾರಾಜರ ತತ್ವಾದರ್ಶ ಅಳವಡಿಸಿಕೊಳ್ಳಿ: ಸೋಮಶೇಖರ ಬಿರಾದಾರ

| Published : Feb 02 2025, 11:45 PM IST

ಸೇವಾಲಾಲ್ ಮಹಾರಾಜರ ತತ್ವಾದರ್ಶ ಅಳವಡಿಸಿಕೊಳ್ಳಿ: ಸೋಮಶೇಖರ ಬಿರಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ನಾಗರಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕ

ಕನ್ನಡಪ್ರಭ ವಾರ್ತೆ ಹನುಮಸಾಗರ

ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ನಾಗರಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಹೇಳಿದರು.

ಸಮೀಪದ ಬಾದಿಮನಾಳ ಗ್ರಾಮದಲ್ಲಿ ವೆಂಕಟಾಪುರ ತಾಂಡಾದ ಬಂಜಾರ ಸಮುದಾಯದಿಂದ ಹಮ್ಮಿಕೊಂಡಿದ್ದ ಶ್ರೀ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ನೂತನ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಸೇವಾಲಾಲ್ ಮಹಾರಾಜರು ಎಲ್ಲಾ ಜನಾಂಗದವರಿಗೂ ಸನ್ಮಾರ್ಗದ ಬೋಧನೆ ಮಾಡಿದರು. ಅವರ ತತ್ವಾದರ್ಶಗಳನ್ನು ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಬೇಕು. ತಪ್ಪು ಕಾರ್ಯ ಮಾಡಿದರೆ ಶಿಕ್ಷಿಸಿ ತಿಳಿ ಹೇಳಿ. ಒಳ್ಳೆಯ ಕಾರ್ಯವನ್ನು ಅಭಿನಂದಿಸಬೇಕು. ಅಂದಾಗ ಮಾತ್ರ ನಿಮ್ಮ ಒಳ್ಳೆಯ ಮಗು ಸಂಸ್ಕಾರವಂತನಾಗಿ ಬೆಳೆಯಲು ಸಾಧ್ಯ ಎಂದರು.

ಬಾದಿಮನಾಳ ಗ್ರಾಮದ ಕನಕಗುರು ಪೀಠದಿಂದ ಸಸಿ, ಕುಂಭ, ಕಳಸ, ಭಜನೆ ಸೇರಿ ಸಕಲ ವಾದ್ಯ ವೈಭವದೊಂದಿಗೆ ಗೊರೆಬಿಹಾಳ ಕ್ರಾಸ್ ಮಾರ್ಗವಾಗಿ ವೆಂಕಟಾಪುರದ ಪ್ರಮುಖ ಬೀದಿಗಳಲ್ಲಿ ನೂತನ ಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ತಾಪಂ ಮಾಜಿ ಸದಸ್ಯ ಗಣೇಶ ಪೂಜಾರ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ ಠಾಕೂರ ನಾಯಕ್, ಗ್ರಾಪಂ ಸದಸ್ಯ ತುಕಾರಾಮ ಕಮತರ, ಪ್ರಮುಖರಾದ ಆನಂದ ನಾಯ್ಕ್, ದಂಜಪ್ಪ ಪೂಜಾರ, ದೇವಪ್ಪ ನಾಯ್ಕ್, ಪೀರಪ್ಪ ಕಮ್ಮಾರ, ಹನುಮಪ್ಪ ಜಾದವ, ಬದ್ದಪ್ಪ ಕಾರಬಾರಿ, ರಮೇಶ ಪಮ್ಮಾರ, ಕೃಷ್ಣಪ್ಪ ಕಮತರ, ಯಮನೇಶಪ್ಪ ರಾಡವ, ಠಾಕೂರ ನಾಯ್ಕ್, ಶಿವು ರಾಠೋಡ ಇತರರು ಇದ್ದರು.